More

    ಅಕ್ರಮ ಸಂಪತ್ತಿನ ಬಗ್ಗೆ ತನಿಖೆಯಾಗಲಿ


    ಯಾದಗಿರಿ: ಜಾರ್ಖಂಡ್ನ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಧೀರಜಪ್ರಸಾದ್ ಸಾಹು ಮನೆಯಲ್ಲಿ ಪತ್ತೆಯಾದ ನೂರಾರು ಕೋಟಿ ರೂ.ಹಣದ ಬಗ್ಗೆ ತೀವೃ ತನಿಖೆಗೆ ಒತ್ತಾಯಿಸಿ ಜಿಲ್ಲಾ ಬಿಜೆಪಿಯಿಂದ ಮಂಗಳವಾರ ನಗರದ ಸುಭಾಷ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

    ಯುವ ನಾಯಕ ಮಹೇಶರಡ್ಡಿ ಮುದ್ನಾಳ್ ಮಾತನಾಡಿ, ಧೀರಜಪ್ರಸಾದ್ ಮನೆಯಲ್ಲಿ ನೂರಾರು ಕೋಟಿ ರೂ.ಅಕ್ರಮ ಹಣ ಕಂತೆಕಂತೆಯಾಗಿ ಪತ್ತೆಯಾಗಿದ್ದು, ಇದು ಎಲ್ಲಿಂದ ಬಂದಿದೆ ಎಂಬ ಬಗ್ಗೆ ಸಮಗ್ರ ತನಿಖೆ ನಡೆಯುವ ಅಗತ್ಯವಿದೆ. ಹವಾಲಾ ಹಣವಾಗಿದ್ದು, ಇಷ್ಟೊಂದು ಪ್ರಮಾಣದಲ್ಲಿ ಲಾಕರ್ನಲ್ಲಿ ಯಾಕೆ ಸಂಗ್ರಹಿಸಲಾಗಿತ್ತು ಎಂಬ ಅನುಮಾನ ದೇಶದ ಜನರನ್ನು ಕಾಡುತ್ತಿದೆ ಎಂದರು.

    ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರಡ್ಡಿ ಮಾತನಾಡಿ, ಕಾಂಗ್ರೆಸ್ನವರು ಮಾತೆತ್ತಿದರೆ ಬಿಜೆಪಿ ಸಕರ್ಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ತೆಗಳುತ್ತಿದ್ದರು. ಆದರೆ, ಇಂದು ಅದೇ ಪಕ್ಷದ ರಾಜ್ಯಸಭೆ ಸದಸ್ಯನ ಮನೆಯಲ್ಲಿ ಸಿಕ್ಕಿರುವ ಅಕ್ರಮ ಸಂಪತ್ತಿನ ಬಗ್ಗೆ ಚಕಾರ ಎತ್ತಲು ಸಿದ್ಧರಿಲ್ಲ. ನ್ಯಾಯ ಮಾರ್ಗದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಹಣ ಸಂಪಾದನೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಇಡಿ ಹಾಗೂ ಸಿಬಿಐನಿಂದ ಈ ಪ್ರಕರಣದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

    ದೇಶದಲ್ಲಿ ಮೊದಲಿನಿಂದಲೂ ಕಾಂಗ್ರೆಸ್ನವರು ಅಕ್ರಮವೆಸಗಿ ಜೈಲಿಗೆ ಹೋಗಿ ಬಂದವರಿದ್ದಾರೆ. ಆದರೆ, ಬಿಜೆಪಿಯನ್ನು ದೋಷಿಸುತ್ತಿದ್ದಾರೆ. ದೇಶದ ಜನತೆ ಇದೆಲ್ಲವನ್ನೂ ಗಮನಿಸುತ್ತಿದ್ದು, ಬರುವ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಡಿಕಾರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts