More

    ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲಿನ ನಿರ್ಬಂಧ ಗಡುವು​ ವಿಸ್ತರಣೆ!

    ಮುಂಬೈ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನ ಗ್ರಾಹಕರಿಗೆ ಆರ್​ಬಿಐ ಖುಷಿ ಸುದ್ದಿ ನೀಡಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ಆರ್​ಬಿಐ ನಿರ್ಬಂಧ ನಿಷೇಧದ ಗಡುವು ರಿಸರ್ವ್ ಬ್ಯಾಂಕ್ ವಿಸ್ತರಿಸಿದೆ.

    ಇದನ್ನೂ ಓದಿ:‘INDIA’ ಮೈತ್ರಿಕೂಟಕ್ಕೆ ಮತ್ತೊಂದು ಹಿನ್ನಡೆ! ಎನ್‌ಡಿಎ ಮೈತ್ರಿಕೂಟ ಸೇರ್ತಾರಾ ಫಾರೂಕ್ ಅಬ್ದುಲ್ಲಾ

    ನಿಷೇಧ ಜಾರಿಗೊಳಿಸುವ ಗಡುವು ಮೊದಲಿಗೆ ಇದೇ ತಿಂಗಳ ಫೆಬ್ರವರಿ 29ರವರೆಗೆ ಇತ್ತು. ಮುಂದಿನ ತಿಂಗಳು ಮಾರ್ಚ್ 15ಕ್ಕೆ ವಿಸ್ತರಿಸಲಾಗಿದೆ. 15 ದಿನಗಳ ಹೆಚ್ಚುವರಿ ಸಡಿಲಿಕೆ ನೀಡಲಾಗಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನಲ್ಲಿ ಅಕೌಂಟ್ ಹೊಂದಿರುವ ಗ್ರಾಹಕರು, ಅದರಲ್ಲೂ ವರ್ತಕರು, ಪೇಟಿಎಂ ವ್ಯಾಲಟ್ ಉಪಯೋಗಿಸುತ್ತಿರುವವರು, ಫಾಸ್​ಟ್ಯಾಗ್, ನ್ಯಾಷನಲ್ ಮೊಬಿಲಿಟಿ ಕಾರ್ಡ್ ಇತ್ಯಾದಿ ಬಳಸುತ್ತಿರುವವರು ತುಸು ನಿರಾಳರಾಗಬಹುದು. ಪೇಟಿಎಂ ಸಂಸ್ಥೆಗೂ ಈ ಡೆಡ್​ಲೈನ್ ಸ್ವಲ್ಪ ಉಸಿರಾಡಲು ಅವಕಾಶ ಕೊಡಬಹುದು.

    ಪೇಟಿಎಂ ಕಂಪನಿಗೂ ಈ ಈ ಗಡುವು ನಿರಾಳ ತಂದಿದೆ. ಫೆಬ್ರವರಿ 29ರ ನಂತರ ಪೇಟಿಎಂ ಪೇಮೆಂಟ್ಸ್​​ ಬ್ಯಾಂಕಿನಲ್ಲಿ ಹೊಸದಾಗಿ ಹಣ ಡೆಪಾಸಿಟ್​ ಮತ್ತು ಟ್ರಾನ್ಸಾಕ್ಷನ್ ಮಾಡುವಂತಿಲ್ಲ ಎಂದು ಜನವರಿ 31ರಂದು ಆರ್​ಬಿಐ ನಿರ್ಬಂಧ ಹೇರಿತ್ತು. ಆದರೀಗ ಈ ಸೇವೆಗಳನ್ನು ಮಾರ್ಚ್​ 15ರವರೆಗೂ ನಡೆಸಬಹುದು ಎಂದು ತಿಳಿಸಿದೆ.

    ಮಾರ್ಚ್ 15ರ ತನಕ ಪೇಟಿಎಂ ಗ್ರಾಹಕರು ತಮ್ಮ ವಾಲೆಟ್​ಗೆ ಹಣವನ್ನು ಜಮೆ ಮಾಡಬಹುದು. ಅಲ್ಲದೆ, ಫಾಸ್ಟ್ಯಾಗ್, ಹೊಸ ಡೆಪಾಸಿಟ್, ಟ್ರಾನ್ಸಾಕ್ಷನ್ ನಡೆಸಬಹುದು. ಆದರೆ ಮಾರ್ಚ್ 15ರ ನಂತರ ಎಲ್ಲವೂ ಸ್ಥಗಿತಗೊಳ್ಳಲಿದೆ. ನಿಮ್ಮ ಖಾತೆಯ ಹಣವನ್ನು ಪೂರ್ಣ ಮುಗಿಸಿಕೊಳ್ಳಿ ಎಂದು ಗ್ರಾಹಕರಿಗೆ ಆರ್​ಬಿಐ ಸೂಚಿಸಿದೆ.

    ಪೇಟಿಎಂ ಪೇಮೆಂಟ್ಸ್​ ಬ್ಯಾಂಕ್​ನಲ್ಲಿ ನಕಲಿ ಖಾತೆ, ಅಕ್ರಮಗಳು ಮತ್ತು ಅನುಮಾನ ಹುಟ್ಟಿಸುವ ವಹಿವಾಟುಗಳು ನಡೆದಿರುವುದು ಗೊತ್ತಾಗಿದೆ. ಕೆವೈಸಿ ಪರಿಶೀಲನೆಯಲ್ಲೂ ಸರಿಯಾದ ರೀತಿ ಅನುಕರಿಸಿಲ್ಲ. 1000ಕ್ಕೂ ಖಾತೆಗಳಿಗೆ ಒಂದು ಪಾನ್ ಕಾರ್ಡ್​ ಬಳಸಿರುವುದು ಸಹ ಗೊತ್ತಾಗಿದೆ. ಹೀಗಾಗಿ ಈ ಬಗ್ಗೆ ಪೇಟಿಎಂಗೆ ಆರ್​​ಬಿಐ ಎಚ್ಚರಿಕೆ ನೀಡಿತ್ತು. ಆದರೆ, ಪೇಟಿಎಂ ತಲೆಗೆ ಹಾಕಿಕೊಂಡಿರಲಿಲ್ಲ. ಸಂಸ್ಥೆಯ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಿದ ಆರ್​ಬಿಐ, ವಹಿವಾಟನ್ನೇ ನಿರ್ಬಂಧಿಸಿತು.

    ಪೇಟಿಎಂ ಪೇಮೆಂಟ್ಸ್ ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ಠೇವಣಿ ಹಣವನ್ನು ಹೇಗೆ ಹಿಂಪಡೆಯಬೇಂಬ ಗೊಂದಲ ಉಂಟಾಗಿದೆ. ಅಲ್ಲದೆ, ಹಲವು ಗೊಂದಲು ಸೃಷ್ಟಿಯಾಗಿವೆ. ಹಾಗಾಗಿ ಇದೆಲ್ಲದಕ್ಕೂ ಆರ್​ಬಿಐ ಉತ್ತರ ನೀಡಿದೆ. ಗ್ರಾಹಕರು ಪದೆಪದೇ ಕೇಳಲಾದ ಕೆಲವು ಪ್ರಶ್ನೆಗಳಿಗೆ ಸೂಕ್ತ ಉತ್ತರಗಳನ್ನೂ ಒದಗಿಸಿದೆ.

    ಪೇಟಿಎಂ ನಿರ್ಬಂಧ ಮಾಡಿದ್ದೇಕೆ?: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ಆರ್​ಬಿಐ ನಿರ್ಬಂಧ ಹೇರಿದ್ದು ದಿಢೀರ್ ನಿರ್ಧಾರ ಅಲ್ಲ. ಪೇಮೆಂಟ್ಸ್ ಬ್ಯಾಂಕ್​ನ ಕೆಲ ಖಾತೆಗಳ ಮಧ್ಯೆ ಅನುಮಾನ ಹುಟ್ಟಿಸುವ ವಹಿವಾಟುಗಳು ನಡೆದಿರುವುದು ಬೆಳಕಿಗೆ ಬಂದಿದೆ. ಪೇಮೆಂಟ್ಸ್ ಬ್ಯಾಂಕ್​ನಲ್ಲಿ ಖಾತೆ ತೆರೆಯುವಾಗ ಕೆವೈಸಿ ನಿಯಮಗಳನ್ನು ಸರಿಯಾಗಿ ಅನುಸರಿಸಲಾಗಿಲ್ಲ. ಹೀಗಾಗಿ, ವಹಿವಾಟಿನ ಜಾಡು ಹಿಡಿಯುವುದು ಕಷ್ಟವಾಗುತ್ತದೆ. ಈ ಬಗ್ಗೆ ಪೇಟಿಎಂ ಬ್ಯಾಂಕ್​ಗೆ ಆರ್​ಬಿಐ ಬಾರಿ ಬಾರಿ ಎಚ್ಚರಿಕೆಗಳನ್ನು ಕೊಟ್ಟಿತ್ತು. ಆದರೂ ಪೇಟಿಎಂ ಇದನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ. ಕೊನೆಯ ಅಸ್ತ್ರವಾಗಿ ಆರ್​ಬಿಐ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನ ವಹಿವಾಟನ್ನೇ ನಿರ್ಬಂಧಿಸುವ ಕ್ರಮ ಜರುಗಿಸಬೇಕಾಯಿತು ಎನ್ನಲಾಗಿದೆ.

    ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ ಒಟ್ಟು ಆಸ್ತಿ ಕೇಳಿದ್ರೆ ಶಾಕ್​ ಆಗ್ತೀರ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts