More

    ಅಪನಂಬಿಕೆಗಳನ್ನು ಬಿಟ್ಟು ಎಲ್ಲರೂ ಲಸಿಕೆ ಪಡೆಯಿರಿ

    ಚಿಕ್ಕಮಗಳೂರು: ಲಸಿಕೆ ಹಾಕಿಸಿಕೊಳ್ಳುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಆರೋಗ್ಯ ವೃದ್ಧಿಸಲಿದ್ದು, ಜನರು ಲಸಿಕೆ ಬಗ್ಗೆ ಇರುವ ಅಪನಂಬಿಕೆ ಬಿಟ್ಟು ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಬಸವತತ್ವ ಪೀಠದ ಡಾ.ಬಸವ ಮರುಳುಸಿದ್ದ ಸ್ವಾಮೀಜಿ ಹೇಳಿದರು.
    ಸೋಮವಾರ ನಗರ ಹೊರವಲಯದ ದೊಡ್ಡಕುರುಬರ ಹಳ್ಳಿ ಬಸವತತ್ವ ಪೀಠದಲ್ಲಿ ವ್ಯಾಕ್ಸಿನ್ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಲಸಿಕೆ ಪಡೆದರೆ ಆಯಸ್ಸು, ಪುರುಷತ್ವ ಕಡಿಮೆಯಾಗುತ್ತಿದೆ, ಆರೋಗ್ಯದ ಸಮಸ್ಯೆ ಕಾಡುತ್ತದೆ ಎಂಬ ಅನುಮಾನ ಬಿಟ್ಟು ಲಸಿಕೆ ಹಾಕಿಸಿಕೊಂಡು ಬೇರೆಯವರಿಗೂ ಪ್ರೇರಣೆಯಾಗಿ ಕರೊನಾ ಎದುರಿಸುವ ಯುದ್ಧದಲ್ಲಿ ಎಲ್ಲರೂ ಜಯಗಳಿಸಬೇಕು ಎಂದರು.
    ದೇಶದಲ್ಲಿ ಈಗಾಗಲೆ 36 ಕೋಟಿ ಜನರಿಗೆ ಲಸಿಕೆ ಹಾಕಲಾಗಿದೆ ಎಂದರೆ ನಮ್ಮ ದೇಶದ ಅಂತರಿಕ ಶಕ್ತಿ ಬಗ್ಗೆ ಅರಿಯಬೇಕು. ಇದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆ. ಮಠದ ಟ್ರಸ್ಟಿಗಳೊಂದಿಗೆ ರ್ಚಚಿಸಿ ಸುತ್ತಮುತ್ತಲ ಒಂದು ಸಾವಿರ ಮಂದಿಗೆ ಲಸಿಕೆ ಹಾಕುವ ಕಾರ್ಯಕ್ಕೆ ಜಿಲ್ಲಾಡಳಿತ ಸಹಕರಿಸಿದೆ ಎಂದರು.
    ಶಾಸಕ ಸಿ.ಟಿ.ರವಿ ಮಾತನಾಡಿ, ಕಣ್ಣಿಗೆ ಕಾಣದ ವೈರಸ್​ಗಳ ಹಿಂದೆ ವಿಜ್ಞಾನಿಗಳು ಓಡುತ್ತಿದ್ದಾರೆ. ವೈರಸ್ ವೇಷ ಬದಲಿಸಿ ಹೊಸ ರೀತಿಗಳಲ್ಲಿ ತೊಂದರೆ ಕೊಡುತ್ತಿದ್ದು ಅದರ ವಿರುದ್ಧ ಹೋರಾಡಲು ವಿಜ್ಞಾನಿಗಳು ಶ್ರಮಿಸುತ್ತಿದ್ದಾರೆ. ಭಾರತೀಯರ ಸಾಮರ್ಥ್ಯವನ್ನು ನಮ್ಮ ವಿಜ್ಞಾನಿಗಳು ವಿಶ್ವಕ್ಕೆ ತೋರಿಸಿದ್ದಾರೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts