More

    ಅರಕಲಗೂಡು ಪಪಂಗೆ ಶಾರದಾ ಅಧ್ಯಕ್ಷೆ

    ಅರಕಲಗೂಡು: ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಶಾರದಾ ಪೃಥ್ವಿರಾಜ್ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.

    ಪಕ್ಷದ ಆಂತರಿಕ ಒಪ್ಪಂದದಂತೆ ಕಾಂಗ್ರೆಸ್‌ನ ಅಬ್ದುಲ್ ಬಾಸಿದ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ತೆರವಾಗಿದ್ದ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ 15ನೇ ವಾರ್ಡ್‌ನ ಶಾರದಾ ಪೃಥ್ವಿರಾಜ್ ಮತ್ತು ಬಿಜೆಪಿಯಿಂದ ಎಚ್.ಎಸ್.ರಶ್ಮಿ ಮಂಜು ನಾಮಪತ್ರ ಸಲ್ಲಿಸಿದ್ದರು. ಕೊನೆಯ ಕ್ಷಣದಲ್ಲಿ ರಶ್ಮಿ ನಾಮಪತ್ರ ವಾಪಸ್ ಪಡೆದ ಕಾರಣ ಶಾರದಾ ಅವಿರೋಧವಾಗಿ ಆಯ್ಕೆಯಾದರು.

    ಪಂಚಾಯಿತಿಯ 17 ಸದಸ್ಯರಲ್ಲಿ 12 ಸದಸ್ಯರು ಸಭೆಗೆ ಹಾಜರಾಗಿದ್ದು, ಜೆಡಿಎಸ್‌ನ ಇಬ್ಬರು ಮತ್ತು ಬಿಜೆಪಿಯ 3 ಸದಸ್ಯರು ಗೈರಾಗಿದ್ದರು. ಚುನಾವಣೆ ನಡೆದಲ್ಲಿ ಮತಗಳ ಕೊರತೆ ಎದುರಾಗಿ ಮೈತ್ರಿಕೂಟದ ಅಭ್ಯರ್ಥಿಗೆ ಆತಂಕದ ಸ್ಥಿತಿ ಉಂಟಾಗಬಹುದೆಂಬ ಕಾರಣದಿಂದ ಶಾಸಕ ಎ.ಟಿ.ರಾಮಸ್ವಾಮಿ ಸಭೆಯಲ್ಲಿ ಹಾಜರಿದ್ದರು. ಬಿಜೆಪಿ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆಯುತ್ತಿದ್ದಂತೆ ಸಭೆಯಿಂದ ನಿರ್ಗಮಿಸಿದರು. ತಹಸೀಲ್ದಾರ್ ಕೆ.ಆರ್.ಶ್ರೀನಿವಾಸ್ ಚುನಾವಣಾ ಕಾರ್ಯ ನಿರ್ವಹಿಸಿದರು. ಪಪಂ ಮುಖ್ಯಾಧಿಕಾರಿ ಎಸ್.ಆರ್.ಸವಿತಾ ಉಪಸ್ಥಿತರಿದ್ದರು.

    ತಾಲೂಕು ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್, ಮುಖಂಡರಾದ ಎಂ.ಟಿ.ಕೃಷ್ಣೇಗೌಡ, ಡಾ.ದಿನೇಶ್ ಭೈರೇಗೌಡ, ಎಚ್.ಪಿ.ಶ್ರೀಧರ್‌ಗೌಡ, ಗಣೇಶ್ ವೇಲಾಪುರಿ, ನಾಗರಾಜ್, ಮಂಜುನಾಥ್, ಗೋಪಾಲಸ್ವಾಮಿ, ಸಂತೋಷ್, ಜೆಡಿಎಸ್ ಮುಖಂಡ ಅಬ್ದುಲ್ ಅಲೀಮ್, ಪಪಂ ಸದಸ್ಯರು, ಬೆಂಬಲಿಗರು ಮತ್ತು ಕಾರ್ಯಕರ್ತರು ಅಧ್ಯಕ್ಷರನ್ನು ಗೌರವಿಸಿ ವಿಜಯೋತ್ಸವ ಆಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts