More

    ಆರ್ಥಿಕತೆಗೆ ರಾಜ್ಯದ ಕೊಡುಗೆ ಅಪಾರ

    ಬೆಳಗಾವಿ: ದೇಶದ ಆರ್ಥಿಕತೆ ಪ್ರಪಂಚದಲ್ಲಿ ತೀವ್ರಗತಿಯಲ್ಲಿ ಬೆಳೆಯುತ್ತಿದೆ. ಅದಕ್ಕೆ ಕರ್ನಾಟಕದ ಕೊಡುಗೆ ಅಪಾರವಾಗಿದೆ. ಅದನ್ನು ಇನ್ನು ಉತ್ತಮಪಡಿಸಲು ರಾಜ್ಯದಲ್ಲಿ ಬಿಜೆಪಿ ಸರ್ಕಾರಕ್ಕೆ ಮತ್ತೊಮ್ಮೆ ಅವಕಾಶ ಮಾಡಿಕೊಡಬೇಕು ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೋಪಾಲಕೃಷ್ಣ ಅಗರವಾಲ್ ಮನವಿ ಮಾಡಿದರು.

    ನಗರದಲ್ಲಿ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರ ಜಿ20 ಶೃಂಗಸಭೆ ಅಧ್ಯಕ್ಷ ಸ್ಥಾನ ಮೊದಲ ಬಾರಿಗೆ ನಮ್ಮ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ದೊರೆತಿದೆ. ಇದರಿಂದ ಪ್ರಪಂಚದ ಅರ್ಥಿಕತೆಯಲ್ಲಿ ಭಾರತಕ್ಕೆ ಉತ್ತಮ ಸ್ಥಾನಮಾನ ದೊರೆಯುತ್ತಿದೆ. ಅದಕ್ಕೆ ಕರ್ನಾಟಕ ರಾಜ್ಯದ ಕೊಡುಗೆ ಅತ್ಯಂತ ಮಹತ್ವಪೂರ್ಣದ್ದಾಗಿದೆ. ಕೇಂದ್ರ ಸರ್ಕಾರದ ಜನಕಲ್ಯಾಣ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಅವಶ್ಯಕವಾಗಿದ್ದು, ಹೀಗಾಗಿ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದರು.

    ರಾಜ್ಯದಲ್ಲಿ ಕಿಸಾನ್ ಸಮ್ಮಾನ್ ಯೋಜನೆ ಶೇ.94 ಜಾರಿಯಾದರೆ ಕೇರಳದಂತಹ ರಾಜ್ಯದಲ್ಲಿ ಕೇವಲ ಶೇ.56 ಜಾರಿಗೆ ಬಂದಿದೆ. ಕೇರಳ ಸರ್ಕಾರ ಕೇಂದ್ರ ಸರ್ಕಾರದ ಜತೆ ಸರಿಯಾದ ಹೊಂದಾಣಿಕೆ ಇಲ್ಲದೆ ಜನಸಾಮಾನ್ಯರಿಗೆ ಅನ್ಯಾಯ ಎಸಗುತ್ತಿದೆ. ಆದರೂ ಡಬಲ್ ಇಂಜಿನ್ ಸರ್ಕಾರದ ಮಹತ್ವ ಜನಸಾಮಾನ್ಯರಿಗೆ ಅರ್ಥವಾಗುತ್ತಿದೆ.

    ಪ್ರತಿ ರಾಜ್ಯದಲ್ಲಿ ಹರ ಘರ್ ಜಲ್ ಯೋಜನೆ ಜಾರಿಯಾಗಿರುವುದರಿಂದ ದೇಶದ ಜನತೆ ಅತ್ಯಂತ ಖುಷಿಯಾಗಿದ್ದಾರೆ. ಆದರೆ, ಈ ಯೋಜನೆಯ ಜಾರಿಗೆ ಪಶ್ಚಿಮ ಬಂಗಾಳದಲ್ಲಿ ಅಸಡ್ಡೆ ತೋರಲಾಗಿದೆ. ಅದೇ ಕರ್ನಾಟಕದಲ್ಲಿ ಡಬಲ್ ಇಂಜಿನ್ ಸರ್ಕಾರದ ದೂರದೃಷ್ಟಿಯಿಂದಾಗಿ ರಾಜ್ಯವು ಪ್ರಪಂಚದ 4ನೇ ದೊಡ್ಡ ಸಾಫ್ಟ್ ವೇರ್ ಕೇಂದ್ರವಾಗಿದೆ. ರಾಜ್ಯದ ಆರ್ಥಿಕಾಭಿವೃದ್ಧಿ ಇನ್ನಷ್ಟು ಶಕ್ತಿ ತುಂಬಲು ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದರು. ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಕೇಂದ್ರದ ಅನುದಾನ ಕೇವಲ ಶೇ.15 ಮಾತ್ರ ಫಲಾನುಭವಿಗಳಿಗೆ ತಲುಪತ್ತಿತ್ತು ಎನ್ನುವುದನ್ನು ಅಂದಿನ ಕಾಂಗ್ರೆಸ್ ಪ್ರಧಾನಿ ಅವರೇ ಹೇಳಿದ್ದಾರೆ. ಆದರೆ, ಪ್ರಸ್ತುತ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತದಲ್ಲಿ 100ಕ್ಕೆ 100 ಹಣ ಪಲಾನುಭವಿಗಳಿಗೆ ತಲುಪುತ್ತಿದೆ. ಹಾಗಾಗಿ, ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದರು. ಬಿಜೆಪಿ ರಾಜ್ಯ ವಕ್ತಾರ ಎಂ.ಬಿ.ಝಿರಲಿ, ರಾಜ್ಯ ಮಾಧ್ಯಮ ಸಲಹೆಗಾರ ಆನಂದ ಗುರುಮೂರ್ತಿ, ಶಾಸಕ ಅನಿಲ ಬೆನಕೆ, ಶರತ್ ಪಾಟೀಲ, ಸಿದ್ದನಗೌಡ ಪಾಟೀಲ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts