More

    ಆಲಿಕಲ್ಲು ಮಳೆಗೆ ನೆಲಕ್ಕಚಿದ ಬೆಳೆ, ದ್ರಾಕ್ಷಿ, ಬೀನ್ಸ್, ಟೊಮ್ಯಾಟೊ ನಾಶ

    ಗುಡಿಬಂಡೆ: ಕಳೆದೆರಡು ದಿನಗಳಿಂದ ಬೀಳುತ್ತಿರುವ ಗುಡುಗು, ಬಿರುಗಾಳಿ ಸಹಿತ ಮಳೆಗೆ ತಾಲೂಕಿನ ಕಸಬಾ ಹೋಬಳಿ ಹಾಗೂ ಸೊಮೇನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ದ್ರಾಕ್ಷಿ, ಈರುಳ್ಳಿ, ಬೀನ್ಸ್, ಟೊಮ್ಯಾಟೊ, ಮಾವು ಸೇರಿ ಬಹುತೇಕ ಬೆಳೆಗಳು ಹಾನಿಗೀಡಾಗಿವೆ. ಬೆಲೆ ಕುಸಿತದ ನಷ್ಟದಲ್ಲಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

    ಆಲೀಕಲ್ಲು ಮಳೆಗೆ ಸುಮಾರು 15ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ದ್ರಾಕ್ಷಿ, ಬೀನ್ಸ್, ಟಮೋಟೊ, ಮಾವು ನೆಲಕಚ್ಚಿದ್ದು, ಉತ್ತಮ ಸಲಿನ ನಿರೀಕ್ಷೆಯಲ್ಲಿದ್ದ ರೈತರನ್ನು ಕಂಗಾಲಾಗಿಸಿದೆ. ಮಿಂಚು ಮತ್ತು ಗುಡುಗಿಗೆ ಟ್ರಾನ್‌ಸ್ಾರ್ಮ್‌ಗಳು ಸುಟ್ಟಿವೆ. ಕೆಲವೆಡೆ ಮರಗಳ ಧರಾಶಾಹಿಯಾಗಿದ್ದರಿಂದ ವಿದ್ಯುತ್ ಕಂಬಗಳೂ ನೆಲಕ್ಕುರುಳಿವೆ.

    ಬರಗಾಲ ಹಾಗೂ ಅಂತರ್ಜಲಮಟ್ಟ ಕುಸಿತವಾಗಿರುವ ಬಯಲು ಸೀಮೆಯ ಈ ಪ್ರದೇಶದಲ್ಲಿ ಇರುವ ಅಲ್ಪಸ್ವಲ್ಪ ನೀರಿನಲ್ಲೇ ಕಷ್ಟಪಟ್ಟು ಬೆಳೆದ ಬೆಳೆ ಸಲಿಗೆ ಬಂದಿರುವ ಸಂದರ್ಭದಲ್ಲಿ ವರುಣನ ಆರ್ಭಟ ಶುರುವಾಗಿದ್ದು, ಅನ್ನದಾತನ ಶ್ರಮ ಮಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದೆ.

    ಅಕಾಲಿಕ ಮಳೆಯಿಂದಾಗಿ ಟೊಮ್ಯಾಟೋ ಸಲು ನೆಲಕ್ಕಚಿದೆ. ಒಂದು ಎಕರೆ ಪ್ರದೇಶದಲ್ಲಿ ಹಾಕಿದ್ದ ಪಾಲಿಹೌಸ್ ಸಹ ಗಾಳಿಗೆ ಹಾರಿದೆ. ಮಾಹಿತಿ ನೀಡಿದರೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ.
    ಅರುಣ್‌ರೆಡ್ಡಿ, ರೈತ ಬೋಗೇನಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts