More

    ಇಂಡಿಯನ್ ಕ್ರಾಫ್ಟ್ ಬಜಾರ್ ಪ್ರದರ್ಶನಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ

    ಬೆಳಗಾವಿ: ನಗರದ ಗೋವಾವೇಸ್ ಬಳಿ ಮಂಗಲ ಮೈದಾನದಲ್ಲಿ ಫೆ.8ರಿಂದ ಆರಂಭಗೊಂಡಿರುವ ಇಂಡಿಯನ್ ಕ್ರಾಫ್ಟ್ ಬಜಾರ್ ಪ್ರದರ್ಶನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂಬರುವ ಯುಗಾದಿ, ರಮಜಾನ್ ಮತ್ತು ಅಕ್ಷಯ ತೃತೀಯಾ ಹಿನ್ನೆಲೆಯಲ್ಲಿ 100ಕ್ಕೂ ಹೆಚ್ಚು ಮಳಿಗೆಗಳಲ್ಲಿ ದೇಶದ ವಿವಿಧ ಭಾಗಗಳ ಕೈಮಗ್ಗ ಮತ್ತು ಕರಕುಶಲ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಏರ್ಪಡಿಸಲಾಗಿದೆ.

    ಸಹರಾನಪುರ ಪೀಠೋಪಕರಣಗಳು, ರಾಜಸ್ಥಾನಿ ಬಳೆಗಳು, ಕಾರ್ಪೆಟ್‌ಗಳು, ಮಧುಬನಿ ಪೇಂಟಿಂಗ್‌ಗಳು, ಸತ್ರಂಜಿ, ಬನಾರಸಿ, ಚಂದೇರಿ ಸಿಲ್ಕ್ ಸೀರೆಗಳು, ಕಥ್ಯಾ ವರ್ಕ್ ಸೀರೆಗಳು, ಪಶ್ಚಿಮ ಬಂಗಾಳದ ಸೀರೆಗಳು, ಬೆಡ್ ಕವರ್‌ಗಳು, ದಿವಾನ್ ಸೆಟ್‌ಗಳು, ಕೇರಳ ಮತ್ತು ಬಾಂಬೆ ಫ್ಯಾನ್ಸಿ ಮೊಜ್ಡಿ, ಫ್ಯಾನ್ಸಿ ಚಪ್ಪಲ್ಸ್, ಲೆದರ್ ಬ್ಯಾಗ್‌ಗಳು, ಕಾಟನ್ ಬ್ಯಾಗ್‌ಗಳು, ಟಾಪ್‌ಗಳು, ಕಾಟನ್ ಶರ್ಟ್‌ಗಳು, ಟೀ ಶರ್ಟ್‌ಗಳು, ಪಂಜಾಬಿ ಸೂಟ್‌ಗಳು ಮತ್ತು ಫುಲಕರಿ ವಸ್ತುಗಳು, ಮಂಗಳಗಿರಿ ಡ್ರೆಸ್ ಮೆಟಿರಿಯಲ್, ಕಾಟನ್ ಸೀರೆಗಳ ಜತೆಗೆ ಕಾಶ್ಮೀರಿ ರೇಷ್ಮೆ ಸೀರೆಗಳು ಮತ್ತು ಸೂಟ್‌ಗಳು, ಅಲಂಕಾರಿಕ ವಸ್ತುಗಳು, ವಿವಿಧ ರೀತಿಯ ಪಿಂಗಾಣಿ ಭರಣಿಗಳು, ಹೂವಿನ ಕುಂಡಗಳು, ಬೋನ್ಸಾಯ್ ಸಸ್ಯ ಕುಂಡಗಳು, ಫಿರೋಜಾಬಾದ್ ಕೈಯಿಂದ ಮಾಡಿದ ಲ್ಯಾಂಪ್‌ಗಳು, ಜೋಧಪುರ ವರ್ಣಚಿತ್ರಗಳು, ಅಲಂಕಾರಿಕ ವಸ್ತುಗಳು, ಹೂವಿನ ಕುಂಡಗಳು, ಎಲ್ಲ ರೀತಿ ಪಾತ್ರೆಗಳು, ನಾಗಾಲ್ಯಾಂಡ್ ಒಣ ಹೂವುಗಳು, ಕುಂಬಾರಿಕೆ ಬೆಡ್ ಕವರ್‌ಗಳು, ಜೈಪುರಿ ಮತ್ತು ಝಾನ್ಸಿ ಬೆಡ್ ಶೀಟ್‌ಗಳು ಮತ್ತು ಇತ್ತೀಚಿನ ಜೋಧಪುರ ಕರಕುಶಲ ವಸ್ತುಗಳು, ಬ್ರಾಸ್ ವಾಲ್ ಹ್ಯಾಂಗಿಂಗ್ಸ್ ಇತ್ಯಾದಿ ವಸ್ತುಗಳ ಮೇಲೆ ಭಾರಿ ರಿಯಾಯಿತಿ ನೀಡಲಾಗುತ್ತಿದೆ. ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳಲ್ಲಿ ಖರೀದಿ ಮಾಡುವವರಿಗೆ ಶೇ.5 ರಿಯಾಯಿತಿ ನೀಡಲಾಗುತ್ತಿದೆ.

    ಎಲ್ಲರಿಗೂ ಉಚಿತ ಪ್ರವೇಶ ಮತ್ತು ಪಾರ್ಕಿಂಗ್ ಸೌಲಭ್ಯ ಲಭ್ಯವಿದೆ. ಪುಸ್ತಕಗಳ ಪ್ರದರ್ಶನವನ್ನೂ ಆಯೋಜಿಸಲಾಗಿದೆ. ಇಂಗ್ಲಿಷ್‌ನ ಅನೇಕ ಖ್ಯಾತ ಲೇಖಕರ ಪುಸ್ತಕಗಳಿಗೆ ತಲಾ 100 ರೂ. ಹಾಗೂ ಕೆಜಿಗೆ 200 ರೂ.ರಂತೆ ಮಾರಾಟ ಮಾಡಲಾಗುತ್ತಿದೆ. ಪುಸ್ತಕ ಪ್ರದರ್ಶನಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನು ಕೆಲ ದಿನಗಳ ಕಾಲ ಪ್ರದರ್ಶನ ನಡೆಯಲಿರುವುದರಿಂದ ನಾಗರಿಕರು ಸದುಪಯೋಗ ಪಡೆದುಕೊಳ್ಳುವಂತೆ ಸಂಘಟಕರು ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts