More

    ಅತಿ ರಕ್ತದೊತ್ತಡ ನಿವಾರಣೆಗೆ ಯಶಸ್ವಿ ಶಸ್ತ್ರ ಚಿಕಿತ್ಸೆ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

    ಅತಿಯಾದ ರಕ್ತದೊತ್ತಡ ತೊಂದರೆಯಿಂದ ಬಳಲುತ್ತಿದ್ದ 45 ವರ್ಷದ ಮಹಿಳೆಗೆ ಇಲ್ಲಿನ ಕಿಮ್್ಸ ವೈದ್ಯರು ಇತ್ತೀಚೆಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ ಅಡ್ರಿನಲ್ ಗ್ರಂಥಿಯ ಗಡ್ಡೆಯನ್ನು ಹೊರತೆಗೆದಿದ್ದಾರೆ. ಇದು ಅತ್ಯಂತ ಅಪರೂಪದ ಹಾಗೂ ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆ ಎನ್ನಲಾಗುತ್ತಿದೆ.

    ಚಿಕಿತ್ಸೆಗೆ ದಾಖಲಾಗಿದ್ದ ಮಹಿಳೆಯು ಫಿಯೋಕ್ರೋಮೋ ಸೈಟುಮಾ(ಅಡ್ರಿನಲ್ ಗ್ರಂಥಿಯ ಗಡ್ಡೆ) ಕಾಯಿಲೆ ದೃಢಪಟ್ಟಿತ್ತು. ಇದು ಅತ್ಯಂತ ಅಪರೂಪದ ಕಾಯಿಲೆಯೆಂದು ಪರಿಗಣಿಸಿದ ವೈದ್ಯರು, ಶಸ್ತ್ರ ಚಿಕಿತ್ಸೆ ನಡೆಸಲು ನಿರ್ಧರಿಸಿದರು. ಶಸ್ತ್ರ ಚಿಕಿತ್ಸಾ ವಿಭಾಗದ ಡಾ. ಗುರುಶಾಂತಪ್ಪ ಯಲಗಚ್ಚಿನ, ಡಾ. ಅಭಿಜಿತ್ ಹಿರೇಗೌಡರ, ಡಾ. ಸಂಜಯ ಮಾಶಾಳ, ಡಾ. ಭರತಕುಮಾರ, ಡಾ. ಶೀತಲ, ಡಾ. ರಾಕೇಶಗೌಡ ಪಾಟೀಲ, ಡಾ. ರೂಪಾ, ಡಾ. ವಿಕಾಸ ಜೋಶಿ ನೇತೃತ್ವದ ತಂಡ ಲ್ಯಾಪ್ರೋಸ್ಕೋಪಿ ಮೂಲಕ ಗಡ್ಡೆಯನ್ನು ಹೊರ ತೆಗೆದಿದೆ. ಶಸ್ತ್ರ ಚಿಕಿತ್ಸೆಗೆ ಮುನ್ನ ರಕ್ತದೊತ್ತಡ ಹತೋಟಿಗೆ ತರಲು ಡಾ. ಸೂರಜ್ ಕುಬಿಹಾಳ ಹಾಗೂ ಡಾ. ಈಶ್ವರ ಹಸಬಿ ಅವರು 10 ದಿನಗಳವರೆಗೆ ಶ್ರಮಿಸಿದ್ದರು. ವೈದ್ಯಕೀಯ ತಂಡದ ಶ್ರಮದಿಂದ ಮಹಿಳೆ ಸಂಪೂರ್ಣ ಗುಣವಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts