More

    ಅಧ್ಯಯನ ವಿಳಂಬಕ್ಕೆ ಆಕ್ರೋಶ

    ಕಲಬುರಗಿ: ಭೀಮಾ, ಕಾಗಿಣಾ ನದಿಯಲ್ಲಿ ಪ್ರವಾಹ ಬಂದ ಎರಡು ತಿಂಗಳ ನಂತರ ಕೇಂದ್ರ ತಂಡ ಜಿಲ್ಲೆಗೆ ಬಂದಿದೆ. ರೈತಪರ ಸರ್ಕಾರ ಎಂದು ಬೊಗಳೆ ಬಿಡುತ್ತಲೇ ಇರುವ ಬಿಜೆಪಿಯವರು, ಇಷ್ಟೊಂದು ವಿಳಂಬ ಮಾಡಿ ತಂಡವನ್ನು ರಾಜ್ಯಕ್ಕೆ ಕಳುಹಿಸಿದ್ದರಲ್ಲಿ ಅರ್ಥವೇ ಇಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ಮುಖ್ಯ ಸಚೇತಕರಾದ ಶಾಸಕ ಡಾ.ಅಜಯಸಿಂಗ್ ಆಕ್ರೋಶ ವ್ಯಕ್ತಪಡಿಸಿದರು.
    ಅತಿವೃಷ್ಟಿ ಮತ್ತು ಪ್ರವಾಹದಿಂದ ಬೆಳೆ ಹಾನಿಯಾದ ರೈತರಿಗೆ ಸರಿಯಾಗಿ ಪರಿಹಾರ ಕೊಟ್ಟಿಲ್ಲ. ಕೇಂದ್ರ ಸರ್ಕಾರ ಸೂಕ್ತ ನೆರವು ನೀಡುತ್ತಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸಕರ್ಾರವಿದ್ದರೂ ಜನರ ನೋವುಗಳಿಗೆ ಸ್ಪಂದಿಸುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಕನರ್ಾಟಕದ ಬಗ್ಗೆ ತಾರತಮ್ಯ ಧೋರಣೆ ತಾಳಿದ್ದಾರೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.
    ರಾಜ್ಯದಲ್ಲಿ ಪ್ರಕೃತಿ ವಿಕೋಪದಿಂದ 15,410 ಕೋಟಿ ರೂ., ಕಲಬುರಗಿ ಜಿಲ್ಲೆಯಲ್ಲಿ 728 ಕೋಟಿ ರೂ. ಹಾನಿಯಾಗಿದೆ. ಇಷ್ಟಿದ್ದರೂ ಕೇವಲ 557 ಕೋಟಿ ರೂ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ರೈತರನ್ನು ಹಾಳು ಮಾಡುವಂತಹ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ಕೃಷಿಯನ್ನು ರೈತರ ಕೈಯಿಂದ ಕಸಿದುಕೊಳ್ಳುವ ಕುತಂತ್ರ ನಡೆಸಿದೆ ಎಂದು ಹರಿಹಾಯ್ದರು.
    ಕೆಕೆಆರ್ಡಿಬಿ ಅನುದಾನಕ್ಕೂ ಸರ್ಕಾರ ಕತ್ತರಿ ಹಾಕಿದೆ. ಹೀಗಿರುವಾಗ ಅಧ್ಯಕ್ಷರು ಅವಿರೋಧ ಆಯ್ಕೆಗೊಂಡ ಗ್ರಾಪಂಗೆ ಕೋಟಿ ರೂ. ನೀಡುವುದಾಗಿ ಹೇಳಿ ದಾರಿ ತಪ್ಪಿಸುತ್ತಿದ್ದಾರೆ. 2000 ಕೋಟಿ ರೂ.ಗಳಲ್ಲಿ ಕೇವಲ 1100 ಕೋಟಿ ನೀಡುವುದಾಗಿ ಸಿಎಂ ಮೊನ್ನೆ ಭರವಸೆ ನೀಡಿದ್ದಾರೆ. ಹೀಗಿರುವಾಗ ಗ್ರಾಪಂಗಳಿಗೆ ಎಲ್ಲಿಂದ ಹಣ ಕೊಡುತ್ತಾರೆ ಎಂದು ಪ್ರಶ್ನಿಸಿದರು.
    ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಶಾಸಕರಾದ ಎಂ.ವೈ. ಪಾಟೀಲ್, ಕನೀಜ್ ಫಾತಿಮಾ ಇಸ್ಲಾಂ, ಮಾಜಿ ಶಾಸಕ ತಿಪ್ಪಣ್ಣಪ್ಪ ಕಮಕನೂರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ್, ದಕ್ಷಿಣ ಬ್ಲಾಕ್ ಅಧ್ಯಕ್ಷ ನೀಲಕಂಠ ಮೂಲಗೆ, ಮುಖಂಡರಾದ ವಿಜಯಕುಮಾರ ಜಿ.ಆರ್, ಸುಭಾಷ ರಾಠೋಡ್, ಶರಣಕುಮಾರ ಮೋದಿ, ಈರಣ್ಣ ಝಳಕಿ, ಸಂಜೀವ ಐರಡ್ಡಿ, ಶರಣು ಭೂಸನೂರ, ಶರಣಗೌಡ ಪಾಟೀಲ್ ಇತರರಿದ್ದರು.

    ತೊಗರಿಗೆ ರು. 1500 ಪ್ರೋತ್ಸಾಹಧನ ಕೊಡಿ
    ಮಳೆ ಮತ್ತು ಪ್ರವಾಹದಿಂದಾಗಿ ಜಿಲ್ಲೆಯಲ್ಲಿ 5.90 ಲಕ್ಷ ಹೆಕ್ಟೇರ್ ಪೈಕಿ ಶೇ.50 ತೊಗರಿ ಹಾನಿಯಾಗಿದ್ದು, ವಹಿವಾಟು ಅರ್ಧದಷ್ಟು ಕುಸಿಯುವ ಸಾಧ್ಯತೆಯಿದೆ. ಹೀಗಾಗಿ ಸಕರ್ಾರ ತೊಗರಿಗೆ 1500 ರೂ. ಪ್ರೋತ್ಸಾಹಧನ ನೀಡಿ ಖರೀದಿ ಪ್ರಕ್ರಿಯೆ ಆರಂಭಿಸಬೇಕು ಎಂದು ಶಾಸಕ ಡಾ.ಅಜಯಸಿಂಗ್ ಆಗ್ರಹಿಸಿದರು. ಬೆಂಬಲ ಬೆಲೆ ಜತೆಗೆ ಹಿಂದೆ ಕಾಂಗ್ರೆಸ್ ಸಕರ್ಾರ ನೀಡಿದಂತೆ ಕನಿಷ್ಠ 1500 ರೂ. ಪ್ರೋತ್ಸಾಹಧನ ನೀಡಲು ಸಂಪುಟ ಉಪ ಸಮಿತಿ ನಿಧರ್ಾರ ಕೈಗೊಳ್ಳಬೇಕು. ವಿಳಂಬ ಮಾಡಿದರೆ ಕಾಂಗ್ರೆಸ್ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts