More

    ಆಟ ನಿತ್ಯ ಜೀವನದ ಕಾಯಕವಾಗಲಿ

    ಬಸವಕಲ್ಯಾಣ: ಜಗತ್ತನ್ನು ಆಳುವ ಶಕ್ತಿ ಜ್ಞಾನಕ್ಕಿದೆ. ನಿಮ್ಮಲ್ಲಿಯ ಜ್ಞಾನಕ್ಕೆ ಬೆಲೆ ಬರಬೇಕಾದರೆ ಉತ್ತಮ ಆರೋಗ್ಯ ಅತ್ಯವಶ್ಯಕ. ಇದಕ್ಕಾಗಿ ಆಟವನ್ನು ಸಹ ನಿತ್ಯ ಜೀವನದಲ್ಲಿ ಕಾಯಕವನ್ನಾಗಿ ಮಾಡಿಕೊಳ್ಳಬೇಕು ಎಂದು ಶಾಸಕ ಶರಣು ಸಲಗರ ಸಲಹೆ ನೀಡಿದರು.

    ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಸಂಕಲ್ಪ ಸ್ವತಂತ್ರ ಪಿಯು ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಇಲ್ಲಿಯ ದೊಡ್ಡಪ್ಪ ಅಪ್ಪ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ವಾಷರ್ಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೊಬೈಲ್ ಜೀವನ ಹಾಳು ಮಾಡುತ್ತದೆ. ವಿದ್ಯಾಥರ್ಿಗಳು ಮೊಬೈಲ್ ಗೀಳಿನಿಂದ ಹೊರಬಂದು ಶ್ರಮವಹಿಸಿ ಅಭ್ಯಾಸ ಮಾಡುವ ಜತೆಗೆ ಆಟ ಆಡುವುದನ್ನೂ ರೂಢಿಸಿಕೊಳ್ಳಬೇಕು ಎಂದರು.

    ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿದರ್ೇಶಕ ಚಂದ್ರಕಾಂತ ಶಾಬಾದಕರ್ ಮಾತನಾಡಿ, ಶಿಕ್ಷಣದ ಜತೆಗೆ ಆರೋಗ್ಯ ಪೂರ್ಣ ಜೀವನಕ್ಕೆ ಕ್ರೀಡೆಗಳು ಅವಶ್ಯಕವಾಗಿದ್ದು, ವಿದ್ಯಾಥರ್ಿಗಳು ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

    ತಹಸೀಲ್ದಾರ್ ಸಾವಿತ್ರಿ ಸಲಗರ ಕ್ರೀಡಾಜ್ಯೋತಿ ಸ್ವೀಕರಿಸಿದರು. ಸಂಕಲ್ಪ ಕಾಲೇಜು ಪ್ರಾಚಾರ್ಯ ಪ್ರಭುಲಿಂಗ ಕಲೋಜಿ ಅಧ್ಯಕ್ಷತೆ ವಹಿಸಿದ್ದರು. ಬಿಇಒ ಸಿಜಿ ಹಳ್ಳದ, ಸಿಪಿಐ ರಘುವೀರಸಿಂಗ್ ಠಾಕೂರ್, ಪ್ರಾಚಾರ್ಯರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಅಕ್ಕಣ್ಣ, ತಾಲೂಕು ಅಧ್ಯಕ್ಷ ಡಾ.ಜೈಶೇನ್ ಪ್ರಸಾದ, ಸಕರ್ಾರಿ ಪಿಯು ಕಾಲೇಜು ಪ್ರಾಚಾರ್ಯ ಸಿದ್ದಣ್ಣ ಮಾರಪಳ್ಳಿ, ತಾಲೂಕು ದೈಹಿಕ ಶಿಕ್ಷಣ ನಿದರ್ೇಶಕ ಬಸವರಾಜ ಪಾಟೀಲ್ ಇತರರಿದ್ದರು. ಸಂಕಲ್ಪ ಎಜುಕೇಷನಲ್ ಆ್ಯಂಡ್ ಮಲ್ಟಿ ಏಮ್ ಟ್ರಸ್ಟ್ ಅಧ್ಯಕ್ಷೆ ಕಲ್ಪನಾ ಬಿರಾದಾರ ಸ್ವಾಗತಿಸಿ ವಂದಿಸಿದರು. ಮೇನುಕಾ ಮಾಶೆಟ್ಟಿ ನಿರೂಪಣೆ ಮಾಡಿದರು.

    ಕ್ರೀಡೆ ಮತ್ತು ಕ್ರೀಡಾಪಟುಗಳಿಗೆ ಅತ್ಯಂತ ಮಹತ್ವವಿದೆ. ಕ್ರೀಡಾ ಸಾಧಕರನ್ನು ಜಗತ್ತು ಗೌರವಿಸುತ್ತದೆ. ವಿದ್ಯಾಥರ್ಿಗಳು ಕ್ರೀಡಾ ಮನೋಭಾವನೆ ಬೆಳೆಸಿಕೊಂಡು, ದಿನವೂ ಆಟ ಆಡುವುದನ್ನು ಮೈಗೂಡಿಸಿಕೊಳ್ಳಬೇಕು. ಅದ್ಭುತ ಸಾಧನೆ ಮಾಡಿ ಬಸವಕಲ್ಯಾಣ ಕ್ಷೇತ್ರಕ್ಕೆ ಕೀತರ್ಿ ತರುವಂತಾಗಲಿ.
    | ಶರಣು ಸಲಗರ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts