More

    ಅಕ್ರಮ ಕಳ್ಳಬಟ್ಟಿ, ಸೇಂಧಿ ಮಾರಾಟ ತಡೆಯಲು ತಂಡ

    ಸೇಡಂ: ರಾಜ್ಯದೆಲ್ಲೆಡೆ ಅಕ್ರಮ ಕಳ್ಳಬಟ್ಟಿ, ಸೇಂಧಿ, ಗಾಂಜಾ ಮಾರಾಟ ತಡೆಯುವ ನಿಟ್ಟಿನಲ್ಲಿ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ ಎಂದು ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರ ಹೇಳಿದರು.
    ಪಟ್ಟಣದ ತಹಸಿಲ್ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಳ್ಳಬಟ್ಟಿ ನಿರ್ಮೂಲನೆ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಸೇಡಂ ತಾಲೂಕು ತೆಲಂಗಾಣ ಗಡಿಗೆ ಹೊಂದಿಕೊಂಡಿರುವುದರಿಂದ ತೆಲುಗು ಭಾಷೆಯ ಪ್ರಭಾವಿತ ಪ್ರದೇಶದಲ್ಲಿ ಕಳ್ಳಬಟ್ಟಿ, ಸಿಎಚ್ ಫೌಡರ್ ಮಿಶ್ರಿತ ಅಕ್ರಮ ಸೇಂಧಿ ತಯಾರಿಕೆ ಮತ್ತು ಮಾರಾಟ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಆದ್ದರಿಂದ ಗ್ರಾಮ ಮಟ್ಟದಲ್ಲಿ ಕೆಲಸ ಮಾಡುವ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಗ್ರಾಮಲೇಖಪಾಲಕರು, ಕಂದಾಯ ನಿರೀಕ್ಷಕರು, ಗ್ರಾಮಸೇವಕರು ಅಕ್ರಮ ವ್ಯವಹಾರ ಕಂಡು ಬಂದರೆ ಅಬಕಾರಿ ಇಲಾಖೆ ಅಥವಾ ತಾಲೂಕು ಆಡಳಿತಕ್ಕೆ ಮಾಹಿತಿ ನೀಡಬೇಕು. ತಕ್ಷಣವೇ ದಾಳಿ ನಡೆಸಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವದು ಎಂದರು.
    ಸೇಡಂ ಸಿಪಿಐ ರಾಜಶೇಖರ ಹಳಗೋಧಿ, ಅಬಕಾರಿ ನಿರೀಕ್ಷಕ ಪಂಡಿತ ಗೋಪಾಲೆ, ಉಪ ನಿರೀಕ್ಷಕ ಬಸಣ್ಣಗೌಡ ಪಾಟೀಲ್, ನರೇಗಾ ಸಹಾಯಕ ನಿರ್ದೇಶಕ ರಾಮಚಂದ್ರ ಬಸೂದೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವ್ಯವಸ್ಥಾಪಕ ವೆಂಕಟೇಶ ಯಾಕಾಪುರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts