More

    ಅತಂತ್ರ ಸ್ಥಿತಿಯಲ್ಲಿ ತೆಲಂಗಾಣ ಕೂಲಿ ಕಾರ್ವಿುಕರು

    ರಾಣೆಬೆನ್ನೂರ: ಭಾರತ ಲಾಕ್​ಡೌನ್ ಹಿನ್ನೆಲೆಯಲ್ಲಿ ರೈಲ್ವೆ ಡಬಲ್ ಹಳಿ ನಿರ್ಮಾಣ ಕಾಮಗಾರಿಗೆ ಆಗಮಿಸಿದ ತೆಲಂಗಾಣ ರಾಜ್ಯದ 42 ಕೂಲಿ ಕಾರ್ವಿುಕರ ಸ್ಥಿತಿ ಅತಂತ್ರಗೊಂಡಿದ್ದು ತುತ್ತು ಅನ್ನ, ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.

    ಇಲ್ಲಿಯ ಕೊಟ್ಟೂರೇಶ್ವರ ನಗರದಿಂದ ದೇವರಗುಡ್ಡ ರೈಲ್ವೆ ನಿಲ್ದಾಣದವರೆಗೆ ರೈಲ್ವೆ ಹಳಿ ನಿರ್ಮಾಣ ಕಾಮಗಾರಿ ನಡೆದಿದೆ. ಅದಕ್ಕಾಗಿ ತೆಲಂಗಾಣದಿಂದ 42 ಕೂಲಿ ಕಾರ್ವಿುಕರು ಮಕ್ಕಳು, ವೃದ್ಧರೊಂದಿಗೆ ಬಂದು ಗುಡಿಸಲು ನಿರ್ವಿುಸಿಕೊಂಡು ವಾಸ ವಾಗಿದ್ದಾರೆ.

    ಮೂರು ದಿನದಿಂದ ಭಾರತ ಲಾಕ್​ಡೌನ್ ಆಗಿರುವ ಕಾರಣ ಕಾಮಗಾರಿ ನಿಲ್ಲಿಸಲಾಗಿತ್ತು. ಗುತ್ತಿಗೆದಾರ ಸಹ ತನ್ನ ಊರಿಗೆ ತೆರಳಿದ್ದಾನೆ. ಆದರೆ ಕೂಲಿ ಕಾರ್ವಿುಕರ ಬಳಿ ದಿನಸಿ ಖರೀದಿಸಲು ಹಣವೂ ಇಲ್ಲ, ಇತ್ತ ಅಡುಗೆ ಮಾಡಿಕೊಳ್ಳಲು ದಿನಸಿ ಸಾಮಗ್ರಿಯೂ ಇಲ್ಲದಂತಾಗಿದೆ. ಇದರಿಂದಾಗಿ ಮೂರು ದಿನದಿಂದ ತುತ್ತು ಅನ್ನಕ್ಕಾಗಿ ಕಾರ್ವಿುಕರು ಪರದಾಡುವಂತಾಗಿದೆ.

    ಮಕ್ಕಳು, ವೃದ್ಧರು ಹಸಿವಿನಿಂದ ತಾಳಲಾಗದೇ ಅಕ್ಕಪಕ್ಕದ ಮನೆಯವರಿಂದ ಊಟ ಪಡೆದು ಮಾಡುತ್ತಿದ್ದಾರೆ. ತಮ್ಮ ಊರಿಗೆ ಹೋಗೋಣ ಎಂದರೆ ಯಾವುದೇ ವಾಹನದ ವ್ಯವಸ್ಥೆಯೂ ಇಲ್ಲ. ಆದ್ದರಿಂದ ನಮಗೆ ದಿನಸಿಯಾದರೂ ನೀಡಿದರೆ ಅಡುಗೆ ಮಾಡಿಕೊಂಡು ಊಟ ಮಾಡಿ, ಜೀವವನ್ನಾದರೂ ಉಳಿಸಿಕೊಳ್ಳುತ್ತೇವೆ ಎಂದು ಕಾರ್ವಿುಕರು ‘ವಿಜಯವಾಣಿ’ ಎದುರು ಅಳಲು ತೋಡಿಕೊಂಡರು.

    ಸಹಾಯಕ್ಕೆ ಬಂದ ಐವರು ಯುವಕರ ತಂಡ…

    ಕೂಲಿ ಕಾರ್ವಿುಕರ ಸಂಕಷ್ಟ ಅರಿತ ನಗರದ ಚೇತನ್ ಜೈನ್, ಮಯೂರ್ ಭಂಡಾರಿ, ಭಾವೇಶ ಜೈನ್, ರೋಷನ್ ಭಂಡಾರಿ, ರಾಜೇಶ ಎಂ.ಜಿ. ಸೇರಿ ಐವರು ಯುವಕರ ತಂಡ, ಕಾರ್ವಿುಕರಿರುವ ಸ್ಥಳಕ್ಕೆ ತೆರಳು ಅಕ್ಕಿ, ಬೆಳೆ, ಎಣ್ಣೆ ಸೇರಿ ಅಡುಗೆ ಸಾಮಗ್ರಿಗಳನ್ನು ನೀಡಿದರು. ‘ನಿತ್ಯವೂ ಬಂದು ನಿಮ್ಮನ್ನು ಭೇಟಿ ಮಾಡುತ್ತೇವೆ. ಏನೂ ಬೇಕು ಎಂದು ಹೇಳಿ, ತಂದು ಕೊಡುತ್ತೇವೆ’ ಎಂದು ಭರವಸೆ ನೀಡಿದರು. ನಂತರ ನಗರದಲ್ಲಿರುವ ನಿರ್ಗತಿಕರಿಗೆ ಹಾಗೂ ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿಗೆ ಮಧ್ಯಾಹ್ನದ ಊಟ ವಿತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts