More

    ಆದಿಕವಿ ವಾಲ್ಮೀಕಿ ಮಹಾನ್ ದಾರ್ಶನಿಕ


    ಯಾದಗಿರಿ: ಆದಿಕವಿ ವಾಲ್ಮೀಕಿ ರಚಿಸಿರುವ ರಾಮಾಯಣ ಗ್ರಂಥದಲ್ಲಿ ಅಡಕವಾಗಿರುವ ಪಿತೃವಾಕ್ಯ ಪರಿಪಾಲನೆ, ಸಹೋದರ ಬಾಂಧವ್ಯ ಸಂಬಂಧಗಳ ಮೌಲ್ಯಗಳನ್ನು ಇಂದಿನ ಯುವ ಪೀಳಿಗೆ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರ ಅಭಿಪ್ರಾಯಪಟ್ಟರು.

    ನಗರದ ವಾಲ್ಮೀಕಿ ಭವನದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಎಲ್ಲಿಯವರೆಗೆ ಭೂಮಿಯಲ್ಲಿ ಪರ್ವತ, ಸಮುದ್ರ ನದಿಗಳಿರುತ್ತವೆಯೋ ಅಲ್ಲಿಯವರೆಗೂ ರಾಮಾಯಣ ಕಾವ್ಯ ಲೋಕದಲ್ಲಿ ಪ್ರಚಲಿತದಲ್ಲಿ ಇರುತ್ತದೆ. ಆದ್ದರಿಂದ ಸೂರ್ಯ-ಚಂದ್ರ ಇರುವವರೆಗೂ ರಾಮಾಯಣ ಮಹಾಕಾವ್ಯವು ಜಗತ್ತಿನಲ್ಲಿ ಅಮರ ಕಾವ್ಯವಾಗಿರುತ್ತದೆ ಎಂದರು.


    ವಾಲ್ಮೀಕಿಯವರು ಸಂತರು, ದಾರ್ಶನಿಕರು, ನೀತಿ ಶಾಸ್ತ್ರಜ್ಞರು, ತತ್ವಜ್ಞಾನಿಗಳು, ಮಹಾನ್ ಚಿಂತಕರು, ಸಮಾಜ ಸುಧಾರಕರು ಎಂದು ಬಣ್ಣಿಸಿದ ಶಾಸಕರು, ರಾಮಾಯಣ ಗ್ರಂಥವು ಪುರಾತನವಾಗಿದ್ದು, ಇವರನ್ನು ಆದಿಕವಿ ಎಂದು ಕರೆಯಲಾಗುತ್ತಿದೆ ಎಂದು ಹೇಳಿದರು.

    ಗೋಲಪಲ್ಲಿ ವಾಲ್ಮೀಕಿ ಆಶ್ರಮದ ಶ್ರೀವರದಾನೇಶ್ವರ ಮಹಾಸ್ವಾಮಿಗಳು ಮಾತನಾಡಿ, ವಾಲ್ಮೀಕಿಯವರು ಕೇವಲ ವಾಲ್ಮೀಕಿ ಸಮಾಜಕ್ಕೆ ಸೀಮಿತವಾದವರಲ್ಲ. ಇವರು ಸರ್ವಜನಾಂಗದ ತೋಟವಾಗಿದ್ದಾರೆ ಅವರ ಜಯಂತಿಯನ್ನು ಚರಿಸುತ್ತಿದ್ದು ಒಳ್ಳೆ ಕಾರ್ಯವಾಗಿದೆ. ರಾಮಾಯಣ ಮನುಕುಲಕ್ಕೆ ಮಾರ್ಗದರ್ಶನ ನೀಡುವ ಗ್ರಂಥವಾಗಿದ್ದು, ಅದರಲ್ಲಿರುವ ಸಂದೇಶಗಳು ಎಲ್ಲ ಕಾಲಕ್ಕೂ ಪ್ರಸ್ತುತ. ಸಮಾಜದಲ್ಲಿ ಜನರು ಸಂಘಟಿತರಾಗಿ ಸಕಾಲಕ್ಕೂ ಮಹಾತ್ಮರ ಸ್ಮರಣೆ ಮಾಡಬೇಕು ಎಂದು ನುಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts