More

    ಅತಿವೃಷ್ಟಿಯಿಂದ ಹಾನಿಗೊಂಡ ಮನೆ ಕಟ್ಟಿಕೊಡಿ

    ಬೆಳಗಾವಿ: ಅತಿವೃಷ್ಟಿಯಿಂದ ಮನೆ ಕಳೆದುಕೊಂಡಿರುವ ತಾಲೂಕಿನ ಕಡೋಲಿ ಜಿಪಂ ವ್ಯಾಪ್ತಿಯ ವಿವಿಧ ಗ್ರಾಮಗಳ ಸಂತ್ರಸ್ತರು ಮನೆ ಮಂಜೂರು ಮಾಡಿಕೊಡುವಂತೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟಿಸಿ, ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಗುರುವಾರ ಮನವಿ ಮಾಡಿದರು. ಕಡೋಲಿ ಜಿಪಂ ವ್ಯಾಪ್ತಿಯ ಕೇದನೂರ, ಹಂದಿಗನೂರ ಹಾಗೂ ಅಗಸಗಿ ಗ್ರಾಮದಲ್ಲಿ ಪ್ರವಾಹದಿಂದ ಸುಮಾರು 100ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಪರಿಹಾರ ನೀಡುವಂತೆ ಅಧಿಕಾರಿಗಳ ಕಚೇರಿಗೆ ಅಲೆದು ಅಲೆದು ರೋಸಿ ಹೋಗಿದ್ದು, ತಮಗೆ ತಕ್ಷಣವೇ ಮನೆ ಮಂಜೂರು ಮಾಡುವಂತೆ ಆಗ್ರಹಿಸಿ ಒತ್ತಾಯಿಸಿದರು.

    ಮಲಗೌಡ ಪಾಟೀಲ ಮಾತನಾಡಿ, 2020-21ರಲ್ಲಿ ಬಿದ್ದ ಮನೆಗಳಿಗೂ ಪರಿಹಾರ ಬಂದಿಲ್ಲ. ಅದೇ ರೀತಿ 2021-22ರಲ್ಲಿ ಬಿದ್ದಿರುವ ಮನೆಗಳಿಗೆ ಪರಿಹಾರ ಕೊಟ್ಟಿಲ್ಲ. ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಜಿಲ್ಲಾಧಿಕಾರಿಗಳು ಭೇಟಿ ನೀಡಿದ್ದ ವೇಳೆ 48 ಗಂಟೆಗಳಲ್ಲಿ ಮನೆ ಮಂಜೂರು ಮಾಡಿ ಕೊಟ್ಟಿದ್ದನ್ನು ನಮ್ಮ ಜನರು ನೋಡಿ ನಮಗೆ ಯಾಕೆ ಮನೆ ಮಂಜೂರು ಮಾಡುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. ನಾಲ್ಕು ವರ್ಷಗಳಿಂದ ಬಸವ ವಸತಿ ಯೋಜನೆಯಲ್ಲಿಯೂ ಮನೆಗಳನ್ನು ಕೊಡುತ್ತಿಲ್ಲ. 150 ಕುಟುಂಬಗಳಿಗೆ ಇರಲು ಮನೆ ಇಲ್ಲದೇ, ಸಾಕಷ್ಟು ಸಮಸ್ಯೆಯಾಗುತ್ತಿದೆ. ಜಿಲ್ಲಾಧಿಕಾರಿಗಳು ಖುದ್ದಾಗಿ ಅಥವಾ ಒಂದು ನಿಯೋಗವನ್ನು ಕಳಿಸಿ ಮನೆ ಬಿದ್ದಿರುವುದನ್ನು ಪರಿಶೀಲನೆ ನಡೆಸಿ ಮನೆ ಮಂಜೂರು ಮಾಡಬೇಕು. ಮೊದಲೇ ಬೆಳೆ ಹಾನಿಯಿಂದ ಕಂಗೆಟ್ಟಿರುವ ರೈತರು ಇದೀಗ ಮನೆ ಹಾನಿಯನ್ನು ಅನುಭವಿಸಿ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ತಂದೊಡ್ಡಬೇಡಿ ಎಂದು ಅಳಲು ತೋಡಿಕೊಂಡಿದರು. ಪ್ರತಿಭಟನೆಯಲ್ಲಿ ಗ್ರಾಪಂ ಸದಸ್ಯ ಚೇತಕ ಕಾಂಬಳೆ, ವಾಮನ ಕಂಗ್ರಾಳ್ಕರ್, ಚಂದ್ರಕಾಂತ ದಾಂಡೇಕರ್, ಯಲ್ಲಪ್ಪ ಕಡೋಳ್ಕರ್, ಹಣಮಂತ ಕಂಗ್ರಾಳ್ಕರ್, ಕಲ್ಲಪ್ಪ ಪಾಟೀಲ, ಮಾಧುರಿ ಪಾಟೀಲ, ಅನಿತಾ ಚೌಗುಲೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts