More

    ಅಧಿಕಾರಿಗಳಿಗೆ ಸ್ವಚ್ಛತೆಯ ಪಾಠ

    ನರೇಗಲ್ಲ: ಅನೈರ್ಮಲ್ಯದ ತಾಣವಾಗಿದ್ದ ಪಟ್ಟಣ ಪಂಚಾಯಿತಿ ಕಾರ್ಯಾಲಯ ಹಾಗೂ ಸುತ್ತಲಿನ ಜಾಗವನ್ನು ಜಿಲ್ಲಾ ಯೋಜನಾ ನಿರ್ದೇಶಕ ಪಿ. ರುದ್ರೇಶ ಅವರು ಶನಿವಾರ ಪರಿಶೀಲಿಸಿದರು.

    ಪಪಂ ಕಚೇರಿ, ಅದರ ಪಕ್ಕದ ಸಾರ್ವಜನಿಕ ಗ್ರಂಥಾಲಯ, ಗಾಂಧಿ ಭವನ, ನೆಮ್ಮದಿ ಕೇಂದ್ರದ ಆವರಣವನ್ನು ಎರಡು ದಿನಗಳಲ್ಲಿ ಸ್ವಚ್ಛಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

    ಈ ಸಮಸ್ಯೆ ಕುರಿತು ದುರ್ನಾತ ಬೀರುತ್ತಿದೆ ಪಪಂ ಕಚೇರಿ ಶೀರ್ಷಿಕೆಯಡಿ ‘ವಿಜಯವಾಣಿ’ಯಲ್ಲಿ ವಿಸõತ ವರದಿ ಪ್ರಕಟಿಸಲಾಗಿತ್ತು. ಹೀಗಾಗಿ ಸ್ಥಳ ಪರಿಶೀಲಿಸಿದ ಪಿ. ರುದ್ರೇಶ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ‘ಇಡೀ ಪಟ್ಟಣದ ಸ್ವಚ್ಛತೆಯ ಜವಾಬ್ದಾರಿ ಹೊತ್ತಿರುವ ಪಟ್ಟಣ ಪಂಚಾಯಿತಿಯು ಕಚೇರಿ ಆವರಣವೇ ಗಲೀಜಾಗಿಟ್ಟರೆ ಪಟ್ಟಣದ ಗತಿ ಏನು’ ಎಂದು ಪ್ರಶ್ನಿಸಿದರು. ಪ.ಪಂ. ಆವರಣದಲ್ಲಿನ ಹಳೆಯ ಪೈಪ್, ವಾಹನಗಳು, ಕಟ್ಟಿಗೆಗಳು ಸೇರಿ ಗುಜರಿ ವಸ್ತುಗಳನ್ನು ಶೀಘ್ರವೇ ವಿಲೇವಾರಿ ಮಾಡಬೇಕು. ಗಾಂಧಿ ಭವನದ ಆವರಣದಲ್ಲಿ ಮಳೆ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ಸಾರ್ವಜನಿಕರಿಂದ ಯಾವುದೇ ದೂರುಗಳು ಬರದಂತೆ ಎಚ್ಚರಿಕೆ ವಹಿಸಬೇಕು. ನಿರ್ಲಕ್ಷ್ಯ ವಹಿಸಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಪ.ಪಂ. ಸದಸ್ಯ ಕುಮಾರಸ್ವಾಮಿ ಕೋರಧಾನ್ಯಮಠ, ಆರೋಗ್ಯ ನಿರೀಕ್ಷಕ ರಾಮಚಂದ್ರಪ್ಪ ಕಜ್ಜಿ, ಆರೀಫ್ ಮಿರ್ಜಾ, ಯಲ್ಲಪ್ಪ ಮಣ್ಣವಡ್ಡರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts