More

    ಪೋಷಕಾಂಶ ಆಹಾರದಿಂದ ರೋಗ ನಿರೋಧಕ ಶಕ್ತಿ – ಕೆವಿಕೆ ಮುಖ್ಯಸ್ಥೆ ಡಾ.ವಾಣಿಶ್ರೀ ಸಲಹೆ

    ಲಿಂಗಸುಗೂರು: ಪೋಷಕಾಂಶಯುಕ್ತ ಆಹಾರ ಸೇವನೆಯಿಂದ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳಲು ಸಾಧ್ಯ ಎಂದು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥೆ ಡಾ.ವಾಣಿಶ್ರೀ ಹೇಳಿದರು.

    ಪಟ್ಟಣದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ರೈತ ಮಹಿಳೆಯರಿಗಾಗಿ ಶನಿವಾರ ಆಯೋಜಿಸಿದ್ದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಎರಡು ವರ್ಷಗಳಿಂದ ಕೋವಿಡ್ ಮಹಾಮಾರಿಯಿಂದ ಸಾವು, ನೋವುಗಳು ಸಂಭವಿಸಿವೆ. ಕೋವಿಡ್ ಲಸಿಕೆ ಪಡೆದುಕೊಳ್ಳಬೇಕು. ಜತೆಗೆ ಸ್ಥಳೀಯವಾಗಿ ಬೆಳೆದ ಹಣ್ಣು, ತರಕಾರಿ ಸೇವನೆಯಿಂದ ಸದೃಢ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ ಎಂದರು.

    ಆಯುರ್ವೇದ ವೈದ್ಯ ಪಾಂಡುರಂಗ ಆಪ್ಟೆ ಮಾತನಾಡಿ, ಸ್ವಾಸ್ಥ್ಯ ಜೀವನಕ್ಕೆ ಉತ್ತಮ ಜೀವನ ಶೈಲಿ ಮತ್ತು ಸಾತ್ವಿಕ ಆಹಾರ ಕಾರಣವಾಗಿವೆ. ಔಷಧೀಯ ಸಸ್ಯಗಳನ್ನು ಮನೆಯಲ್ಲಿಯೇ ಬೆಳೆದು ಉಪಯೋಗಿಸಿದರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ ಎಂದರು. ಬಾಗಲಕೋಟೆಯ ಡಾ.ಭಾರತಿ ಮೇಟಿ, ರೋಗ ನಿರೋಧಕ ಆಹಾರ ಉತ್ಪನ್ನಗಳ ತಯಾರಿಕೆ, ಮೌಲ್ಯವರ್ಧನೆ ಹಾಗೂ ಮಾರುಕಟ್ಟೆಯ ಕುರಿತು ವಿವರಿಸಿದರು. ಅಣಬೆ ಕೃಷಿ ಮತ್ತು ಪೌಷ್ಟಿಕ ಕೈತೋಟ ನಿರ್ವಹಣೆ ಕುರಿತು ವಿಜ್ಞಾನಿಗಳಾದ ಬಿಂದು ಮತ್ತು ಅರವಿಂದ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts