More

    ಆರು ತಿಂಗಳ ನಂತರ ಕೊಲೆಗಾರರ ಪತ್ತೆ

    ಅಫಜಲಪುರ: 50 ಸಾವಿರ ರೂಪಾಯಿಗಳಿಗಾಗಿ ಸ್ನೇಹಿತನನ್ನು ಕೊಲೆ ಮಾಡಿದವರನ್ನು ಕೊನೆಗೂ ಪೊಲೀಸರು ಪತ್ತೆ ಹಚ್ಚಿದ್ದಾರೆ. ಇದಕ್ಕೆ ಅವರು ತೆಗೆದುಕೊಂಡ ಸಮಯ ಬರೋಬ್ಬರಿ ಆರು ತಿಂಗಳು.
    ಕೊಲೆಯಾದವನ ಹೆಸರು ಲಿಂಬಾಜಿ. ಕೊಲೆ ಮಾಡಿದ ಸಿದ್ದಪ್ಪ, ಅಂಬರೀಶ್ ಮತ್ತು ಶರಣು ಪೊಲೀಸ್ ವಶದಲ್ಲಿದ್ದಾರೆ. ಮೃತ ಲಿಂಬಾಜಿ ತಾನಾಯ್ತು, ತನ್ನ ಕೆಲಸವಾಯ್ತು ಎನ್ನುವಂತೆ ಕುಟುಂಬ ಸದಸ್ಯರ ಜತೆ ನೆಮ್ಮದಿ ಜೀವನ ಸಾಗಿಸುತ್ತಿದ್ದ. ಹಾಗಿದ್ದವನು ಸೆ.1ರಂದು ಮನೆಯಿಂದ ಹೊರಹೋದವನು ವಾಪಸ್ ಬರಲೇ ಇಲ್ಲ. ಗಾಬರಿಯಾದ ಮಡದಿ ಗಂಡನ ಹುಡುಕಾಟ ನಡೆಸಿದರೂ ಫಲ ನೀಡಲಿಲ್ಲ. ದಾರಿ ಕಾಣದೆ ಗಂಡನನ್ನು ಹುಡುಕಿಕೊಡಿ ಎಂದು ಪೊಲೀಸರಿಗೆ ದೂರು ನೀಡಿದಳು.
    ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಕಣ್ಮರೆಯಾದವನ ಪತ್ತೆ ಕಾರ್ಯ ಶುರು ಮಾಡಿದರು. ಕಳವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಪ್ಪ, ಅಂಬರೀಶ್ ಮತ್ತು ಶರಣು ಎಂಬುವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಲಿಂಬಾಜಿಯನ್ನು ಕೊಲೆ ಮಾಡಿದ್ದು ಬಯಲಿಗೆ ಬಂದಿತು.
    ಎಸ್ಪಿ ಡಾ.ಸೀಮಿ ಮರಿಯಮ್ ಜಾರ್ಜ್​ , ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ, ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ, ಸಿಪಿಐ ಜಗದೇವಪ್ಪ ಅವರ ಮಾರ್ಗದರ್ಶನದಲ್ಲಿ ಪಿಎಸ್ಐಗಳಾದ ವಿಶ್ವನಾಥ ಮುದರೆಡ್ಡಿ, ಸುರೇಶ ಬಾಬು, ರಾಜಶೇಖರ ಅವರ ನೇತೃತ್ವದಲ್ಲಿ ತಂಡ ರಚಿಸಿ ಆರೋಪಿಗಳಾದ ಸಿದ್ದರಾಮ, ಅಂಬರೀಶ, ಶರಣು ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಂಡದಲ್ಲಿ ಸಿಬ್ಬಂದಿ ಸುರೇಶ, ಯಲ್ಲಪ್ಪ ಉಡಗಿ, ಸಂತೋಷ, ಗುಂಡಯ್ಯ, ತುಳಜಪ್ಪ, ಚಿದಾನಂದ, ಪಂಡಿತ, ಭಾಗಣ್ಣ, ಆದಿಗೊಂಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts