More

    ಅರಸೀಕೆರೆ ಕ್ಷೇತ್ರದಲ್ಲಿ 2,10,126 ಮತದಾರು

    ಅರಸೀಕೆರೆ: ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ 2,10,126 ಮತದಾರರ ಹೆಸರು ನೋಂದಣಿಯಾಗಿದೆ ಎಂದು ಚುನಾವಣಾಧಿಕಾರಿ ಎಂ.ಎನ್. ರಾಜ ಸುಲೋಚನ ಮಾಹಿತಿ ನೀಡಿದ್ದಾರೆ.

    1,04,724 ಪುರುಷ, 1,05,402 ಮಹಿಳಾ ಮತದಾರರಿದ್ದಾರೆ. ಈ ಬಾರಿ 4087 ಯವಕ, ಯವತಿಯರ ಹೆಸರು ಸೇರ್ಪಡೆಗೊಂಡಿದ್ದು, ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸಲಿದ್ದಾರೆ. 2,930 ಅಂಗವಿಕಲ, 80 ವರ್ಷ ಮೇಲ್ಪಟ್ಟ 8,295 ಹಿರಿಯ ನಾಗರಿಕ ಹಾಗೂ 64 ಶತಾಯುಷಿಗಳಿದ್ದಾರೆ. ಚಿಂದೇನಹಳ್ಳಿ ಗಡಿ, ಮೈಲನಹಳ್ಳಿ, ಬೊಮ್ಮಸಮುದ್ರ, ಚಿಕ್ಕಾರೆಹಳ್ಳಿ ಸೇರಿ ಹಲವೆಡೆ ಚೆಕ್ ಪೋಸ್ಟ್ ತೆರೆಯಲಾಗಿದ್ದು, ಕಣ್ಗಾವಲು ತಂಡ ರಚಿಸಲಾಗಿದೆ.

    ಕ್ಷೇತ್ರದಲ್ಲಿ 276 ಮತಗಟ್ಟೆಗಳನ್ನು ತೆರೆಯಲಾಗಿದ್ದು, 75 ಕ್ಲಿಷ್ಟ ಹಾಗೂ ಮೂರು ಮತಗಟ್ಟೆಗಳನ್ನು ಅತಿಸೂಕ್ಷ್ಮವೆಂದು ಗುರುತಿಸಲಾಗಿದೆ. 80 ವರ್ಷ ಮೇಲ್ಪಟ್ಟವರು, ಅಂಗವಿಕಲರು ಹಾಗೂ ಕೋವಿಡ್ ಬಾಧಿತರಿಗೆ ಅಂಚೆ ಮತದಾನ ಮಾಡಲು ಅನುವು ಮಾಡಿಕೊಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳ ಮುಖಂಡರು ಸಭೆ, ಸಮಾರಂಭ ನಡೆಸಲು ಕಚೇರಿಯಿಂದ 24 ಗಂಟೆಯೊಳಗೆ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ನಿಯಮ ಉಲ್ಲಂಘಿಸಿದಲ್ಲಿ ಆಯೋಗದ ನಿರ್ದೇಶನದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts