More

    ಅನ್ಯಾಯಕ್ಕೆ ಅಂಕಿತ ಹಾಕುವ ಅಧಿಕಾರ ಇರುವುದು ನ್ಯಾಯಾಲಯಕ್ಕೆ ಮಾತ್ರ: ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್

    ಶಿಕಾರಿಪುರ: ನ್ಯಾಯದಾನ ಎನ್ನುವುದು ಅತ್ಯಂತ ಶ್ರೇಷ್ಠವಾದ, ಪವಿತ್ರವಾದ ಮತ್ತು ಪುಣ್ಯದಾಯಕವಾದಂತಹ ಕಾರ್ಯ. ಅಂತಹ ನ್ಯಾಯದಾನ ಮಾಡಿದ ನ್ಯಾಯಾಲಯಕ್ಕೆ ಸಾರ್ಥಕ್ಯದ ಐವತ್ತು ವಸಂತಗಳು ತುಂಬಿ ನಿಂತಿರುವುದು ಹೆಮ್ಮೆಯ ವಿಚಾರ ಎಂದು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಹೇಳಿದರು.
    ಭಾನುವಾರ ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಶಿಕಾರಿಪುರ ತಾಲೂಕು ವಕೀಲರ ಸಂಘ ಶಿಕಾರಿಪುರ ನ್ಯಾಯಾಲಯ ಐವತ್ತು ವರ್ಷ ತುಂಬಿದ ನೆನಪಿನಲ್ಲಿ ಆಯೋಜಿಸಿದ್ದ ಸುವರ್ಣ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಘನ ನ್ಯಾಯಾಲಯ ಐವತ್ತು ವರ್ಷಗಳಲ್ಲಿ ಹಿಂದುಳಿದವರಿಗೆ, ಬಡವರಿಗೆ, ಅಬಲರಿಗೆ, ಆಶಕ್ತರಿಗೆ ಸೇರಿದಂತೆ ಸರ್ವರಿಗೂ ನ್ಯಾಯದಾನ ಮಾಡಿದ ಹಿರಿಮೆ ಹೊಂದಿದೆ ಎಂದರು.
    ಇದೊಂದು ಕೇವಲ ಕಟ್ಟಡವಲ್ಲ. ಹಿರಿಮೆಯ ನ್ಯಾಯಮಂದಿರ. ನ್ಯಾಯದಾನ ಎನ್ನುವುದು ಒಂದು ಪರಮ ಸೇವೆ ಮತ್ತು ಕರ್ತವ್ಯ. ಇಲ್ಲಿ ನ್ಯಾಯವೇ ಪ್ರಧಾನ. ಅನ್ಯಾಯಕ್ಕೆ ಅಂಕಿತ ಹಾಕುವ ಅಧಿಕಾರ ಇರುವುದು ನ್ಯಾಯಾಲಯಕ್ಕೆ ಮಾತ್ರ. ಇದೊಂದು ದೇವಮಂದಿರ ನ್ಯಾಯಾಧೀಶರು ಮತ್ತು ನ್ಯಾಯವಾದಿಗಳ ನಡುವಿನ ಅವಿನಾಭಾವ ಸಂಬಂಧ ನಿರಂತರವಾಗಿದೆ. ಅದು ಪರಸ್ಪರರ ನಡುವಿನ ಮಧುರವಾದ ಸಂಬಂಧ ಎಂದು ಬಣ್ಣಿಸಿದರು.
    ಶಿಕಾರಿಪುರ ತಾಲೂಕು ಹಲವು ವೈಶಿಷ್ಟ್ಯಗಳ, ಹಲವು ಪ್ರಥಮಗಳ ನಾಡು. ಇಲ್ಲಿ ಬಂದಿದ್ದು ನಮ್ಮ ತಾಯ್ನಡಿಗೆ ಬಂದಂತಹ ಅನುಭವವಾಗಿದೆ. ನಾನು ಜನಿಸಿದ್ದು ಇದೇ ತಾಲೂಕಿನ ಬೇಗೂರಿನಲ್ಲಿ. ನನ್ನ ಬಾಲ್ಯ ಪೂರ್ಣ ಕಳೆದದ್ದು ಈ ಅಜ್ಜನ ಮನೆಯಲ್ಲಿ. ಅದು ಮರೆಯಲಾರದಂತಹ ಬಾಲ್ಯ. ಇಂದಿಗೂ ಈ ಕ್ಷಣಕ್ಕೂ ಕಣ್ಣಿಗೆ ಕಟ್ಟಿದ ಹಾಗಿದೆ. ನನಗೆ ಕೃಷ್ಣ ಎಂದು ಹೆಸರಿಟ್ಟವರೇ ಹಳ್ಳಿ ಸ್ಮರಣೀಯರು. ನನ್ನ ಆತ್ಮೀಯ ವಲಯದಲ್ಲಿದ್ದು ನೆನಪು ಮಾಸದಂತಿದ್ದ ಗಾಮದ ಹಾಲಪ್ಪನವರು, ರುದ್ರಪ್ಪನವರು, ಗೌರಮ್ಮನವರು ನಮ್ಮ ಬಾಲ್ಯದಲ್ಲಿನ ಸ್ಮರಣೀಯರು. ಜನನಿ ಮತ್ತು ಜನ್ಮಭೂಮಿಯ ಜತೆಗೆ ನಮಗೆ ಮರೆಯಲಾರದ ಸಂಬಂಧವಿರುತ್ತದೆ. ಇದೊಂದು ಶ್ರೇಷ್ಠವಾದ ಮಣ್ಣು. ಈ ಮಣ್ಣಿಗೆ ಬಂದಾಗಲೆಲ್ಲ ನನಗೆ ನನಗರಿವಿಲ್ಲದ ಹಾಗೆ ಧನ್ಯತಾ ಭಾವ ಮೂಡುತ್ತದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts