More

    ಅ.15ರ ವರೆಗೆ ಸರ್ಕಾರಕ್ಕೆ ಗಡುವು

    ಇಳಕಲ್ಲ: ಲಿಂಗಾಯತ ಪಂಚಮಸಾಲಿ 2ಎ ಮೀಸಲಾತಿ ಹಕ್ಕೊತ್ತಾಯವನ್ನು ಸರ್ಕಾರ ಅಕ್ಟೋಬರ್ 15 ರೊಳಗೆ ಈಡೇರಿಸದ್ದಿದರೆ ಮತ್ತೊಮ್ಮೆ ಬೆಂಗಳೂರಿನಲ್ಲಿ ವಿಶ್ವ ಲಿಂಗಾಯತ ಪಂಚಮಸಾಲಿ ಬೃಹತ್ ರ‌್ಯಾಲಿಯನ್ನು ಹಮ್ಮಿಕೊಳ್ಳುತ್ತೇವೆ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಮಹಾಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

    ನಗರದ ಎಸ್.ಆರ್.ಕೆ. ನಿಲಯದಲ್ಲಿ ಪಂಚಮಸಾಲಿ ಸಮಾಜ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಶರಣು ಶರಣಾರ್ಥಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

    ಮಕ್ಕಳ ಶಿಕ್ಷಣ ಸಲುವಾಗಿ 2ಎ ಮೀಸಲಾತಿಗಾಗಿ ಸಮಾಜವನ್ನು ಜಾಗೃತಿಗೊಳಿಸಿದ್ದರಿಂದ ಹಾಗೂ ಬೆಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ರಾಜ್ಯದ 30 ಜಿಲ್ಲೆಗಳಿಂದ 1 ಲಕ್ಷಕ್ಕೂ ಹೆಚ್ಚು ಜನರು ಸೇರಿದ್ದರು. ಇದರಿಂದ ಮೀಸಲಾತಿಯನ್ನು ಘೋಷಿಸಲು ಸರ್ಕಾರ ಕಾಲವಕಾಶವನ್ನು ಪಡೆದಿದೆ. ಖಂಡಿತ ನಮ್ಮ ಬೇಡಿಕೆ ಸರ್ಕಾರ ಈಡೇರಿಸುವ ವಿಶ್ವಾಸ ಇದೆ ಎಂದರು.

    ಪಾದಯಾತ್ರೆಯನ್ನು ಹಾಗೂ ಬೆಂಗಳೂರಿನಲ್ಲಿ ನಡೆದ ಬೃಹತ್ ಸಮಾವೇಶವನ್ನು ವಿಲಗೊಳಿಸಲು ಕೆಲವರು ಸಾಕಷ್ಟು ಪ್ರಯತ್ನಪಟ್ಟರು. ಆದರೆ, ಹರಿಹರದ ಮಾಜಿ ಶಾಸಕ ಎಸ್.ಎಚ್. ಶಿವಶಂಕರ, ಹುನಗುಂದದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಈ ಮೂರು ಹುಲಿಗಳು ಸೇರಿಕೊಂಡು ಸರ್ಕಾರದ ಕಣ್ಣು ತೆರೆಸಿದ್ದಾರೆ. ಸಮಾವೇಶಕ್ಕೆ ಲಕ್ಷ ಲಕ್ಷ ಬಿಳಿ ಜೋಳದ ರೋಟಿ, ಹೊಳಿಗೆ ಮಾಡಿಸಿ ಕಳಿಸಿದ ಇಳಕಲ್ಲ-ಹುನಗುಂದ ಅವಳಿ ತಾಲೂಕುಗಳ ಸಮಾಜ ಬಾಂಧವರ ಕಾರ್ಯ ಸ್ಮರಣೀಯ ಎಂದರು.

    ಮಾಜಿ ಶಾಸಕರಾದ ಎಸ್.ಎಚ್. ಶಿವಶಂಕರ, ವಿಜಯಾನಂದ ಕಾಶಪ್ಪನವರ ಮಾತನಾಡಿ, 2ಎ ಮೀಸಲಾತಿ ಪಡೆಯುವವರೆಗೆ ನಮ್ಮ ಹೋರಾಟ ನಿರಂತರವಾಗಿರುತ್ತದೆ. ಸಮಾಜದ ಒಳಿತಿಗಾಗಿ, ಏಳಿಗಾಗಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.

    ಜಿಪಂ ಸದಸ್ಯೆ ವೀಣಾ ಕಾಶಪ್ಪನವರ, ಸಮಾಜದ ಮುಖಂಡರಾದ ಅಮರೇಶ ನಾಗೂರ, ಎಸ್.ಬಿ. ಪಾಟೀಲ, ಮಹಾಂತಗೌಡ ಪಾಟೀಲ, ಸುಭಾಸ ಕೊಪ್ಪದ, ಮಹಾಂತೇಶ ಕಡಿವಾಲ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts