More

    ಅರ್ಹ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಲಿ

    ಸವದತ್ತಿ: ರಾಜ್ಯ ಸರ್ಕಾರ ಕಾರ್ಮಿಕರ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಅವುಗಳನ್ನು ಲಾನುಭವಿಗಳಿಗೆ ತಲುಪಿಸುವ ಕಾರ್ಯ ಪ್ರಾಮಾಣಿಕವಾಗಿ ಆಗಬೇಕಿದೆ ಎಂದು ಸವದತ್ತಿಯ ಕಾರ್ಮಿಕ ಇಲಾಖೆಯ ನಿರೀಕ್ಷಕ ಮಹೇಶ ಬಾಗೋಜಿ ಹೇಳಿದರು.

    ಪಟ್ಟಣದ ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕ ದಿನಾಚರಣೆಯ ಅಂಗವಾಗಿ ನವ ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರ ನಿರ್ಮಾಣ ಒಕ್ಕೂಟ ಮತ್ತು ಎಐಸಿಸಿ ಮಾನವ ಹಕ್ಕುಗಳ ಸಮಿತಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಕಾರ್ಮಿಕ ಇಲಾಖೆಯಿಂದ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ಧನ ಸಹಾಯ, ಕಾರ್ಮಿಕರಿಗೆ ವೈದ್ಯಕೀಯ ನೆರವು, ಕಾರ್ಮಿಕರಿಗೆ ಅಪಘಾತ ಧನ ಸಹಾಯ, ಹೆರಿಗೆ ಭತ್ಯೆ ಸೌಲಭ್ಯ, ಮೃತ ಕಾರ್ಮಿಕರ ಅಂತ್ಯಸಂಸ್ಕಾರಕ್ಕೆ ಧನ ಸಹಾಯ, ವಾರ್ಷಿಕ ವೈದ್ಯಕೀಯ ತಪಾಸಣೆ ಶಿಬಿರವನ್ನು ಸರ್ಕಾರ ಕಾರ್ಮಿಕರ ಕಲ್ಯಾಣಕ್ಕಾಗಿ ಹಮ್ಮಿಕೊಂಡಿದೆ. ಈ ಎಲ್ಲ ಸೌಲಭ್ಯಗಳು ಕಾರ್ಮಿಕರಿಗೆ ತಲುಪಿಸುವ ಕಾರ್ಯ ಮಾಡಬೇಕಾಗಿದೆ ಎಂದರು.

    ಕಾರ್ಮಿಕರ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಬಸವರಾಜ ಆಯಟ್ಟಿ ಮಾತನಾಡಿ, ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರಿಗೆ ಸರ್ಕಾರದಿಂದ ಸೌಲಭ್ಯಗಳನ್ನು ಸರಳವಾಗಿ ಸಿಗುವಂತೆ ಮಾಡಬೇಕು ಎಂದರು.

    ಕಾರ್ಮಿಕ ನಿರೀಕ್ಷಕ ಮಹೇಶ ಬಾಗೋಜಿ ಅವರನ್ನು ಒಕ್ಕೂಟದಿಂದ ಸತ್ಕರಿಸಲಾಯಿತು. ಬಸವರಾಜ ಶಿರಸಂಗಿ, ಲತ್ೀ ಸೌದತ್ತಿ, ಮಕ್ತುಮ್ ಮುಮ್ಮಿಗಟ್ಟಿ, ಮಲ್ಲಿಕಾರ್ಜುನ ಕತ್ತಿ, ವಿಜಯಲಕ್ಷ್ಮೀ ತೊಡಕರ, ವನಜಾಕ್ಷಿ ಸಾಬಣ್ಣವರ, ಸಾವಿತ್ರಿ ಶಿಬರಗಟ್ಟಿ, ಮಂಜುನಾಥ ಜಗದಾರ, ಮಹೇಶ ಮಿರಜಕರ, ವಿಜಯ ಪೂಜಾರ ಹಾಗೂ ಇಲಾಖೆ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts