More

    ಆಕಳ ಕೆಚ್ಚಲಿಗೆ ಮಾರಕಾಸ್ತ್ರದಿಂದ ಹಲ್ಲೆ

    ಗದಗ: ದುಷ್ಕರ್ವಿುಗಳು ಮಾರಾಕಾಸ್ತ್ರಗಳಿಂದ ಗೋವಿನ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿರುವ ಅಮಾನವೀಯ ಘಟನೆ ರಾಧಾಕೃಷ್ಣ ನಗರದಲ್ಲಿ ನಡೆದಿದೆ.

    ನಗರದ ಹುಡ್ಕೋ ಕಾಲನಿ ನಿವಾಸಿ ಅನಸಮ್ಮ ಹಿರೇಮಠ ಎಂಬುವವರಿಗೆ ಸೇರಿದ ಗೋವು ಗಾಯಗೊಂಡಿದೆ. ರಾಧಾಕೃಷ್ಣ ನಗರದಲ್ಲಿ ಅನಸಮ್ಮ ಅವರಿಗೆ ಸೇರಿದ ಶೆಡ್ ಇದ್ದು, ಅದರಲ್ಲಿ ಜಾನುವಾರುಗಳನ್ನು ಕಟ್ಟಿಹಾಕಿ ಹುಡ್ಕೋದಲ್ಲಿರುವ ಮನೆಗೆ ಬರುತ್ತಿದ್ದರು. ದುಷ್ಕರ್ವಿುಗಳು ಶನಿವಾರ ರಾತ್ರಿ ಶೆಡ್​ನಲ್ಲಿ ಮೂರು ಹಸುಗಳ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದಾರೆ. ಮೂರೂ ಹಸುಗಳ ಬಾಲಗಳನ್ನು ತುಂಡರಿಸಲಾಗಿದೆ. ಅಲ್ಲದೆ, ಮೂರು ದಿನಗಳ ಹಿಂದೆ ಕರುವಿಗೆ ಜನ್ಮ ನೀಡಿದ ಹಸುವೊಂದರ ಕೆಚ್ಚಲಿಗೆ ಮಾರಾಕಾಸ್ತ್ರಗಳಿಂದ ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದಾರೆ. ಇದರಿಂದ ಕರುವಿಗೆ ಹಾಲುಣಿಸಲು ಸಹ ಹಸುವಿಗೆ ಸಾಧ್ಯವಾಗುತ್ತಿಲ್ಲ. ಜಾನುವಾರುಗಳಿರುವ ಶೆಡ್​ಗೆ ಗದಗ ಗ್ರಾಮೀಣ ಪೊಲೀಸರು ಸೋಮವಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗೋವಿನ ಮೇಲೆ ಪೈಶಾಚಿಕ ಕೃತ್ಯ ಎಸಗಿದವರನ್ನು ಬಂಧಿಸಿ ಕ್ರಮಕೈಗೊಳ್ಳಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

    ಮಾಟಗಾರರ ಕೃತ್ಯ?: ತಾಯಿ ಹಸು ಹಾಗೂ ಕರುವನ್ನು ನೋಡಿದರೆ ಕರುಳು ಚುರುಕ್ ಎನ್ನುತ್ತದೆ. ರಾತೊ್ರೕರಾತ್ರಿ ದುರುಳರು ಗೋವುಗಳ ಮೇಲೆ ದಾಳಿ ಮಾಡಿದ್ದಾರೆ. ಬಿಳಿ ಬಣ್ಣದ ಹಸು ಹಾಗೂ ಕರು ಇರುವುದರಿಂದ ಮಾಟ-ಮಂತ್ರ ಮಾಡುವವರು ಈ ಕೃತ್ಯ ಎಸೆಗಿರಬಹುದು ಎಂದು ನಾಗರಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.

    ಕಳೆದ 30 ವರ್ಷಗಳಿಂದ ಹೈನುಗಾರಿಕೆ ಮಾಡು ತ್ತಿದ್ದೇವೆ. ಆದರೆ, ಇಂತಹ ಘಟನೆ ಎಂದಿಗೂ ನಡೆದಿರಲಿಲ್ಲ. ಇದೀಗ ನಮಗೆ ಭಯ ಶುರುವಾಗಿದೆ. ಮೂಕ ಪ್ರಾಣಿಗಳ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ವಿಷಯವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಬೇಕು.
    |ಅನಸಮ್ಮ ಹಿರೇಮಠ ರಾಧಾಕೃಷ್ಣ ನಗರ,

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts