More

    ಆನೆ ದಾಳಿಯಿಂದ ಮೃತಪಟ್ಟವರಿಗಿಲ್ಲ ಸೂಕ್ತ ಪರಿಹಾರ

    ಶಾಸಕ ಕೆ.ಎಸ್.ಲಿಂಗೇಶ್ ಬೇಸರ


    ಬೇಲೂರು: ಕೋಮು ದಳ್ಳುರಿಯಲ್ಲಿ ಮೃತಪಟ್ಟವರಿಗೆ 25 ಲಕ್ಷ ರೂ. ನೀಡುನ ಸರ್ಕಾರ, ಕಾಫಿ ತೋಟದಲ್ಲಿ ಬೆಳೆಗಾರ ಅಥವಾ ಕೂಲಿ ಕಾರ್ಮಿಕ ಆನೆ ತುಳಿತದಿಂದ ಸತ್ತರೆ ಅಂತಹವರಿಗೆ ಸೂಕ್ತ ಪರಿಹಾರ ನೀಡಲು ಮೀನಮೇಷ ಎಣಿಸುತ್ತದೆ ಎಂದು ಶಾಸಕ ಕೆ.ಎಸ್.ಲಿಂಗೇಶ್ ಬೇಸರ ವ್ಯಕ್ತಪಡಿಸಿದರು.


    ಕರ್ನಾಟಕ ಗ್ರೋವರ್ಸ್ಸ್ ಫೆಡರೇಷನ್ ಹಾಗೂ ವಿವಿಧ ಕಾಫಿ ಬೆಳೆಗಾರರ ಸಂಘದಿಂದ ಪಟ್ಟಣದ ಜೂನಿಯರ್ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಸಂಕಷ್ಟದಲ್ಲಿದ್ದಾಗ ಮಾತ್ರ ಕಾಫಿ ಬೆಳೆಗಾರರು ಸಂಘಟನೆಗೆ ಒತ್ತು ನೀಡುವುದನ್ನು ಬಿಡಬೇಕು ಎಂದರು.


    ಕಾಫಿ ಬೆಳೆಗಾರರು ಮತ್ತು ಕೂಲಿ ಕಾರ್ಮಿಕರ ಸಮಸ್ಯೆ ಮತ್ತು ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ವಿಧಾನಸಭೆಯಲ್ಲಿ ಗಂಭೀರವಾಗಿ ಚರ್ಚಿಸಲಾಗಿದೆ. ಆದರೆ ಮಲೆನಾಡು ಭಾಗದಿಂದ ಅಯ್ಕೆಯಾದ ಜನಪ್ರತಿನಿಧಿಗಳೇ ಇದಕ್ಕೆ ಸ್ಪಂದಿಸುತ್ತಿಲ್ಲ. ಅಂತವರಿಗೆ ಚುನಾವಣೆ ಸಂದರ್ಭದಲ್ಲಿ ತಕ್ಕ ಪಾಠ ಕಲಿಸಬೇಕು ಎಂದರು.


    ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಕಾಫಿ ಬೆಳೆಗಾರರಿಗೆ ಭೂ ಕಬಳಿಕೆ ಕಾಯ್ದೆ ಮರಣ ಶಾಸನವಾಗಲಿದೆ. ಈ ಬಗ್ಗೆ ಎಲ್ಲರೂ ಜಾಗೃತರಾಗಿ ಹೋರಾಟ ರೂಪಿಸಬೇಕು. ಸಂಘಟನೆ ಬಲದಿಂದ ಮುಂದಿನ ಬೆಳಗಾವಿಅಧಿವೇಶನದಲ್ಲಿ ಈ ಕಾಯ್ದೆಯನ್ನು ವಾಪಸ್ ಪಡೆದರೆ 10 ಎಕರೆ ಭೂಮಿ ಪರಿವರ್ತಿಸಲು ಸಹಕಾರವಾಗಲಿದೆ. ಮುಕ್ತ ಮಾರುಕಟ್ಟೆಯಿಂದ ಕಾಫಿ ಗಗನಮುಖಿಯಾಗಿದೆ. ಆದರೆ ದಿನ ಕಳೆದಂತೆ ಬೆಳೆಗಾರರಿಗೆ ಸಮಸ್ಯೆ ಹೆಚ್ಚಾಗುತಿದ್ದು ಅದನ್ನು ನಿವಾರಿವ ನಿಟ್ಟಿನಲ್ಲಿಯೂ ಗಮನ ಹರಿಸಬೇಕು ಎಂದರು.


    ಕರ್ನಾಟಕ ಗ್ರೋವರ್ಸ್ಸ್ ಫೆಡರೇಷನ್ ಅಧ್ಯಕ್ಷ ಡಾ.ಎಚ್.ಟಿ.ಮೋಹನ್ ಕುಮಾರ್ ಮಾತನಾಡಿ, 17 ನೇ ಶತಮಾತನದಲ್ಲಿ ಭಾರತಕ್ಕೆ ಪರಿಚಯವಾದ ಕಾಫಿ ವಿಶ್ವದಲ್ಲಿ ಪ್ರಮುಖ ಉತ್ಪಾದನೆಯಾಗಿದೆ. ಸರಾಸರಿ 4 ಮೆಟ್ರಿಕ್ ಟನ್ ಉತ್ಪಾದನೆ ಮೂಲಕ 8 ಸಾವಿರ ಕೋಟಿ ವಹಿವಾಟು ನಡೆಸಿ ಸರ್ಕಾರದ ಬೊಕ್ಕಸಕ್ಕೆ ರಾಜಸ್ವ ನೀಡಿದೆ. ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಯಿಂದ 25 ಲಕ್ಷಕ್ಕೂ ಅಧಿಕ ಕೂಲಿ ಕಾರ್ಮಿಕರು ಬದುಕು ಕಟ್ಟಿಕೊಂಡಿದ್ದಾರೆ. ನೈಸರ್ಗಿಕವಾದ ಕಾಫಿ ಆರೋಗ್ಯ ಪೂರ್ಣತೆಯಿಂದ ಭಾರತದ ಕಾಫಿಗೆ ಅಂತಾರಾಷ್ಟ್ರ ಮಟ್ಟದಲ್ಲಿ ಹೆಚ್ಚು ಬೇಡಿಕೆ ಇದೆ ಎಂದರು.


    ಮಾಜಿ ಸಚಿವರಾದ ಮೋಟಮ್ಮ, ನಿಂಗಯ್ಯ, ಕೇಂದ್ರ ಕಾಫಿ ಮಂಡಳಿ ಸದಸ್ಯ ಜಿ.ಕೆ.ಕುಮಾರ್, ತಾಲೂಕು ಅಧ್ಯಕ್ಷ ಚೇತನ್, ಕಾರ್ಯದರ್ಶಿ ಸಂಜು ಕೌರಿ, ಮಾಜಿ ಅಧ್ಯಕ್ಷ ತೊ.ಚ.ಅನಂತ ಸುಬ್ಬರಾಯ, ಕೆಜಿಎಫ್ ಪದಾಧಿಕಾರಿಗಳಾದ ಕೃಷ್ಣಪ್ಪ, ನಾಗರಾಜು, ವಸಂತೇಗೌಡ, ವಿಶ್ವನಾಥ್, ಜಯರಾಂ, ಮಲ್ಲಿಕಾರ್ಜನ್, ನರೇಂದ್ರ, ನಂದಾ ಬೆಳ್ಳಿಯಪ್ಪ, ಶೈಲಪ್ರಕಾಶ್, ಚಿತ್ರನಟಿ ಕು.ರಿತನ್ಯಾ ಹೂವಣ್ಣಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts