More

    ಅಧ್ಯಯನ ತಂಡದಿಂದ ನಾಮ್ಕೆವಾಸ್ತೆ ಪರಿಶೀಲನೆ


    ಯಾದಗಿರಿ: ಕಳೆದೊಂದು ತಿಂಗಳಿಂದ ಜಿಲ್ಲೆಯಲ್ಲಿ ವರುಣಾರ್ಭಟ ಹೆಚ್ಚಾದ ಹಿನ್ನೆಲೆಯಲ್ಲಿ ಕೇಂದ್ರದ ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯದ ಡಾ.ಕೆ.ಮನೋಹರನ ನೇತೃತ್ವದ ತಂಡ ಶುಕ್ರವಾರ ಆಗಮಿಸಿ ನಾಮ್ಕೆವಾಸ್ತೆ ಪರಿಶೀಲನೆ ನಡೆಸಿ ತೆರಳಿತು.


    ವಡಿಗೇರಾ ತಾಲೂಕಿನ ಗುಲಸರಂ, ನಾಯ್ಕಲ್, ಖಾನಾಪುರ, ಸುರಪುರ ಪಟ್ಟಣ, ಕೆಂಭಾವಿ, ಮಲ್ಲಾ (ಬಿ), ಗೋಗಿ (ಕೆ), ಹೋತಪೇಠ ಹಾಗೂ ಗುರುಮಠಕಲ್ ತಾಲೂಕಿನ ಕಂದಕೂರ ಗ್ರಾಮಗಳಲ್ಲಿ ಮಳೆಯಿಂದ ಆದ ಮನೆ, ಬೆಳೆ ಮತ್ತು ಆಸ್ತಿಹಾನಿಯ ಬಗ್ಗೆ ಅಧ್ಯಯನ ಶಾಸ್ತ್ರ ಮುಗಿಸಿದ ತಂಡದ ಅಕಾರಿಗಳು, ಕೆಲ ಮನೆಗಳಿಗೆ ತೆರಳಿ ತಮ್ಮ ಮೊಬೈಲ್ನಲ್ಲಿ ಫೋಟೊ ಸೆರೆ ಹಿಡಿದು ಮುಂದೆ ತೆರಳಿದರು.

    ಗುಲಸರಂ ಗ್ರಾಮಕ್ಕೆ ತೆರಳಿ ಹತ್ತಿ ಬೆಳೆ ಸೇರಿದಂತೆ ವಿವಿಧ ಬೆಳೆ ಹಾನಿ ಬಗ್ಗೆ ಪರಿಶೀಲನೆ ನಡೆಸಿ ರೈತರಿಂದ ಅವಶ್ಯಕ ಮಾಹಿತಿ ಪಡೆಯಿತು. ನಾಯ್ಕಲ್ನಲ್ಲಿ ಕೆರೆ ವೀಕ್ಷಿಸಿ, ಮನೆಗಳಿಗೆ ನೀರು ನುಗ್ಗಿ ಹಾನಿಯಾದ ಬಗ್ಗೆ ಹಾಗೂ ಅತಿವೃಷ್ಟಿಯಿಂದ ಆದ ಅನಾಹುತದ ಬಗ್ಗೆ ಮಾಹಿತಿ ಕಲೆ ಹಾಕಿತು. ಆದರೆ ಈ ವೇಳೆ ಮಾಧ್ಯಮದವರಿಗೆ ತಂಡದ ಅಕಾರಿಗಳು ಯಾವುದೇ ಮಾಹಿತಿ ನೀಡಲು ನಿರಾಕರಿಸಿದರು.

    ಕೇಂದ್ರದ ತಂಡ ಅಧ್ಯಯನ್ನಾಗಿ ಬರಲಿದೆ ಎಂದು ಹಗಲಿರುಳು ಜಿಲ್ಲಾಡಳಿತ ಭವನದಲ್ಲಿ ಅಕಾರಿಗಳು ಫೈಲ್ಗಳನ್ನು ಕೆದಕ್ಕಿದ್ದೆ, ಕೆದಕಿದ್ದು, ಸಾರ್ವಜನಿಕರು ಭೇಟಿಗೆ ಬಂದರೆ ಒಂದು ವಾರದ ತನಕ ನಮಗೆ ಸಮಯವಿಲ್ಲ ಎಂದು ಹೇಳಿ ಕಳಿಸಿದ್ದರು. ಆದರೆ ತಂಡದಲ್ಲಿನ ಅಕಾರಿಗಳು ವಾರಗಟ್ಟಲೇ ನಮ್ಮ ಅಕಾರಿಗಳು ಹೈರಾಣಾಗಿ ಪೇರಿಸಿಟ್ಟಿದ್ದ ಯಾವ ವರದಿಯನ್ನೂ ಕಣ್ಣೆತ್ತಿ ಸಹ ನೋಡಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts