More

    ಸಾರ್ವಜನಿಕರು ಸ್ವಚ್ಛತೆಗೆ ಆದ್ಯತೆ ನೀಡಲಿ

    ಐನಾಪುರ: ಔದ್ಯೋಗಿಕರಣದ ಹೆಸರಿನಲ್ಲಿ ಮಾನವ ಸ್ವಾರ್ಥಕ್ಕಾಗಿ ಗಿಡ-ಮರಗಳನ್ನು ಕಡಿದು ಪರಿಸರ ಹಾಳು ಮಾಡುತ್ತಿದ್ದಾನೆ. ಹೀಗೆ ಮುಂದುವರಿದರೆ ಮುಂದೊಂದು ದಿನ ದೇಶಕ್ಕೆ ಆಪತ್ತು ಕಾದಿದೆ ಎಂದು ಶಾಸಕ ಶ್ರೀಮಂತ ಪಾಟೀಲ ಹೇಳಿದರು.

    ಪಟ್ಟಣದಲ್ಲಿ ಅರಣ್ಯ ಇಲಾಖೆಯಿಂದ 83 ಲಕ್ಷ ರೂ. ವೆಚ್ಚದ ಟ್ರಿ ಪಾರ್ಕ್, 1.20 ಕೋಟಿ ರೂ. ಉಗಾರ-ಬಾರಿಗಡ್ಡಿ ರಸ್ತೆ, 1 ಕೋಟಿ ರೂ. ವೆಚ್ಚದ ಅಪ್ಪಯ್ಯ ಮುತ್ಯಾನ ಮಡ್ಡಿ ರಸ್ತೆ ಹಾಗೂ 94 ಲಕ್ಷ ರೂ. ವೆಚ್ಚದ ಐನಾಪುರ ಅನಗಲ್ಲ ರಸ್ತೆ ಸೇರಿ ವಿವಿಧ ಸಮುದಾಯಗಳ ಭವನ ಸೇರಿ 9 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಗುರುವಾರ ಚಾಲನೆ ನೀಡಿ ಮಾತನಾಡಿದರು.

    ಜಿಲ್ಲೆಯಲ್ಲೇ ಅತ್ಯಂತ ಸುಸಜ್ಜಿತ ಮತ್ತು ಗುಣಮಟ್ಟದಿಂದ ಕೂಡಿದ ಟ್ರಿ ಪಾರ್ಕ್ ನಿರ್ಮಾಣವಾಗಿದ್ದು, ಸಾರ್ವಜನಿಕರು ಸ್ವಚ್ಛತೆ ಕಾಪಾಡಿಕೊಂಡು ಹೋಗಬೇಕು. ಹಲವು ದಿನಗಳಿಂದ ವಿವಿಧ ಸಮುದಾಯದವರು ಭವನದ ಬೇಡಿಕೆ ಇಟ್ಟಿದ್ದು, ಅದನ್ನು ಈಡೇರಿಸಲಾಗುತ್ತದೆ ಎಂದರು. ಉಪವಲಯ ಸಂರಕ್ಷಣಾಧಿಕಾರಿ ಮರಿಯಪ್ಪ ಆಂಟೋನಿ, ಅರಣ್ಯಾಧಿಕಾರಿ ಸುನಿತಾ ನಿಂಬರಗಿ, ಪ್ರಶಾಂತ ಗಾಣಿಗೇರ, ಪ್ರಶಾಂತ ಗಂಗಧರ, ಅಭಿಯಂತ ಆರ್.ಪಿ.ಅವತಾಡೆ, ಪ್ರವೀಣ ಹುಣಸಿಕಟ್ಟಿ, ಅಮರ ಮೇತ್ರೆ, ಗುತ್ತಿಗೆದಾರ ನಾನಾಸಾಹೇಬ ಅವತಾಡೆ, ವಿ.ಕೆ.ಕುಲಕರ್ಣಿ, ಅರ್ಜುನ ನಾಯಿಕ, ಸಿದರಾಯ ಗಾಡಿವಡ್ಡರ, ಅಕ್ಷಯ ಕುಲಕರ್ಣಿ, ಗೋಪಾಲರಾವ ಕಟ್ಟಿ, ದಾದಾ ಪಾಟೀಲ, ನಾರಾಯಣ ಕಟ್ಟಿ, ಮೋಹನ ಮುತಾಲಿಕ, ರಾಜೇಂದ್ರ ಪೋತದಾರ, ತಮ್ಮಣ್ಣ ಪಾರಶೆಟ್ಟಿ, ಪ್ರವೀಣ ಕುಲಕರ್ಣಿ, ಅಣ್ಣಪ್ಪ ಡೂಗನವರ, ಹನುಮಂತ ಗುರವ, ಕುಮಾರ ಕಾಗಲಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts