More

    ಆಡಂಬರಕ್ಕಿಂತ ಭಕ್ತಿಯೇ ಸಾಧನವಾಗಲಿ

    ಬೆಳಗಾವಿ: ಸತ್ಸಂಗದಿಂದ ಸಾಮಾನ್ಯನೂ ಅಸಾಮಾನ್ಯ ಸ್ಥಿತಿಗೆ ಹೋಗಬಲ್ಲ ಸಾಮರ್ಥ್ಯ ಪಡೆಯುತ್ತಾನೆ ಎಂದು ಸಾಹಿತಿ ಪ್ರಕಾಶ ಗಿರಿಮಲ್ಲನವರ ಹೇಳಿದರು.

    ನಗರದ ಕಾರಂಜಿ ಮಠದಲ್ಲಿ ಭಾನುವಾರ ಜರುಗಿದ 260ನೇ ಮಾಸಿಕ ಶಿವಾನುಭವ ಹಾಗೂ ಮಹಾಶಿವರಾತ್ರಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಶಿವನ ಪರಿವಾರವು ನಮ್ಮ ಜನ ಜೀವನದ ಕೌಟುಂಬಿಕ ಜೀವನವನ್ನೇ ಹೋಲುತ್ತದೆ. ಹೀಗಾಗಿ ಶಿವ ಶ್ರೀಸಾಮಾನ್ಯರಿಗೆ ಆಪ್ತವಾಗುತ್ತಾನೆ. ಬಸವಣ್ಣನವರು ಹೇಳಿದ ಹಾಗೆ ನಮ್ಮ ಶಿವ ನಾದ ಪ್ರಿಯನೂ ಅಲ್ಲ, ವೇದ ಪ್ರಿಯನೂ ಅಲ್ಲ, ಭಕ್ತಿಪ್ರಿಯ ಎನ್ನುವ ಮಾತನ್ನಾಡಿದ್ದಾರೆ. ಹೀಗಾಗಿ ಆಡಂಬರಕ್ಕಿಂತಲೂ ಭಕ್ತಿ ನಮ್ಮೆಲ್ಲರ ಸಾಧನವಾಗಬೇಕು ಎಂದರು.

    ಅಧ್ಯಕ್ಷತೆ ವಹಿಸಿದ್ದ ಸಂಸದೆ ಮಂಗಲ ಅಂಗಡಿ ಮಾತನಾಡಿ, ಭಾರತವು ಅಧ್ಯಾತ್ಮ ಬದುಕಿಗೆ ವಿಶೇಷ ಕೊಡುಗೆ ನೀಡಿದೆ. ಅಧ್ಯಾತ್ಮದಿಂದ ಜನರ ಜೀವನ ಹಸನಾಗಬಲ್ಲದು ಎಂದರು.

    ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿ, ಇಂಥ ಆಚರಣೆಗಳಿಂದ ದೇವರು ಮತ್ತು ಭಕ್ತರ ನಡುವೆ ಭಿನ್ನತೆ ಹೋಗಿ ಆಪ್ತತೆ ಸಾಧ್ಯವಾಗಬಲ್ಲದು ಎಂದರು. ಸಾನ್ನಿಧ್ಯ ವಹಿಸಿದ್ದ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ಭಿನ್ನತೆ ಮರೆತು ಒಂದಾಗಿ ಬಾಳಿದರೆ ಶಿವರಾತ್ರಿಗೆ ನಿಜಾರ್ಥ ಬರುತ್ತದೆ ಎಂದರು.


    ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ. ರಾಮಕೃಷ್ಣ ಮರಾಠೆ, ಮಂಗಲ ಅಂಗಡಿ ಹಾಗೂ ಸಮಾಜ ಸೇವಕ ಗುರುದೇವ ಪಾಟೀಲ ಅವರನ್ನು ಸತ್ಕರಿಸಲಾಯಿತು. ಶಿವಯೋಗಿ ದೇವರ ಸಮ್ಮುಖ ವಹಿಸಿದ್ದರು. ರೂಪಾ ಖನಗಾವಿ ವಚನ ಗಾಯನ ಮಾಡಿದರು. ಶ್ರೀಮಠದ ಮಾತೃ ಮಂಡಳಿಯ ಸದಸ್ಯರು ವಚನ ಪ್ರಾರ್ಥನೆ ಮಾಡಿದರು. ವಿ.ಕೆ. ಪಾಟೀಲ ಸ್ವಾಗತಿಸಿದರು. ಪ್ರೊ. ಶ್ರೀಕಾಂತ ಶಾನವಾಡ ನಿರೂಪಿಸಿದರು. ಎ.ಕೆ. ಪಾಟೀಲ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts