More

    ಅಮೃತ ಸರೋವರ ಯೋಜನೆ ಸದ್ಬಳಕೆಯಾಗಲಿ

    ಹುಮನಾಬಾದ್: ಭೂಮಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಗ್ರಾಮಗಳಲ್ಲಿನ ಹಳೇ ಕೆರೆಗಳ ಪುನಶ್ಚೇತನಕ್ಕೆ ಸ್ವಾತಂತ್ರೃ ಅಮೃತ ಮಹೋತ್ಸವ ನಿಮಿತ್ತ ಜಾರಿಗೆ ತಂದಿರುವ ಅಮೃತ ಸರೋವರ ಯೋಜನೆ ಅತ್ಯಂತ ಉಪಯುಕ್ತವಾಗಿದ್ದು, ಇದರ ಸದ್ಬಳಕೆಯಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್ ಹೇಳಿದರು.

    ಕಬಿರಾಬಾದ್ವಾಡಿ ಗ್ರಾಮದಲ್ಲಿ ನರೇಗಾ ಯೋಜನೆಯಡಿಯಲ್ಲಿ ನಿಮರ್ಾಣ ಮಾಡಿರುವ ಅಮೃತ ಸರೋವರ ಕೆರೆ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸ್ವಾತಂತ್ರೃ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ತ್ರಿವರ್ಣ ಧ್ವಜ ಹಾರಿಸಿ ಮಾತನಾಡಿದ ಅವರು, ಪ್ರಾಚೀನ ಕಾಲದಿಂದಲೂ ಕೆರೆಗಳು ನಮ್ಮ ಸಾಮಾಜಿಕ ಹಾಗೂ ಆಥರ್ಿಕ ಚಟುವಟಿಕೆಗಳೊಂದಿಗೆ ಬೆಸೆದಿವೆ. ನೀರವಾರಿ ಪ್ರಮುಖ ಉಪಯೋಗವಾದರೆ ಮೀನುಗಾರಿಕೆ, ದನ-ಕರುಗಳಿಗೆ ಕುಡಿಯುವ ನೀರು, ಜನಸಾಮ್ಯಾನರಿಗೆ ದಿನ ಬಳಕೆಯ ನೀರು, ಪಶು-ಪಕ್ಷಿಗಳಿಗೆ ಕೆರೆಯೇ ಆಧಾರ ಎಂದರು.

    ಜಿಪಂ ಉಪಕಾರ್ಯದಶರ್ಿ ವಿಜಕುಮಾರ ಮಡ್ಡೆ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸಕರ್ಾರದ ನಿದರ್ೇಶನದಂತೆ ನರೇಗಾ ಯೋಜನೆಯಡಿಯಲ್ಲಿ ನಿಮರ್ಾಣ ಮಾಡಿರುವ ಕೆರೆಗಳಲ್ಲಿ ತಿರಂಗಾ ಹಾರಿಸುವ ಮೂಲಕ ಸ್ವಾತಂತೊ್ರೃತ್ಸವ ಆಚರಣೆ ಮಾಡಲಾಗಿದೆ ಎಂದು ತಿಳಿಸಿದರು.

    ತಾಪಂ ಇಒ ಮುರಗೆಪ್ಪ, ತಾಪಂ ಎಡಿ ಸಂಜೀವಕುಮಾರ ಅವುಂಟ್ಗಿ, ಶಿವಲೀಲಾ, ಪಶುವೈದ್ಯಾಧಿಕಾರಿ ಡಾ.ಗೋವಿಂದ, ಪಂಚಾಯತ್ ರಾಜ್ ಇಲಾಖೆ ಎಇ ಶಿವಕುಮಾರ ಕವಟಗಿ, ಶಿವರಾಜ ಪಾಟೀಲ್, ಉಮೇಶ ಮಲಗಿ, ಎಂ.ಡಿ.ಮೌಲಾನ್, ಗ್ರಾಪಂ ಅಧ್ಯಕ್ಷ ವಿಠಲ ಡಾವರಗಾಂವ, ಸದಸ್ಯರಾದ ಸಂಗೀತಾ ಪಾಟೀಲ್, ಪಿಡಿಒ ರೇಖಾ, ಪ್ರಮುಖರಾದ ಕಾಶೀನಾಥ ಸ್ವಾಮಿ, ಶರಣಪ್ಪ ಗೌಡಗಾಂವ, ಕಾಶೀನಾಥ ಹುಡಗೆ, ತಾನಾಜಿ ಪಾಟೀಲ್, ಶರಣಪ್ಪ ಮಿಂಚಿ, ಮಹೇಶ, ವಿಶ್ವನಾಥ, ವಿರಶೇಟ್ಟಿ, ಸಂಜುಕುಮಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts