More

    ಮರು ಪ್ರಾರಂಭಿಸಲು ಕಾನೂನು ತೊಡಕು

    ಶಹಾಬಾದ್: ಹೊರ ವಲಯದ ರಾಷ್ಟ್ರೀಯ ಹೆದ್ದಾರಿ-೧೫೦ರಲ್ಲಿರುವ ರಾಜ್ಯ ಕಾರ್ಮಿಕ ವಿಮಾ ಆಸ್ಪತ್ರೆಗೆ ಇಎಸ್‌ಐ ನಿರ್ದೇಶಕ ಡಾ.ವರದರಾಜ್ ಸೋಮವಾರ ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಆಸ್ಪತ್ರೆ ವ್ಯವಸ್ಥೆ, ಹೆಚ್ಚುವರಿಯಾಗಿ ನಿರ್ಮಿಸುತ್ತಿರುವ ವ್ಯದ್ಯಕೀಯ ಸಿಬ್ಬಂದಿ ವಸತಿ ಗೃಹ ಪರಿಶೀಲಿಸಿ ಮಾತನಾಡಿ, ಈ ಹಿಂದೆ ನಿರ್ಮಾಣವಾಗಿದ್ದ ಇಎಸ್‌ಐ ಆಸ್ಪತ್ರೆಯನ್ನು ಕೋವಿಡ್ ಸಂದರ್ಭದಲ್ಲಿ ಮೇಲ್ದರ್ಜೆಗೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಕಾರ್ಖಾನೆ ಪ್ರಾರಂಭವಾಗಬಹುದು. ಆಸ್ಪತ್ರೆ ಪ್ರಾರಂಭಿಸಲು ನಿಯಮದ ಪ್ರಕಾರ ಕನಿಷ್ಠ ೫೦ ಸಾವಿರ ಜನ ಇಎಸ್‌ಐ ಆಸ್ಪತ್ರೆ ವ್ಯಾಪ್ತಿಗೆ ಬರಬೇಕು. ಅಲ್ಲದೆ ೫೦ ಕಿಮೀ ಅಂತರದಲ್ಲಿ ಯಾವುದೇ ಇಎಸ್‌ಐ ಆಸ್ಪತ್ರೆ ಇರಬಾರದು. ಆದರೆ ೨೨ ಕಿಮೀ ಅಂತರದಲ್ಲಿ ಕಲಬುರಗಿಯಲ್ಲಿ ಇಎಸ್‌ಐ ಅಸ್ಪತ್ರೆ ಇದೆ. ಹೀಗಾಗಿ ಆಸ್ಪತ್ರೆ ಆರಂಭಿಸಲು ಕಾನೂನು ತೊಡಕುಗಳಿವೆ ಎಂದು ತಿಳಿಸಿದರು.

    ಸದ್ಯಕ್ಕೆ ಈ ಆಸ್ಪತ್ರೆ ಪ್ರಾರಂಭಿಸಿದ್ದಲ್ಲಿ ೨೫ ರಿಂದ ೩೦ ಸಾವಿರ ಜನ ಇಎಸ್‌ಐ ವ್ಯಾಪ್ತಿಗೆ ಬರುತ್ತಿದ್ದು, ವಿಶೇಷ ಸಂದರ್ಭವೆಂದು ಪರಿಗಣಿಸಿ ಇಷ್ಟೇ ಕಾರ್ಮಿಕರಿಂದ ಆಸ್ಪತ್ರೆ ಪ್ರಾರಂಭಿಸುವ ಕುರಿತು ಯೋಚಿಸಲಾಗುತ್ತಿದೆ ಎಂದು ತಿಳಿಸಿದರು.

    ಇಎಸ್‌ಐ ಕಾರ್ಪೋರೇಷನ್ ಪ್ರಾದೇಶಿಕ ನಿರ್ದೇಶಕ ಡಾ.ಟಿ.ರೇಣುಕಾ ಪ್ರಸಾದ್, ಸ್ಥಳೀಯ ವೈದ್ಯಾಧಿಕಾರಿ ಡಾ.ಉಮೇಶ ಯಲಶೆಟ್ಟಿ ಹಾಗೂ ಸಿಬ್ಬಂದಿ ಇದ್ದರು.

    ಕಾಮಗಾರಿ ಮಾಹಿತಿ ಇಲ್ಲ: ಕೋವಿಡ್ ವೇಳೆ ವಿಶೇಷ ಸಂದರ್ಭ ಎಂದು ಪರಿಗಣಿಸಿ ಜಿಲ್ಲಾಧಿಕಾರಿಗಳ ಅಧೀನದಲ್ಲಿ ಹಳೆಯ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲಾಗಿತ್ತು. ಅದರೆ ಕೋವಿಡ್ ನಂತರವೂ ಇಲ್ಲಿ ವ್ಯದ್ಯಕೀಯ ಸಿಬ್ಬಂದಿ ವಸತಿ ಗೃಹ ಸೇರಿ ಇತರೆ ಕಾಮಗಾರಿಗಳು ನಡೆಯುತ್ತಿದ್ದು, ಈ ಕುರಿತು ಇಎಸ್‌ಐ ಕಾರ್ಫೋರೇಷನ್ ಅವರಿಗೆ ಮಾಹಿತಿ ಇಲ್ಲ. ಕಕ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ಗುತ್ತಿಗೆ ನೀಡಿ ಕಾಮಗಾರಿ ನಡೆಸಲಾಗುತ್ತಿದೆ. ಇದಕ್ಕೆ ಯಾರು ಅದೇಶ ನೀಡಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಡಾ.ವರದರಾಜ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts