More

    ಆಟೋ ಪ್ರಚಾರಕ್ಕೆ ಚಾಲನೆ

    ಕಲಬುರಗಿ: ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ನಿಮಿತ್ತ ಅರಿವು ಮೂಡಿಸುವ ಆಟೋ ಪ್ರಚಾರಕ್ಕೆ ಅಪರ ಜಿಲ್ಲಾಧಿಕಾರಿ ಡಾ.ಶಂಕ್ರಣ್ಣ ವಣಿಕ್ಯಾಳ ಶುಕ್ರವಾರ ಚಾಲನೆ ನಿಡಿದರು.
    ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ ಹಾಗೂ ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಘದ ಸಹಯೋಗದಡಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಾಲಕಾರ್ಮಿಕರ ಹಕ್ಕು ಮತ್ತು ಕರ್ತವ್ಯ ತಿಳಿಹೇಳುವ ಕರಪತ್ರ ಮತ್ತು ಪೋಸ್ಟರ್ಗಳನ್ನು ಬಿಡುಗಡೆ ಮಾಡಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಗೋಮತಿ ರಾಘವೇಂದ್ರ ಮಾತನಾಡಿ, ಬಾಲಕಾರ್ಮಿಕರ ಸಂಖ್ಯೆ ಶೂನ್ಯಕ್ಕೆ ತರುವುದೇ ನಮ್ಮೆಲ್ಲರ ಮುಖ್ಯ ಉದ್ದೇಶ ಎಂದರು.
    ಶಾಲೆ ಮತ್ತು ಕಿಶೋರಾವಸ್ಥೆ ಮಕ್ಕಳ ಆಟದ ಹಕ್ಕು ಯಾರೂ ಕಸಿದುಕೊಳ್ಳುವಂತಿಲ್ಲ. ಮಕ್ಕಳು ಶಿಕ್ಷಣ ಪಡೆಯಲು ಸಂವಿಧಾನಬದ್ಧ ಹಕ್ಕು ಉಳ್ಳವರಾಗಿದ್ದಾರೆ. 14 ವರ್ಷದೊಳಗಿನ ಯಾವುದೇ ಮಗುವನ್ನು ಕೆಲಸಕ್ಕೆ ಇಟ್ಟುಕೊಳ್ಳುವುದು ಮತ್ತು 14-18 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕೆಲಸದಲ್ಲಿ ತೊಡಗಿಸುವುದು ಶಿಕ್ಷಾರ್ಹ ಅಪರಾಧ ಎಂದು ಎಚ್ಚರಿಸಿದರು.
    ಸಹಾಯಕ ಪೊಲೀಸ್ ಆಯುಕ್ತ ವಿಜಯಕುಮಾರ, ಕಾರ್ಮಿಕ ಇಲಾಖೆ ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಶಿವಕುಮಾರ ರೇಷ್ಮೆ, ಪ್ರಾದೇಶಿಕ ಉಪ ಕಾರ್ಮಿಕ ಆಯುಕ್ತ ಡಾ.ಗಿರೀಶ ಪಾಟೀಲ್, ಸಹಾಯಕ ಕಾರ್ಮಿಕ ಆಯುಕ್ತೆ ಆರತಿ ಪೂಜಾರಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಹರಿ ದೇಶಪಾಂಡೆ, ಎನ್ಸಿಎಲ್ಪಿ ಯೋಜನಾ ನಿರ್ದೇಶಕ ಸಂತೋಷ ಕುಲಕರ್ಣಿ , ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಭೀಮರಾಯ, ಹಿರಿಯ ಕಾರ್ಮಿಕ ನಿರೀಕ್ಷಕ ರವೀಂದ್ರಕುಮಾರ ಬಲ್ಲೂರ, ಕಾರ್ಮಿಕ ನಿರೀಕ್ಷಕ ಶಿವರಾಜ ಪಾಟೀಲ್, ಕಾನೂನು ಸಲಹೆಗಾರ ಭರತೇಶ ಶೀಲವಂತ, ಸಂಸ್ಕಾರ ಪ್ರತಿಷ್ಠಾನದ ನಿರ್ದೇಶಕ ವಿಠ್ಠಲ್ ಚಿಕಣಿ ಇತರರಿದ್ದರು.
    ಆಟೋ ಪ್ರಚಾರ ವಾಹನ ನಗರದಲ್ಲಿ ಮೂರು ದಿನ ಮತ್ತು ಪ್ರತಿ ತಾಲೂಕಿನಲ್ಲಿ ಎರಡು ದಿನ ಸಂಚರಿಸಿ ಭಿತ್ತಿ ಪತ್ರ ಹಂಚಿಕೆ, ಪೋಸ್ಟರ್ ಅಂಟಿಸುವುದಲ್ಲದೆ ಧ್ವನಿವರ್ಧಕ ಮೂಲಕ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಿದೆ.

    ಪ್ರಸ್ತುತ ಕರೊನಾ ಸೋಂಕಿನ ಹಾವಳಿ ಹೆಚ್ಚಾಗಿದ್ದರಿಂದ ಹಿಂದೆಂದಿಗಿಂತಲೂ ಮಕ್ಕಳನ್ನು ಹೆಚ್ಚು ಸಂರಕ್ಷಣೆ ಮಾಡಬೇಕಾಗಿದೆ. ಮಕ್ಕಳನ್ನು ಬಾಲಕಾಮರ್ಿಕ ಪದ್ಧತಿಯಿಂದ ಸಂರಕ್ಷಿಸುವುದರ ಜತೆಗೆ ನಿಮರ್ೂಲನೆಗೆ ಪಣ ತೊಡುವ ಅಗತ್ಯವಿದೆ.
    | ಗೋಮತಿ ರಾಘವೇಂದ್ರ,
    ಹಿರಿಯ ಸಿವಿಲ್ ನ್ಯಾಯಾಧೀಶೆ, ಕಲಬುರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts