More

    ಆತಂಕದ ನಡುವೆ ವಾಹನ ಸವಾರರ ಸಂಚಾರ

    ಸಿದ್ದಾಪುರ: ಸಿದ್ದಾಪುರ-ಶಿರಸಿ ರಾಜ್ಯ ಹೆದ್ದಾರಿಯ ಕಾನಸೂರು ಹೈಸ್ಕೂಲ್ ಸಮೀಪ ರಸ್ತೆ ಕುಸಿಯುತ್ತಿದ್ದು, ವಾಹನ ಸವಾರರು ಆತಂಕದಿಂದಲೇ ಸಂಚಾರ ಮಾಡುವ ಸ್ಥಿತಿ ಉಂಟಾಗಿದೆ.
    ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ಹಲವು ರಸ್ತೆಗಳಲ್ಲಿ ಗುಡ್ಡ ಕುಸಿತದಿಂದಾಗಿ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಆದರೆ, ಇದು ಗ್ರಾಮೀಣ ರಸ್ತೆಯಲ್ಲ. ರಾಜ್ಯ ಹೆದ್ದಾರಿ ಆಗಿರುವುದರಿಂದ ನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ಕಳೆದ ವಾರ ಇದೇ ಹೆದ್ದಾರಿಯ ತ್ಯಾಗಲಿ ಸಮೀಪ ಗುಡ್ಡ ಕುಸಿದ ಸಂಚಾರಕ್ಕೆ ತೊಂದರೆ ಉಂಟಾಗಿತ್ತು.
    ಯಲ್ಲಾಪುರ-ಅಂಕೋಲಾ ಹಾಗೂ ಕುಮಟಾ-ಶಿರಸಿ ರಸ್ತೆಗಳು ಬಂದ್ ಆಗಿರುವ ಕಾರಣ ವಾಹನಗಳು ಶಿರಸಿ-ಸಿದ್ದಾಪುರ ಮಾರ್ಗವಾಗಿ ಕುಮಟಾ-ಹೊನ್ನಾವರಗಳಿಗೆ ಹೋಗುತ್ತಿರುವುದ ರಿಂದ ನಿತ್ಯ 500ಕ್ಕೂ ಹೆಚ್ಚು ವಾಹನಗಳು ಓಡಾಡುತ್ತವೆ. ಇದರಿಂದ ರಸ್ತೆ ಮತ್ತಷ್ಟು ಕುಸಿಯುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದಾರೆ. ಲೋಕೋಪಯೋಗಿ ಇಲಾಖೆ ಯವರು ವಾಹನಗಳ ವೇಗಕ್ಕೆ ತಡೆಯೊಡ್ಡುವ ಸಲುವಾಗಿ ಅಪಾಯದ ಸೂಚನೆಯ ನಾಮಫಲಕ ಅಳವಡಿಸಿದ್ದಾರೆ.


    ಧರೆ ಕುಸಿಯುವ ಕುರಿತು ಈ ಹಿಂದೆಯೇ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಆದರೆ, ಈ ಬಗ್ಗೆ ಯಾರೂ ಕ್ರಮ ಕೈಗೊಳ್ಳಲಿಲ್ಲ. ಈಗ ಕುಸಿಯುತ್ತಿರುವ ಧರೆ ರಸ್ತೆಗೆ ಕೇವಲ ಎರಡು ಅಡಿ ಬಾಕಿ ಇದೆ. ಮಳೆ ಹೆಚ್ಚಾದರೆ ಮತ್ತಷ್ಟು ಧರೆ ಕುಸಿದು ಸಂಚಾರ ಬಂದ್ ಆಗುವ ಸಾಧ್ಯತೆ ಇದೆ.
    | ಸುಭಾಸ್ ನಾಯ್ಕ ಕಾನಸೂರು
    ಗ್ರಾಪಂ ಮಾಜಿ ಅಧ್ಯಕ್ಷ


    ವಾಹನಗಳ ಓಡಾಟ ಹೆಚ್ಚಾಗಿರುವುದರಿಂದ ಕಾನಸೂರು ಸಮೀಪ ರಸ್ತೆ ಕುಸಿಯುತ್ತಿದೆ. ಮಳೆ ಕಡಿಮೆ ಆದ ತಕ್ಷಣ ದುರಸ್ತಿ ಮಾಡಲಾಗುವುದು. ಈ ಕುರಿತು ಸಂಬಂಧ ಪಟ್ಟ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.
    | ಎಂ.ಎಚ್. ಮುದಕಣ್ಣನವರ್
    ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಲೋಕೋಪಯೋಗಿ ಇಲಾಖೆ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts