More

    ಅಡುಗೆ ಸಹಾಯಕಿಗೆ ಸೋಂಕು

    ಕಾರವಾರ/ಮುಂಡಗೋಡ: ಕೋವಿಡ್-19 ನಿಂದ ಗುಣ ಹೊಂದಿದ 10 ಜನರನ್ನು ಬುಧವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇದರ ಬೆನ್ನಲ್ಲೇ ಇನ್ನೂ 9 ಜನರಿಗೆ ಸೋಂಕು ದೃಢಪಟ್ಟಿದೆ.

    ಮುಂಡಗೋಡ ತಾಲೂಕಿನ ಟಿಬೆಟಿಯನ್ ಕಾಲನಿಯ ಟಿಸಿವಿ ಹಾಸ್ಟೆಲ್​ನ ಅಡುಗೆ ಸಹಾಯಕಿ 45 ವರ್ಷದ ಟಿಬೆಟಿಯನ್ ಮಹಿಳೆಗೆ (ಯುಕೆ-152) ಬುಧವಾರ ಕರೊನಾ ಸೋಂಕು ದೃಢಪಟ್ಟಿದ್ದು, ಆತಂಕಕ್ಕೆ ಕಾರಣವಾಗಿದೆ.

    ಹಾಸ್ಟೆಲ್​ನಲ್ಲಿ ಕ್ವಾರಂಟೈನ್​ನಲ್ಲಿರುವ 65 ಜನರಿಗೆ ಈ ಮಹಿಳೆ ಅಡುಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು.ಈ ಹಿಂದೆ ಇದೇ ಹಾಸ್ಟೆಲ್​ನಲ್ಲಿ ಕ್ವಾರಂಟೈನ್​ನಲ್ಲಿದ್ದ ದೆಹಲಿಯಿಂದ ಬಂದಿದ್ದ 30 ವರ್ಷದ ಟಿಬೆಟಿಯನ್ ವ್ಯಕ್ತಿಗೆ ಕರೊನಾ ಸೋಂಕು ತಗುಲಿತ್ತು. ಅವರ ಸಂಪರ್ಕದಿಂದಲೇ ಮಹಿಳೆಗೆ ಸೋಂಕು ಹರಡಿರಬಹುದು ಎಂದು ಆರೋಗ್ಯ ಇಲಾಖೆ ಊಹಿಸಿದೆ.

    ಮಹಾರಾಷ್ಟ್ರದ ನಂಜು: ಮುಂಬೈನಿಂದ ಆಗಮಿಸಿದ ಕುಮಟಾದ ನಾಲ್ವರಿಗೆ ಹಾಗೂ ಹೊನ್ನಾವರದ ನಾಲ್ವರಲ್ಲಿ ಸೋಂಕು ಕಂಡುಬಂದಿದೆ. ಜೂನ್ 16 ರಂದು ಆಗಮಿಸಿ ಕ್ವಾರಂಟೈನ್​ನಲ್ಲಿದ್ದ ಕುಮಟಾ ಧಾರೇಶ್ವರದ 24 ವರ್ಷದ ಮಹಿಳೆ, ಹೊಸ ಹೆರವಟ್ಟಾದ 28 ವರ್ಷದ ಮಹಿಳೆ, ವನ್ನಳ್ಳಿಯ 42 ವರ್ಷದ ಪುರುಷ, ಜೂನ್ 15 ರಂದು ಆಗಮಿಸಿದ್ದ ಹೊಸ ಹೆರವಟ್ಟಾದ 56 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಮಹಾರಾಷ್ಟ್ರದ ದೇವಗಡದಿಂದ ಜೂನ್ 7 ರಂದು ಆಗಮಿಸಿದ ಹೊನ್ನಾವರ ಖರ್ವಾ ಹರಿಜನಕೇರಿಯ 42 ವರ್ಷದ ಪುರುಷನಿಗೆ, ಜೂ. 17 ರಂದು ಮುಂಬೈನಿಂದ ಆಗಮಿಸಿದ ಹೊನ್ನಾವರ ಸಂಶಿ ಕಲಗದ್ದೆಯ 67 ವರ್ಷದ ವೃದ್ಧೆ, 78 ವರ್ಷದ ವೃದ್ಧ, ಹೊನ್ನಾವರ ತುಳಸಿನಗರದ 33 ವರ್ಷದ ಮಹಿಳೆಗೆ ಕರೊನಾ ಖಚಿತವಾಗಿದೆ. 10 ಜನರ ಬಿಡುಗಡೆ: ಕ್ರಿಮ್್ಸ ಕರೊನಾ ವಾರ್ಡ್​ನಿಂದ 10 ಜನರನ್ನು ಬಿಡುಗಡೆ ಮಾಡಲಾಗಿದೆ. ಕಾರವಾರ ಸದಾಶಿವಗಡದ 39 ವರ್ಷದ ಪುರುಷ, 35 ಹಾಗೂ 52 ವರ್ಷದ ಇಬ್ಬರು ಮಹಿಳೆಯರು. ಹೊನ್ನಾವರದ 36 ವರ್ಷದ ಪುರುಷ, ಮುಂಡಗೋಡಿನ 30 ವರ್ಷದ ಮಹಿಳೆ, ಭಟ್ಕಳದ 43 ವರ್ಷದ ಪುರುಷ, ಯಲ್ಲಾಪುರದ 33, 46 ಹಾಗೂ 49 ವರ್ಷದ ಮೂವರು ಪುರುಷರು. ಅಂಕೋಲಾದ 30 ವರ್ಷದ ಒಬ್ಬ ಮಹಿಳೆ ಗುಣ ಹೊಂದಿದ್ದು, ಡಾ. ಗಜಾನನ ನಾಯ್ಕ ಪ್ರಮಾಣಪತ್ರ ನೀಡಿ ಬಿಡುಗಡೆ ಮಾಡಿದರು.

    ಮಹಿಳೆಗೆ ಸೋಂಕಿನ ಲಕ್ಷಣವಿದ್ದ ಹಿನ್ನೆಲೆಯಲ್ಲಿ ಜೂ. 17ರಂದು ಗಂಟಲ ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಬುಧವಾರ ಪಾಸಿಟಿವ್ ಬಂದಿದೆ. ಈ ಮೊದಲು ಕ್ವಾರಂಟೈನ್​ನಲಿದ್ದ 56 ಜನರ ಜತೆಗೆ ಈ ಮಹಿಳೆಯ ಕುಟುಂಬದ ನಾಲ್ವರು ಸದಸ್ಯರನ್ನೂ ಟಿಸಿವಿ ಹಾಸ್ಟೆಲ್​ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಮಹಿಳೆ ಹೊರಗೆಲ್ಲೂ ಓಡಾಡಿಲ್ಲ. ಆತಂಕ ಬೇಡ.
    | ಶ್ರೀಧರ ಮುಂದಲಮನಿ ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts