More

    ಸಮಾಜದಲ್ಲಿ ಸಮಾನತೆ ಸಾರುವುದೇ ಸಂಘದ ಆಶಯ

    ಚಿಕ್ಕಮಗಳೂರು: ಅಖಿಲ ಕರ್ನಾಟಕ ಮಹಿಳಾ ಒಕ್ಕಲಿಗರ ಸಂಘವನ್ನು ರಚಿಸಿರುವುದು ಯಾವುದೇ ಸಂಘದ ಮೇಲಿನ ಸ್ಪರ್ಧೆಗಲ್ಲ. ಎಲ್ಲ ವರ್ಗದ ಒಕ್ಕಲಿಗರನ್ನು ಒಗ್ಗೂಡಿಸಲು ಹಾಗೂ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶಯದಂತೆ ಸಮಾಜದಲ್ಲಿ ಸಮಾನತೆ ತರುವುದೇ ನಮ್ಮ ಸಂಘದ ಆಶಯವಾಗಿದೆ ಎಂದು ಸಂಘದ ರಾಜ್ಯ ಸಹಕಾರ್ಯದರ್ಶಿ ಕೃಷ್ಣವೇಣಿ ರಮೇಶ್ ತಿಳಿಸಿದರು.

    ನಗರದ ಪಿಸಿಎಡಿ ಬ್ಯಾಂಕ್ ಸಭಾಂಗಣದಲ್ಲಿ ಸಂಘದ ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಮಾತನಾಡಿದ ಅವರು, ಸಂಘದಲ್ಲಿ ಸಕ್ರಿಯರಾಗಿ ಕೆಲಸ ಮಾಡುವ ಮೂಲಕ ಮಹಿಳೆಯರು ಸಮಾಜವನ್ನು ಇನ್ನಷ್ಟು ಸಂಘಟಿತವಾಗಿಸಲು ಶ್ರಮಿಸಬೇಕು ಎಂದು ಹೇಳಿದರು.
    ರಾಜ್ಯ ಸಂಘದ ನಿರ್ದೇಶಕ ಕೋಟೆ ರಂಗನಾಥ್ ಮಾತನಾಡಿ, ನೂತನ ಸಂಘದ ಪದಾಧಿಕಾರಿಗಳು ಸಮಾಜಮುಖಿಯಾಗಿ ಕೆಲಸ ಮಾಡುವುದಾಗಿ ತೀರ್ಮಾನಿಸಿ ಒಗ್ಗಟ್ಟಾಗಿ ಮುನ್ನೆಡೆಯಬೇಕು. ಜಿಲ್ಲಾ ಸಂಘದ ಮರು ರಚನೆ ಸಂತಸದ ವಿಷಯ. ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
    ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಚೈತ್ರಾ ಎಸ್.ಗೌಡ, ಕಾರ್ಯಾಧ್ಯಕ್ಷರಾಗಿ ನೇತ್ರಾವತಿ ವೆಂಕಟೇಶ್, ಪ್ರಧಾನ ಕಾರ್ಯದರ್ಶಿಯಾಗಿ ಪ್ರತಿಮಾ ಜಗದೀಶ್, ಉಪಾಧ್ಯಕ್ಷರಾಗಿ ಸುಗುಣಾ ರತ್ನಾಕರ್, ಖಜಾಂಚಿಯಾಗಿ ಸವಿತಾ ಲಂಕೇಗೌಡ, ಸಹ ಕಾರ್ಯದರ್ಶಿಯಾಗಿ ವಿನೋದಾ ದೊಡ್ಡೇಗೌಡ, ನಿರ್ದೇಶಕರಾಗಿ ಮಾಲತಿ ಜಗದೀಶ್, ರಾಜೇಶ್ವರಿ ನಂದಕುಮಾರ್, ಶಕುಂತಲಾ, ವಾಣಿ ಸತೀಶ, ಪೂರ್ಣಿಮಾ ಜಗನ್ನಾಥ್, ಪ್ರೀತಿ, ವಿಶಾಲ, ಪ್ರೀತಿ ಯೋಗೇಶ್, ರೂಪಾ ಕಿರಣ್, ಜಸಂತಾ ಅನಿಲ್‌ಕುಮಾರ್, ರೇಖಾ ರಾಜು, ಪ್ರತಿಮಾ ಸುಮನ್, ತಾರಾ, ಅವಿಲಾ ಚಂದ್ರಶೇಖರ್ ಅವರನ್ನು ಆಯ್ಕೆ ಮಾಡಲಾಯಿತು.
    ಮಹಿಳಾ ಸಂಘದ ರಾಜ್ಯ ಖಜಾಂಚಿ ಸಿ.ಟಿ.ರೇವತಿ, ಜಿಲ್ಲಾ ಸಂಘದ ಗೌರವಾಧ್ಯಕ್ಷೆ ಪಲ್ಲವಿ ರವಿ, ನಗರಸಭೆ ಉಪಾಧ್ಯಕ್ಷ ಅಮೃತೇಶ್ ಚೆನ್ನಕೇಶವ, ಮುಖಂಡರಾದ ಶಂಕರ್, ಅಮೃತೇಶ್, ವಿಶಾಲ ನಾಗರಾಜ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts