More

    ಆಯುಷ್ಮಾನ್​ಗೆ ಹೆಸರು ನೋಂದಾಯಿಸಿ: ಆರೋಗ್ಯ ಮೇಳದಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್​ ಮನವಿ

    ತುಮಕೂರು: ಆಯುಷ್ಮಾನ್​ ಭಾರತ್​&ಆರೋಗ್ಯ ಕರ್ನಾಟಕ ಯೋಜನೆಯ ಸದುಪಯೋಗ ಪಡೆಯಲು ಪ್ರತಿಯೊಬ್ಬ ನಾಗರಿಕನೂ ಆಯುಷ್ಮಾನ್​ ಯೋಜನೆಗೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್​ ಮನವಿ ಮಾಡಿದರು.
    ಜಿಲ್ಲಾಡಳಿತದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ನಗರದ ಸರ್ಕಾರಿ ಎಂಪ್ರೆಸ್​ ಬಾಲಕಿಯರ ಪ್ರೌಢಶಾಲಾ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಆರೋಗ್ಯ ಮೇಳ ಉದ್ಘಾಟಿಸಿ ಮಾತನಾಡಿದರು.

    ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ಆಯುಷ್ಮಾನ್​&ಭಾರತ್​ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಪ್ರತಿಯೊಬ್ಬ ನಾಗರೀಕನೂ ಯೋಜನೆಗೆ ನೋಂದಾಯಿಸಿಕೊಳ್ಳಬೇಕು ಎಂದರು.

    ಡಿಜಿಟಲೀಕರಣ ಹೆಚ್ಚಾಗಿರುವ ಕಾರಣ ಎಲ್ಲ ನಾಗರೀಕರಿಗೂ ಡಿಜಿಟಲ್​ ಆರೋಗ್ಯ ಗುರುತಿನ ಐಡಿ ಕಾರ್ಡ್​ ಮಾಡಿಕೊಡಲಾಗುತ್ತದೆ. ಈ ಕಾರ್ಯಕ್ರಮ ದೇಶಾದ್ಯಂತ ಚಾಲನೆಯಲ್ಲಿದೆ. ಸರ್ಕಾರದ ಈ ಯೋಜನೆಯು ಉತ್ತಮ ರೀತಿಯಲ್ಲಿ ಬಳಕೆಯಾಗುವ ಮೂಲಕ ಆಯುಷ್ಮಾನ್​ ಕಾರ್ಡ್​ ಎಲ್ಲರಿಗೂ ತಲುಪಬೇಕು ಎಂದರು.

    ಜಿಲ್ಲಾಧಿಕಾರಿ ವೈ.ಎಸ್​.ಪಾಟೀಲ ಮಾತನಾಡಿ, ಕಳೆದ ಎರಡು ವರ್ಷಗಳ ಕೋವಿಡ್​ ಸಂಕಷ್ಟ ಸಂದರ್ಭದಲ್ಲಿ ಜಿಲ್ಲೆಯ ಪ್ರತಿಯೊಂದು ಇಲಾಖೆಗಳು ಬಹಳ ಜಾಗರೂಕತೆಯಿಂದ ಕೆಲಸ ನಿರ್ವಹಿಸಿದ್ದು, ಆಶಾ ಕಾರ್ಯಕರ್ತೆಯರು ಹಾಗೂ ವೈದ್ಯರ ಜವಾಬ್ದಾರಿ ಶ್ಲಾನೀಯ ಎಂದರು.

    ಸರ್ಕಾರದ ನಿರ್ದೇಶನದಂತೆ ಜಿಲ್ಲೆಯ ಎಲ್ಲ ತಾಲೂಕು ಹಂತದಲ್ಲಿಯೂ ಆರೋಗ್ಯ ಮೇಳ ಆಯೋಜಿಸಲಾಗುತ್ತಿದೆ. ಗ್ರಾಮೀಣ ಮಹಿಳೆಯರಲ್ಲಿ ಹೆಚ್ಚಾಗಿ ಸ್ತನ ಕ್ಯಾನ್ಸರ್​ ಕಾಣಿಸಿಕೊಳ್ಳುತ್ತಿರುವುದರಿಂದ ಆರೋಗ್ಯದ ಕಡೆ ಗಮನಹರಿಸುವ ಮೂಲಕ ಆರೋಗ್ಯ ಮೇಳದ ಅನುಕೂಲ ಪಡೆಯಿರಿ ಎಂದು ಸಲಹೆ ನೀಡಿದರು.

    ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗೇಂದ್ರಪ್ಪ, ಜಿಲ್ಲಾ ಶಸಚಿಕಿತ್ಸಕ ಡಾ.ವೀರಭದ್ರಯ್ಯ, ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಪ್ರಾಚಾಯೆರ್ ಡಾ.ರಜನಿ, ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್​.ಆರ್​.ಲಕ್ಷಿ$್ಮಕಾಂತ್​, ಉಪವಿಭಾಗಾಧಿಕಾರಿ ವಿ.ಅಜಯ್​ ಇದ್ದರು.

    ಯೋಗಾಭ್ಯಾಸ, ರಕ್ತದಾನ ಶಿಬಿರ: ಆರೋಗ್ಯ ಮೇಳದಲ್ಲಿ ಸಾರ್ವಜನಿಕರಿಗೆ ಆರೋಗ್ಯ ಮತ್ತು ೇಮ ಕೇಂದ್ರಗಳ ಮೂಲಕ ಆಯಷ್ಮಾನ್​ ಭಾರತ್​ ಆರೋಗ್ಯ ಕರ್ನಾಟಕ ಕಾರ್ಡ್​ಗಳ ವಿತರಣೆ, ಡಿಜಿಟಲ್​ ಆರೋಗ್ಯ ಹೆಲ್ತ್​ ಗುರುತಿನ ಕಾರ್ಡ್​ ವಿತರಣೆ, ಸಾಂಕ್ರಾಮಿಕ ಹಾಗೂ ಅಸಾಂಕ್ರಾಮಿಕ ರೋಗಗಳ ಪತ್ತೆ ಹಚ್ಚುವಿಕೆ ಮತ್ತು ಚಿಕಿತ್ಸೆ ನೀಡುವಿಕೆ ಲಭ್ಯವಿತ್ತು. 25 ಕೌಂಟರ್​ಗಳಲ್ಲಿ ಅಲೋಪಥಿ ಮತ್ತು ಆಯುರ್ವೇದಿಕ್​ ಸೇವೆ ಮತ್ತು ಔಷಧ ವಿತರಣೆ, ಮಧುಮೇಹ, ರಕ್ತದೊತ್ತಡ, ಬಾಯಿ ಕ್ಯಾನ್ಸರ್​, ಸ್ತನ ಕ್ಯಾನ್ಸರ್​, ಗರ್ಭಕಂಠದ ಕ್ಯಾನ್ಸರ್​ ತಪಾಸಣೆ, ಕುಟುಂಬ ಕಲ್ಯಾಣ, ಕಣ್ಣಿನ ಪೊರೆ, ದಂತ ತಪಾಸಣೆ, ಕಿವಿ ತಪಾಸಣೆ, ಚರ್ಮದ ತಪಾಸಣೆ, ಧೂಮಪಾನ ಮತ್ತು ತಂಬಾಕು ಸೇವನೆಯ ಕೆಟ್ಟ ಪರಿಣಾಮಗಳ ಬಗ್ಗೆ, ವೈಯಕ್ತಿಕ, ಪರಿಸರ ನೈರ್ಮಲ್ಯ ಕುರಿತಂತೆ ಆಪ್ತ ಸಮಾಲೋಚನೆ ಮಾಡುವ ಮೂಲಕ ಜಾಗೃತಿ ಮೂಡಿಸಲಾಯಿತು. ಯೋಗಾಭ್ಯಾಸ ಹಾಗೂ ರಕ್ತದಾನ ಶಿಬಿರ ಕೂಡ ಇತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts