More

    ಅಪ್ಪನ ಕೆರೆಯಲ್ಲಿ ದೋಣಿ ಓಟದ ಸ್ಫರ್ಧೆ

    ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ನಗರದ ಶರಣಬಸವೇಶ್ವರ(ಅಪ್ಪನ) ಕರೆಯಲ್ಲಿ ಆಯೋಜಿಸಲಾದ ಕಾಯಾಕಿಂಗ್ ಸ್ಪರ್ಧೆಯು ಬಿರುಸಿನಿಂದ ಕೂಡಿತು.

    ಒಲಂಪಿಕ್ ಕ್ರೀಡಾಕೂಟದಲ್ಲಿ ಖ್ಯಾತಿ ಪಡೆದಿರುವ ಕಾಯಾಕಿಂಗ್ ಕ್ರೀಡೆಯು ಇದೇ ಮೊದಲ ಬಾರಿಗೆ ಕಲಬುರಗಿಯಲ್ಲಿ ಏರ್ಪಡಿಸಲಾಗಿತ್ತು. ಜನನ ಸ್ಪರ್ಧೆಯಲ್ಲಿ 12 ಹುಡುಗರ ಹಾಗೂ 6 ಹುಡುಗಿಯರ ತಂಡ ಸೇರಿ ಒಟ್ಟು 18 ತಂಡಗಳ 36 ಸ್ಪರ್ಧಿಗಳು ಭಾಗವಹಿಸಿದರು. ಒಂದು ಹಡಗಿನಲ್ಲಿ ತಲಾ ಇಬ್ಬರಂತೆ ಪಾಲ್ಗೊಂಡರು.

    ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯು ಸ್ಪರ್ಧಿಗಳಿಗೆ ತರಬೇತಿ ಹಾಗೂ ಸುರಕ್ಷಾ ಕವಚ ನೀಡಿತು. ಈ ತಂಡದಲ್ಲಿ ಗಂಗಾಧರ್, ಬಶೀರ್, ಯದುವೀರ್, ದಾದಾಪೀರ್, ಖಮ್ಮೆಶ್ ಇದ್ದರು.

    ಪ್ರಥಮ ಸ್ಥಾನ ವಿಜೇತ ತಂಡಕ್ಕೆ 5 ಸಾವಿರ, ದ್ವಿತೀಯ 3 ಸಾವಿರ ಹಾಗೂ ತೃತೀಯ 2 ಸಾವಿರ ಬಹುಮಾನ ನೀಡಲಾಯಿತು. ಸಾರ್ವಜನಿಕರಿಗಾಗಿ ರೋಯಿಂಗ್, ಬೋಟಿಂಗ್ ಗೆ ಒಂದು ಸುತ್ತಿಗೆ 25ರು. ನಿಗದಿ ಪಡಿಸಲಾಗಿದೆ.

    ಕಲಬುರಗಿಯಲ್ಲಿ ಇದೇ ಮೊದಲ ಬಾರಿಗೆ ಇಂತಹ ಕ್ರೀಡೆ ಆಯೋಜನೆ ಮಾಡಿದ್ದು, ಸಂತಸ ಉಂಟು ಮಾಡಿದೆ. ನಮ್ಮಿಂದ ಅನೇಕರು ಸ್ಫೂರ್ತಿ ಪಡೆದು ಹೆಚ್ಚು ಹೆಚ್ಚಾಗಿ ಕ್ರೀಡೆಗಳಲ್ಲಿ ಪಾಲ್ಗೊಳಲ್ಲಿ ಎಂದು ಕಾಯಾಕಿಂಗ್ ಸ್ಪರ್ಧೆಯಲ್ಲಿ ವಿಜೇತರಾದ ಸ್ವಾತಿ ಹಾಗೂ ತನುಜಾ ಎಂ. ತಮ್ಮ ಅಭಿಪ್ರಾಯ ಹಂಚಿಕೊಂಡರು.

    ಒಲಂಪಿಕ್ ಕ್ರೀಡಾಕೂಟದಲ್ಲಿ ಖ್ಯಾತಿ ಪಡೆದಿರುವ ಕಾಯಾಕಿಂಗ್ ಕ್ರೀಡೆಯ ಬಗ್ಗೆ ಅರಿವು ಮೂಡಿಸಲು ಈ ಭಾಗದಲ್ಲಿ ಕಾಯಾಕಿಂಗ್ ಸ್ಪರ್ಧೆ ಆಯೋಜನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ಭಾಗದ ಹೆಚ್ಚಿನ ಯುವಕರು ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಮೆಡಲ್ ಗೆಲ್ಲುವಂತಾಗಲಿ ಎಂದು ಶಾಕೀಬ್ ಹೇಳಿದರು.

    ಕಾಯಾಕಿಂಗ್ ವಿಜೇತರು

    ಪ್ರಥಮ: ಮೋತಿ ಸಿಂಗ್, ಮೋಹನ್
    ದ್ವಿತೀಯ: ಮಹೇಶ್, ಕಲ್ಯಾಣಿ
    ತೃತೀಯ: ಆಶೀಶ್, ದತ್ತಾತ್ರೇಯ

    ಯುವತಿಯರ ಕಾಯಾಕಿಂಗ್ ವಿಜೇತರು

    ಪ್ರಥಮ: ಉಜಾಲ, ಸೇವಂತಿ (2.19 ನಿಮಿಷ), ದ್ವಿತೀಯ: ಭಾವನ ಪಾಟೀಲ್, ತನುಜಾ (2.36 ನಿಮಿಷ), ತೃತೀಯ: ಸ್ವಾತಿ ಜೆ., ಸೌಂದರ್ಯ(2.53 ನಿಮಿಷ).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts