More

    ಅಧ್ಯಾತ್ಮ ನಂಬಿಕೆಯಿಂದ ದೇಶ ಭದ್ರ

    ಶಹಾಬಾದ್: ಭಾರತ ಆಧ್ಯಾತ್ಮಿಕ ತಾಣವಾಗಿದ್ದು, ದೇವಸ್ಥಾನ, ಅಧ್ಯಾತ್ಮ, ಧಾರ್ಮಿಕ ನಂಬಿಕೆಯಿಂದ ದೇಶ ಸುಭದ್ರವಾಗಿದೆ ಎಂದು ಕೇಂದ್ರ ಗ್ರಾಮೀಣ ಅಭಿವೃದ್ದಿ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ಅಭಿಪ್ರಾಯಪಟ್ಟರು.

    ತೊನಸನಳ್ಳಿ (ಎಸ್) ಗ್ರಾಮದಲ್ಲಿ ಮಲ್ಲಣ್ಣಪ್ಪ ಮಹಾರಾಜರು, ಅಲ್ಲಮಪ್ರಭು, ಸುಲ್ತಾನ್ ಅಹ್ಮದ್ ಶಾಹ್ವಲಿ ಜಾತ್ರೋತ್ಸವ ನಿಮಿತ್ತ ಸೋಮವಾರ ರಾತ್ರಿ ಹಮ್ಮಿಕೊಂಡಿದ್ದ ಧರ್ಮ ಸಭೆ ಉದ್ಘಾಟಿಸಿ ಮಾತನಾಡಿ, ಕೆಲ ರಾಜಕೀಯ ಮುಖಂಡರು ಚುನಾವಣೆ ಸಂದರ್ಭದಲ್ಲಿ ಮಾತ್ರ ಕಟ್ಟಾ ಹಿಂದುಗಳಂತೆ ವರ್ತಿಸುತ್ತಾರೆ. ಮತ ಗಳಿಸುವುದೊಂದೇ ಅವರ ಅಜೆಂಡಾ ಆಗಿದ್ದು, ಇಂಥವರ ಬಗ್ಗೆ ಜನರು ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.

    ಸಂಸದ ಡಾ.ಉಮೇಶ ಜಾಧವ್ ಮಾತನಾಡಿ, ನಾನು ಮೊದಲು ಸಾಧ್ವಿ ನಿರಂಜನ ಜ್ಯೋತಿ ಅವರ ಪಾದಕ್ಕೆ ನಮಸ್ಕರಿಸಿ ಸಂಸತ್ ಪ್ರವೇಶಿಸಿ, ಅಧಿವೇಶನದಲ್ಲಿ ಭಾಗಿಯಾಗಿರುವೆ. ಬಂಜಾರ, ಕೋಲಿ ಸಮಾಜ ಅನ್ಯೂನ್ಯವಾಗಿವೆ. ಕೋಲಿ ಸಮಾಜ ಎಸ್ಟಿಗೆ ಸೇರಿಸುವುದು ನಮ್ಮ ಪ್ರಮುಖ ಧ್ಯೇಯವಾಗಿದೆ ಎಂದರು.

    ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ ಮಾತನಾಡಿದರು.

    ಅಲ್ಲಮಪ್ರಭು ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಮಲ್ಲಣ್ಣಪ್ಪ ಸ್ವಾಮೀಜಿ ನೇತೃತ್ವ, ಶಾಸಕ ಬಸವರಾಜ ಮತ್ತಿಮಡು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ, ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ಕೇಂದ್ರ ಆಹಾರ ನಿಗಮ ಮಂಡಳಿ ನಿರ್ದೇಶಕಿ ಅಮರೇಶ್ವರಿ ಚಿಂಚನಸೂರ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಪ್ರಮುಖರಾದ ಭೀಮಣ್ಣ ಸಾಲಿ, ಸಂಜೀವಕುಮಾರ ವಾಡೇಕರ್, ಅಣವೀರ ಇಂಗಿನಶೆಟ್ಟಿ, ಭೀಮಣ್ಣ ಸುಣಗಾರ, ಜಗನ್ನಾಥ ಜಮಾದಾರ, ವಸಂತ ನರಬೋಳಿ, ನಿಂಗಣ್ಣ ಹುಳಗೋಳ, ಬಸವರಾಜ ಹರವಾಳ, ಸೂರ್ಯಕಾಂತ ಫುಲಾರಿ, ಶರಣಪ್ಪ ಹೊಸೂರ ಇತರರಿದ್ದರು.

    ಕಿರುತರೆ ನಟಿ ಪಾರು ಅವರಿಂದ ಸಂಗೀತ ಕಾರ್ಯಕ್ರಮ. ನಟ ದಿಲೀಪ್ ಮಳಬಾ ನಟನೆಯ ಪ್ರೀತಿಗೋಸ್ಕರ ಪ್ರಾಣ ಬಿಡಬೇಡಿ ಕಿರು ಚಿತ್ರವನ್ನು ಬಾಬುರಾವ ಚಿಂಚನಸೂರ ಬಿಡುಗಡೆಗೊಳಿಸಿದರು.

    ಚನ್ನವೀರ ಬೆಳಗುಂಪಿ ಪ್ರಾರ್ಥಿಸಿದರು. ಬಸವರಾಜ ಹೇರೂರ ಸ್ವಾಗತಿಸಿದರು. ಭಗವಂತರಾಯ ಬೆಣ್ಣೂರ ನಿರೂಪಣೆ ಮಾಡಿದರು. ಅಶೋಕ ನಾಟೀಕಾರ ವಂದಿಸಿದರು.

    ರಾವಣನ್ನು ಕೊಲ್ಲಲು ರಾಮ ಬಂದ, ಕಂಸನನ್ನು ಸಾಯಿಸಲು ಕೃಷ್ಣ ಬಂದ, ಮಲ್ಲಿಕಾಜರ್ುನ ಖಗರ್ೆಗೆ ಸೋಲಿಸಲು ಡಾ.ಉಮೇಶ ಜಾಧವ್ ಹುಟ್ಟಿ ಬಂದಿದ್ದಾರೆ. ಸ್ವಾತಂತ್ರೃ ಬಂದು 75 ವರ್ಷವಾದರೂ ಕೋಲಿ ಸಮಾಜಕ್ಕೆ ಸೂಕ್ತ ಸ್ಥಾನ ಸಿಕ್ಕಿಲ್ಲ, ನರೇಂದ್ರ ಮೋದಿ ಅವರು ಕೋಲಿ ಸಮಾಜದವರನ್ನು ರಾಷ್ಟ್ರಪತಿ ಮಾಡಿದ್ದಾರೆ. ಎರಡು ಬಾರಿ ಸಾಧ್ವಿ ನಿರಂಜನ್ ಜ್ಯೋತಿ ಅವರನ್ನು ಸಚಿವರನ್ನಾಗಿ ಮಾಡಿದ್ದಾರೆ. ಕಾಂಗ್ರೆಸ್ ಸರ್ವನಾಶವಾಗಿದ್ದು, ಮುಂದಿನ 20 ವರ್ಷ ಅಧಿಕಾರಕ್ಕೆ ಬರಲ್ಲ. ದೇಶದೆಲ್ಲೆಡೆ ಕೇಸರಿ ರಾರಾಜಿಸಲಿದೆ.
    | ಬಾಬುರಾವ ಚಿಂಚನಸೂರ, ಅಧ್ಯಕ್ಷ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ

    ಕರೊನಾದಿಂದ ಇಡೀ ದೇಶವೇ ತತ್ತರಿಸಿದಾಗ, ಪ್ರಧಾನಿ ನರೇಂದ್ರ ಮೋದಿ ಅವರು ಸಮರ್ಥ ಆಡಳಿತ ನೀಡಿ ಎಲ್ಲರನ್ನು ರಕ್ಷಿಸಿದ್ದಾರೆ. ಬಿಜೆಪಿ ಸಕರ್ಾರ ಹಿಂದು, ಮುಸ್ಲಿಂ, ಕ್ರೈಸ್ತ ಎಂದು ತಾರತಮ್ಯ ಮಾಡದೆ, ಎಲ್ಲರಿಗೂ ಉಚಿತ ಆಹಾರ ಹಾಗೂ ವ್ಯಾಕ್ಸಿನ್ ನೀಡಿದೆ. ಅದಲ್ಲದೆ ಯೂಕ್ರೇನ್ನಲ್ಲಿ ಸಿಲುಕಿದ್ದ ಭಾರತದವರು ಸೇರಿ ವಿದೇಶಿಗರನ್ನು ರಕ್ಷಿಸಿದ್ದಾರೆ. ಮೋದಿ ಹೈ ತೋ ಮುಮ್ಕೀನ್ ಹೈ.
    | ಸಾಧ್ವಿ ನಿರಂಜನ್ ಜ್ಯೋತಿ, ಕೇಂದ್ರ ಸಚಿವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts