More

    ಆಟೋ ಚಾಲಕರಿಗೆ ದಿನಸಿ ಕಿಟ್, ಉಸ್ತುವಾರಿ ಸಚಿವರಿಂದ ವಿತರಣೆ, ಗಮನ ಸೆಳೆದ ಐನೂರಕ್ಕೂ ಹೆಚ್ಚು ಆಟೋಗಳ ರೌಂಡ್ಸ್

    ಬೆಂಗಳೂರು ಗ್ರಾಮಾಂತರ: ಹೊಸಕೋಟೆಯ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಗುರುವಾರ ಆಟೋಗಳ ಪರೇಡ್ ಗಮನ ಸೆಳೆಯಿತು. ಕಾರ್ಮಿಕ ಇಲಾಖೆ ಹಮ್ಮಿಕೊಂಡಿದ್ದ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಹಾಜರಿದ್ದ ಆಟೋ ಚಾಲಕರು ಸರದಿ ಸಾಲಿನಲ್ಲಿ ಆಟೋ ಚಲಾಯಿಸಿ ಗಮನ ಸೆಳೆದರು.

    ಕರೊನಾ ಮೊದಲ ಲಾಕ್‌ಡೌನ್ ಸಂದರ್ಭದಲ್ಲಿ ದಿನಸಿ ಕಿಟ್ ಪಡೆದಿದ್ದ ಚಾಲಕರಿಗೆ ಎರಡನೇ ಲಾಕ್‌ಡೌನ್ ಬಳಿಕ ಮತ್ತೊಂದು ಬಾರಿ ದಿನಸಿ ಕಿಟ್ ವಿತರಣೆ ಕಾರ್ಯಕ್ರಮ ವಿಶೇಷ ಎನಿಸಿತು. ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಕಾರ್ಯಕ್ರಮದ ಸಾರಥ್ಯ ವಹಿಸಿ, ಆಟೋ ಸಾರಥಿಗಳಿಗೆ ಕಿಟ್ ವಿತರಿಸುವ ಮೂಲಕ ಕಷ್ಟಕ್ಕೆ ಸ್ಪಂದಿಸುವ ಅಭಯ ನೀಡಿದರು.

    ಕರೊನಾ ಸಂಕಷ್ಟದದಲ್ಲಿ ಉಸ್ತುವಾರಿ ಸಚಿವರು ವಿಶೇಷ ಕಾಳಜಿವಹಿಸಿ ನೆರವಿಗೆ ನಿಲ್ಲುತ್ತಿದ್ದಾರೆ ಎಂದು ಆಟೋ ಚಾಲಕರು ಸಂತಸ ವ್ಯಕ್ತಪಡಿಸಿದರು. ಇಡೀ ಕ್ರೀಡಾಂಗಣ ಆಟೋಗಳ ಸದ್ದಿನಿಂದ ಸಿನಿಮಾ ಚಿತ್ರೀಕರಣದಂತೆ ಕಂಡುಬಂತು.

    ಕೈಲಾದ ನೆರವು ನೀಡಬೇಕು: ಕರೊನಾದಂತ ಸಂಕಷ್ಟದ ಸಮಯದಲ್ಲಿ ಉಳ್ಳವರು ಕೈಲಾದ ನೆರವು ನೀಡಬೇಕು ಎಂದು ಎಂಟಿಬಿ ನಾಗರಾಜ್ ಹೇಳಿದರು.

    ಕರೊನಾ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾದವರಲ್ಲಿ ಆಟೋ ಹಾಗೂ ಕ್ಯಾಬ್ ಚಾಲಕರೂ ಸೇರಿದ್ದಾರೆ. ಇಂಥ ಶ್ರಮಿಕ ವರ್ಗದ ನೆರವಿಗೆ ಸರ್ಕಾರ ಮುಂದಾಗಿದೆ. ಇದರ ಜತೆಗೆ ಎಂಟಿಬಿ ಚಾರಿಟಬಲ್ ಟ್ರಸ್ಟ್ ವತಿಯಿಂದಲೂ ನೆರವು ನೀಡಲಾಗಿದೆ ಎಂದರು.

    ಲಾಕ್‌ಡೌನ್ ವೇಳೆ ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಊಟ, ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಸ್ಥಳೀಯ ಬಿಜೆಪಿ ಮುಖಂಡರ ಸಹಕಾರದೊಂದಿಗೆ ದಿನಸಿ ಕಿಟ್ ಹಾಗೂ ಉಚಿತ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts