More

    ಅಣ್ಣಾಸಾಹೇಬ ಕನಸಿನ ಬ್ಯಾಂಕ್ ಈಗ ಹೆಮ್ಮರ

    ಚಿಕ್ಕೋಡಿ: ಮೂವತ್ತೆರಡು ವರ್ಷಗಳ ಹಿಂದೆ ಅಣ್ಣಾಸಾಹೇಬರು ನೆಟ್ಟಿದ್ದ ಬೀರೇಶ್ವರ ಸಹಕಾರಿ ಸಂಸ್ಥೆ ಎಂಬ ಸಣ್ಣ ಸಸಿ ಈಗ ಹೆಮ್ಮರವಾಗಿ ಬೆಳೆದು ನಿಂತಿದೆ ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

    ಯಕ್ಸಂಬಾ ಪಟ್ಟಣದ ಹೊರವಲಯದಲ್ಲಿ ಸೋಮವಾರ ಹೈಟೆಕ್ ಬೀರೇಶ್ವರ ಭವನ ಲೋಕಾರ್ಪಣೆಗೊಳಿಸಿ ಮಾತನಾಡಿ, ಇಂದು ಬೀರೇಶ್ವರ ಭವನ ಲೋಕಾರ್ಪಣೆಗೊಳ್ಳುತ್ತಿರುವುದು ಸುವರ್ಣ ಅಕ್ಷರದಲ್ಲಿ ಬರೆದಿಡುವ ದಿನವಾಗಿದೆ. ಬೀರೇಶ್ವರ ಸಂಸ್ಥೆ ಇಂದು ಕರ್ನಾಟಕ, ಮಹಾರಾಷ್ಟ್ರ ಸೇರಿ 154 ಶಾಖೆ ಹೊಂದಿದ್ದು, ಮುಂಬರುವ ದಿನಗಳಲ್ಲಿ ಗೋವಾದಲ್ಲೂ ತನ್ನ ವ್ಯಾಪ್ತಿ ವಿಸ್ತರಿಸಲಿದೆ ಎಂದರು.

    ನಿಡಸೋಸಿಯ ಸಿದ್ಧಸಂಸ್ಥಾನ ಮಠದ ಶ್ರೀ ಮನ್ನಿರಂಜನ್ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ನಗರ ಪ್ರದೇಶದ ಸೌಲಭ್ಯಗಳನ್ನು ಹಳ್ಳಿಯ ಜನರಿಗೆ ತಲುಪಿಸುವ ಕೆಲಸವನ್ನು ಜೊಲ್ಲೆ ದಂಪತಿ ಮಾಡುತ್ತಿರುವುದು ಶ್ಲಾಘನೀಯ. ರೈತರ ಶ್ರೇಯೋಭಿವೃದ್ಧಿಯ ಕನಸು ಕಂಡು ಬೀರೇಶ್ವರ ಸಹಕಾರಿ ಸಂಸ್ಥೆ ಹುಟ್ಟುಹಾಕಿದ್ದಾರೆ. ಅದು ಶಿಕ್ಷಣ, ಉದ್ದಿಮೆ, ಧಾರ್ಮಿಕ, ಕ್ರೀಡಾಕ್ಷೇತ್ರದಲ್ಲೂ ಸೇವೆ ಸಲ್ಲಿಸುತ್ತಿದೆ ಎಂದರು. ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಬೀರೇಶ್ವರ ಕಲ್ಯಾಣ ಮಂಟಪ ಎರಡು ಅಂತಸ್ತಿನ ಸಭಾಭವನವಿದ್ದು, ಡೈನಿಂಗ್ ಹಾಲ್, ಸ್ಟೇಜ್‌ಗೆ ಎಲ್‌ಇಡಿ ಸ್ಕ್ರೀನ್ ವ್ಯವಸ್ಥೆ ಮತ್ತು ಹವಾನಿಯಂತ್ರಿತ (ಎಸಿ) ಸೌಕರ್ಯವಿದೆ ಎಂದರು. ಶರಣ ಶ್ರೀ ಐ.ಆರ್.ಮಠಪತಿ, ಚಿಂಚಣಿಯ ಅಲ್ಲಮಪ್ರಭು ಸ್ವಾಮೀಜಿ, ಚಿಕ್ಕೋಡಿಯ ಸಂಪಾದನಾ ಸ್ವಾಮೀಜಿ, ಕೂಡಲಸಂಗಮದ ಬಸವಪ್ರಕಾಶ ಸ್ವಾಮೀಜಿ ಮಾತನಾಡಿದರು.
    ಸಹಕಾರ ರತ್ನ ಚಂದ್ರಕಾಂತ ಕೋಠಿವಾಲೆ, ಎಂ.ಪಿ. ಪಾಟೀಲ, ಸಂಸ್ಥೆಯ ಅಧ್ಯಕ್ಷ ಜಯಾನಂದ ಜಾಧವ, ನಗರಾಧ್ಯಕ್ಷ ಜಯವಂತ ಭಾಟಲೆ, ಲಕ್ಷ್ಮಣ ಕಬಾಡೆ, ಚಿಕ್ಕೋಡಿ ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ, ಸಂಜಯ ಕವಟಗಿಮಠ, ಅಪ್ಪಾಸಾಹೇಬ ಜೊಲ್ಲೆ, ಜ್ಯೋತಿಪ್ರಸಾದ ಜೊಲ್ಲೆ, ಅಭಿಜಿತ ಪಾಟೀಲ, ಕಲ್ಲಪ್ಪ ಜಾಧವ, ಮಂಗಳಾ
    ಜೊಲ್ಲೆ, ಬಿ.ಎನ್.ಮಾಳಿ, ಸಿದ್ರಾಮ ಗಡದೆ ಇತರರು ಇದ್ದರು. ಬಸವಪ್ರಸಾದ ಜೊಲ್ಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರಮೇಶ ಪಾಟೀಲ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts