More

    ಆಸೀಸ್-ಕಿವೀಸ್ ಸರಣಿಯೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆರಂಭ?

    ಮೆಲ್ಬೋರ್ನ್: ಕೋವಿಡ್-19ರಿಂದಾಗಿ ಜಾಗತಿಕ ಕ್ರೀಡಾಲೋಕವೇ ತತ್ತರಿಸಿ ಹೋಗಿದೆ. ಕೆಲವೊಂದು ಪ್ರಮುಖ ಕ್ರೀಡಾಕೂಟಗಳು ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿವೆ. ಕ್ರಿಕೆಟ್ ಸರಣಿಗಳ ರದ್ದತಿಯಿಂದಾಗಿ ಕೆಲ ಕ್ರಿಕೆಟ್ ಸಂಸ್ಥೆಗಳು ದಿವಾಳಿಯಂಚಿನಲ್ಲಿವೆ. ಬಲಿಷ್ಠ ಕ್ರಿಕೆಟ್ ಮಂಡಳಿ ಎನಿಸಿಕೊಂಡಿರುವ ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ಇದಕ್ಕೆ ಹೊರತಾಗಿಲ್ಲ. ಆರ್ಥಿಕ ನಷ್ಟದಿಂದ ಹೊರ ಬರಲು ಯತ್ನಿಸುತ್ತಿರುವ ಕ್ರಿಕೆಟ್ ಆಸ್ಟ್ರೇಲಿಯಾ ಲಾಕ್‌ಡೌನ್ ನಡುವೆಯೂ ಸಾಂಪ್ರದಾಯಿಕ ಎದುರಾಳಿ ನ್ಯೂಜಿಲೆಂಡ್ ಎದುರು ಟ್ರಾನ್ಸ್-ಟಾಸ್ಮನ್ ಟ್ರೋಫಿ ಟೆಸ್ಟ್ ಸರಣಿಗೆ ವೇದಿಕೆ ರೂಪಿಸಿಕೊಳ್ಳುತ್ತಿದೆ. ಟೆಸ್ಟ್ ಸರಣಿ ಆಯೋಜಿಸಲು ಎರಡೂ ಸರ್ಕಾರಗಳು ಒಪ್ಪಿಗೆ ಸೂಚಿಸಿವೆ ಎನ್ನಲಾಗುತ್ತಿದೆ. ಇದರಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಆಸೀಸ್-ಕಿವೀಸ್ ಸರಣಿಯೊಂದಿಗೆ ಪುನರಾರಂಭ ಲಭಿಸುವ ನಿರೀಕ್ಷೆ ಹರಡಿದೆ.

    ಇದನ್ನೂ ಓದಿ: ಕ್ರಿಕೆಟ್‌ನಲ್ಲೂ ಇದ್ದಾರೆ ಫೆಡರರ್, ನಡಾಲ್!

    ಟೆಸ್ಟ್ ಸರಣಿ ಆಯೋಜನೆ ಸಂಬಂಧ ಉಭಯ ದೇಶಗಳ ಕ್ರಿಕೆಟ್ ಮಂಡಳಿ ಮುಖ್ಯಸ್ಥರು ಈಗಾಗಲೇ ಒಂದು ಸುತ್ತಿನ ಮಾತುಕತೆ ಮುಗಿಸಿದ್ದಾರೆ. ನ್ಯೂಜಿಲೆಂಡ್ ಕ್ರಿಕೆಟ್ ಮುಖ್ಯ ಕಾರ್ಯನಿರ್ವಾಹಕ ಡೇವಿಡ್ ವೈಟ್ ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾ ಕೆವಿನ್ ರಾಬರ್ಟ್ಸ್ ಸರಣಿ ಆಯೋಜನೆಗೆ ತುದಿಗಾಲಲ್ಲಿ ನಿಂತಿದ್ದಾರೆ. ‘ನಾನು ಕೆವಿನ್ ರಾಬರ್ಟ್ಸ್ ಜತೆ ಮಾತನಾಡಿರುವೆ. ಟಾಸ್ಮನ್ ಬಬಲ್ ಹೊಡೆದರೆ ಅದು ಭೀಕರವಾಗಿರುತ್ತದೆ. ಅಂಥ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಸದ್ಯದ ಪರಿಸ್ಥಿತಿಯಲ್ಲಿ ಕ್ರಿಕೆಟ್ ಸರಣಿ ಆಯೋಜಿಸುವ ಸಾಧ್ಯತೆ ಕುರಿತು ಚರ್ಚೆ ನಡೆಸಿದ್ದೇವೆ’ ಎಂದಿದ್ದಾರೆ.

    ಇದನ್ನೂಓದಿ: ‘ಇಂಡಿಯನ್’ ಪ್ರೀಮಿಯರ್ ಲೀಗ್‌ಗೆ ಚೆನ್ನೈಸೂಪರ್ ಕಿಂಗ್ಸ್ ವಿರೋಧ!

    ಸಂಕಷ್ಟದಲ್ಲಿ ಉಭಯ ಮಂಡಳಿಗಳು
    13ನೇ ಐಪಿಎಲ್ ಕೂಡ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದೆ. ಬಾಂಗ್ಲಾದೇಶ ಹಾಗೂ ಇಂಗ್ಲೆಂಡ್ ಪ್ರವಾಸಗಳು ನಡೆಯುವುದು ಅನುಮಾನವಾಗಿವೆ. ಇದರಿಂದಾಗಿ ಈ ಅವಧಿಯಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಯಾವುದೇ ಸರಣಿಗಳು ಇಲ್ಲದಂತಾಗಲಿದೆ. ಜತೆಗೆ ಮುಂದಿನ ಅಕ್ಟೋಬರ್-ನವೆಂಬರ್‌ನಲ್ಲಿ ನಿಗದಿಯಾಗಿರುವ ಟಿ20 ವಿಶ್ವಕಪ್ ನಡೆಯುವುದು ಸದ್ಯದ ಪರಿಸ್ಥಿತಿಯಲ್ಲಿ ಅನುಮಾನವಾಗಿದೆ. ಮತ್ತೊಂದೆಡೆ, ನ್ಯೂಜಿಲೆಂಡ್ ತಂಡ ತವರಿನಲ್ಲಿ ಪಾಕಿಸ್ತಾನ, ವೆಸ್ಟ್ ಇಂಗ್ಲೆಂಡ್ ನಡೆಯುವುದು ಅನುಮಾನವಾಗಿದೆ. ಲಾಕ್‌ಡೌನ್‌ನಿಂದಾಗಿ ಮಾರ್ಚ್ ತಿಂಗಳಲ್ಲಿ ಆಸೀಸ್-ಕಿವೀಸ್ ನಡುವಿನ 3 ಏಕದಿನ ಪಂದ್ಯಗಳ ಸರಣಿಯ ಒಂದು ಪಂದ್ಯವನ್ನು ಖಾಲಿ ಸ್ಟೇಡಿಯಂನಲ್ಲಿ ಆಯೋಜಿಸಲಾಗಿತ್ತು. ಇದೀಗ ಅದೇ ಮಾದರಿಯಲ್ಲಿ ಉಭಯ ತಂಡಗಳ ನಡುವೆ ಟೆಸ್ಟ್ ಸರಣಿ ನಡೆಯುವ ಸಾಧ್ಯತೆಗಳಿವೆ. 1985ರಲ್ಲಿ ಮೊದಲ ಬಾರಿಗೆ ಈ ಸರಣಿ ಆಯೋಜಿಸಲಾಗಿತ್ತು. ಆಸ್ಟ್ರೇಲಿಯಾ 11 ಬಾರಿ ಈ ಸರಣಿ ಗೆದ್ದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts