More

    ಆನೆಗಳ ದಾಳಿ ತಡೆಗೆ ಕ್ರಮ ಕೈಗೊಳ್ಳಿ

    ಗುಂಡ್ಲುಪೇಟೆ: ಕಾಡಂಚಿನ ಜಮೀನುಗಳಿಗೆ ಆನೆಗಳ ದಾಳಿ ಹೆಚ್ಚಾಗುತ್ತಿದ್ದು ಅದನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ರೈತರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.


    ಕಳೆದ ಒಂದೂವರೆ ತಿಂಗಳಿನಿಂದ ಬಂಡೀಪುರ ಹುಲಿ ಯೋಜನೆಯ ಓಂಕಾರ್ ವಲಯದ ಅರಣ್ಯದಿಂದ ಹೊರಬಂದ ಆನೆಗಳ ಹಿಂಡು ಆಲತ್ತೂರು ಗ್ರಾಮದ ಕಾಡಂಚಿನ ಜಮೀನುಗಳಲ್ಲಿ ಬೆಳೆಗಳನ್ನು ನಾಶಮಾಡುತ್ತಿವೆ. ಕಾಡಂಚಿನಲ್ಲಿ ಸೋಲಾರ್ ಬೇಲಿ ಇದ್ದರೂ ಸರಿಯಾಗಿ ನಿರ್ವಹಣೆ ಮಾಡದ ಪರಿಣಾಮ ಆನೆಗಳು ಹೊರಬರುತ್ತಿವೆ. ಜಮೀನುಗಳಿಗೆ ಅಳವಡಿಸಿರುವ ಬೇಲಿಗಳನ್ನು ಕಿತ್ತು ಒಳಗೆ ನುಗ್ಗುತ್ತಿವೆ.

    ಭಾನುವಾರ ನಸುಕಿನಲ್ಲಿ ದಾಳಿ ಮಾಡಿದ ಮೂರು ಆನೆಗಳ ಗುಂಪು ಗ್ರಾಮದ ಗೌರಮ್ಮ, ಮಲ್ಲೇಶ್, ಪುಟ್ಟೇಗೌಡ ಎಂಬುವರ ಜಮೀನುಗಳಲ್ಲಿ ಬೆಳೆದಿದ್ದ ಬಾಳೆ, ಮೆಣಸಿನಕಾಯಿ ಹಾಗೂ ಟೊಮ್ಯಾಟೊ ಬೆಳೆಗಳನ್ನು ನಾಶಪಡಿಸಿವೆ.ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿ ನೀಡಿದರೆ ಸಿಬ್ಬಂದಿ ಮಾತ್ರ ಭೇಟಿ ನೀಡಿ ಮಹಜರು ನಡೆಸುತ್ತಿದ್ದಾರೆ. ಆರು ತಿಂಗಳಿಗೋ ವರ್ಷಕ್ಕೋ ಪರಿಹಾರ ಕೊಡುತ್ತಿದ್ದಾರೆ. ಇದರಿಂದ ರೈತರಿಗೆ ತುಂಬಾ ನಷ್ಟವುಂಟಾಗುತ್ತಿದ್ದು, ಆನೆಗಳು ಅರಣ್ಯದಿಂದ ಹೊರಬರುವ ಸ್ಥಳಗಳನ್ನು ಗುರ್ತಿಸಿ ಗಸ್ತು ಹೆಚ್ಚಿಸಬೇಕು ಎಂದು ಆಲತ್ತೂರು ಗ್ರಾಮದ ಮಲ್ಲೇಶ್ ಮತ್ತಿತರರು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts