More

    ಆಶ್ರಯ ದಾಖಲಾತಿ ಕೊಡಲು ಡಿಸಿ ಸೂಚನೆ

    ಶೃಂಗೇರಿ: ಆಶ್ರಯ ನಿವೇಶನದ ಫಲಾನುಭವಿಗಳ ವಾಸದ ಜಾಗ ಅದಲು ಬದಲಾಗಿದ್ದರೆ ಅವರ ಅನುಭವದಂತೆ ದಾಖಲಿಸಿಕೊಡಬೇಕು. 94 ಸಿಯಲ್ಲಿ ಹಕ್ಕುಪತ್ರ ಪಡೆದವರು ಗ್ರಾಪಂಗೆ ಇ ಸ್ವತ್ತಿ್ತಾಗಿ ಅರ್ಜಿ ಸಲ್ಲಿಸಿದವರಿಗೆ ತುರ್ತಾಗಿ ಪರವಾನಗಿ ನೀಡಬೇಕು. ನನೆಗುದ್ದಿಗೆ ಬಿದ್ದ 146 ಫಲಾನುಭವಿಗಳಿಗೆ ಕೂಡಲೇ ಪಹಣಿ ನೀಡಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಸೂಚಿಸಿದರು.
    ತಾಲೂಕು ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಅಧಿಕಾರಿಗಳ ಹಾಗೂ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯಲ್ಲಿ ಮಾಹಿತಿ ಪಡೆದರು. ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎ.ಎಸ್.ನಯನಾ ಮಾತನಾಡಿ, ಮೆಣಸೆ ಗ್ರಾಪಂ ಸಂಪೇಕೊಳಲು ರೈತ ಕವೀಶ್ ಅವರು ಮನೆ ಪಕ್ಕದಲ್ಲಿ ತೋಟ ಮಾಡಿದ್ದಾರೆ. ಅರಣ್ಯ ಇಲಾಖೆಯವರು ಅನಾಮಧೇಯ ದೂರಿನ ಹಿನ್ನೆಲೆಯಲ್ಲಿ ಬೇಲಿ ತೆರವುಗೊಳಿಸಿದ್ದಾರೆ ಎಂದು ಆರೋಪಿಸಿದರು.ಕುದುರೆಮುಖ ಅಭಯಾರಣ್ಯದ ಒಳಗೆ ವಾಸಿಸುವ ಸಾಮಾನ್ಯ ಜನರಿಗೆ ಅವರ ಜಮೀನಿಗೆ ಪುನರ್ವಸತಿ ಯೋಜನೆಯಡಿ ನೀಡುವ ಹಣದ ಮೊತ್ತ ಅತ್ಯಂತ ಕಡಿಮೆ ಇದೆ. ಅಧಿಕಾರಿಗಳು ಆಯಾ ಕಾಲಕ್ಕೆ ದರಪಟ್ಟಿ ಮಾಡಿ ಪರಿಹಾರ ನೀಡಬೇಕು. ಅಲ್ಪಮೊತ್ತ ನೀಡಿದರೆ ಜನರು ಬದುಕುವುದು ಹೇಗೆ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ, ಅಭಯಾರಣ್ಯದ ಒಳಗಡೆ ವಾಸ ಮಾಡುವರಿಗೆ ಪುನರ್ವಸತಿ ಕಲ್ಪಿಸಲು ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
    ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ಎಸಿಎಫ್ ಚೇತನ್ ಗಸ್ತಿ, ತಹಸೀಲ್ದಾರ್ ಗೌರಮ್ಮ, ಶೃಂಗೇರಿ ಆರ್​ಎಫ್​ಒ ಅನಿಲ್ ಡಿಸೋಜಾ, ಎನ್.ಆರ್.ಪುರ ಆರ್​ಎಫ್​ಒ ಲೇಖಾರಾಜ್ ಮೀನಾ, ತಾಪಂ ಇಒ ಜಯರಾಂ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts