More

    ಆಯನೂರು: ಮೆಸ್ಕಾಂ ಅದಾಲತ್‌ನಲ್ಲಿ ದೂರುಗಳ ಸುರಿಮಳೆ

    ಆಯನೂರು: ವಿದ್ಯುತ್ ಕಂಬಗಳ ನಡುವಿನ ಅಂತರ ಹೆಚ್ಚಾಗಿದ್ದು ತಂತಿಗಳು ತುಂಡಾಗಿ ಬೀಳುತ್ತಿವೆ, ಗ್ರಾಮದಲ್ಲಿ ಮನೆಗಳ ಮೇಲೆ ಹಾದು ಹೋಗಿರುವ ಲೈನ್‌ಗಳ ತೆರವುಗೊಳಿಸಿ, ಅಸಮರ್ಪಕ ವಿದ್ಯುತ್ ಪೂರೈಕೆಯಿಂದಾಗಿ ಮೋಟಾರ್‌ಗಳು ಹಾಳಾಗುತ್ತಿದ್ದು ಟಿಸಿಗಳು ಸುಟ್ಟು ಹೋಗುತ್ತಿವೆ..
    ಹೀಗೆ ಸಾಲು ಸಾಲು ದೂರುಗಳು ಶನಿವಾರ ಆಯನೂರು ಸಮೀಪದ ಚೆನ್ನಳ್ಳಿಯಲ್ಲಿ ಮೆಸ್ಕಾಂ ಆಯೋಜಿಸಿದ್ದ ವಿದ್ಯುತ್ ಅದಾಲತ್‌ನಲ್ಲಿ ಕೇಳಿಬಂದವು.
    ಆಯನೂರಿನಲ್ಲಿ ನಿರ್ಮಾಣವಾಗುತ್ತಿರುವ ವಿದ್ಯುತ್ ವಿತರಣಾ ಕೇಂದ್ರದ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ, ವೋಲ್ಟೇಜ್ ಸಮಸ್ಯೆ ಬಹುವಾಗಿ ಕಾಡುತ್ತಿದೆ. ಗ್ರಾಮಕ್ಕೆ ಎಳೆದಿರುವ ಲೈನ್‌ಗಳು ಬ್ರಿಟಿಷರ ಕಾಲದ್ದಾಗಿದ್ದು ತುಂಡಾಗಿ ಬೀಳುತ್ತಿವೆ, ಲೈನ್‌ಮನ್‌ಗಳ ಕೊರತೆಯಿದೆ, ಹೊಸದಾಗಿ ಕಂಬಗಳನ್ನು ಹಾಕುವಂತೆ ಗ್ರಾಮಸ್ಥರು ಅಧಿಕಾರಿಗಳ ಗಮನಕ್ಕೆ ತಂದರು.
    ದೂರುಗಳನ್ನು ಆಲಿಸಿದ ಎಇಇ ಯಶವಂತ ನಾಯ್ಕ, ಆಯನೂರಿನಲ್ಲಿ ಸ್ಥಳೀಯ ಗ್ರಾಪಂನಿಂದಾಗಿ ವಿದ್ಯುತ್ ವಿತರಣಾ ಕೇಂದ್ರದ ಕಾಮಗಾರಿಗೆ ಸಮಸ್ಯೆ ಎದುರಾಗಿದ್ದು ಮೇಲಧಿಕಾರಿಗಳು ಹಾಗೂ ಶಾಸಕರ ಗಮನಕ್ಕೆ ತರಲಾಗಿದೆ ಎಂದರು.
    ಟವರ್ ವಿಷಯವಾಗಿ ಗ್ರಾಪಂ ಹಾಗೂ ಅರಣ್ಯ ಇಲಾಖೆ ಜತೆ ಮಾತುಕತೆ ನಡೆಸಲಾಗಿದೆ. ಹೀಗಾಗಿ ಟವರ್ ಕಾಮಗಾರಿ ನಿಲ್ಲಿಸಲಾಗಿದೆ. ರೈತರಿಗೆ 10 ಎಚ್‌ಪಿವರೆಗೆ ಸರ್ಕಾರ ಉಚಿತವಾಗಿ ವಿದ್ಯುತ್ ನೀಡುತ್ತಿದೆ. ಬೋರಿನಿಂದ ಕನಿಷ್ಠ 3 ಮೀಟರ್ ದೂರದಲ್ಲಿ ವಿದ್ಯುತ್ ಕಂಬ ಇರಬೇಕು. ಮೂರು ಜನ ಸೇರಿಕೊಂಡು ನಿಗದಿತ ಹಣ ಪಾವತಿಸಿ ಟಿಸಿಗಳನ್ನು ಹಾಕಿಸಿಕೊಳ್ಳಿ. ಅಕ್ರಮ-ಸಕ್ರಮ ಯೋಜನೆ ಈಗ ಇಲ್ಲ ಎಂದು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿ, ದೂರುಗಳಿಗೆ ಪರಿಹಾರ ಒದಗಿಸುವುದಾಗಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts