More

    ಅಕ್ಕೂರಲ್ಲಿ ಪೇರಲ ಮರಕ್ಕೆ ಕೊಡಲಿ ಪೆಟ್ಟು

    ಗುತ್ತಲ: ಲಾಕ್​ಡೌನ್ ಹಿನ್ನೆಲೆಯಲ್ಲಿ ಪೇರಲ ಹಣ್ಣನ್ನು ಖರೀದಿಸಲು ಯಾರೂ ಬರುತ್ತಿಲ್ಲ. ಕರೊನಾದಿಂದಾಗಿ ಕಳೆದ ಎರಡು ವರ್ಷದಿಂದ ನಷ್ಟ ಅನುಭವಿಸಿದ ರೈತರೊಬ್ಬರು ಎರಡೂವರೆ ಎಕರೆ ಪ್ರದೇಶದಲ್ಲಿ ಬೆಳೆಸಿದ್ದ ಪೇರಲ ಮರಗಳನ್ನು ನಾಶಪಡಿಸುತ್ತಿದ್ದಾರೆ.

    ಗುತ್ತಲ ಹೋಬಳಿಯ ಅಕ್ಕೂರ ಗ್ರಾಮದ ರೈತ ದಶರಥಗೌಡ ಮರಿಗೌಡ್ರ ಹಾಗೂ ಅವರ ಸಹೋದರನ ಜಮೀನಿನಲ್ಲಿ ಫಸಲು ನೀಡುತ್ತಿದ್ದ ನೂರಾರು ಪೇರಲ ಮರಗಳನ್ನು ಕಡಿಯುತ್ತಿದ್ದಾರೆ. ರೈತ ದಶರಥಗೌಡ ಅವರು ಕಳೆದ 20 ವರ್ಷಗಳಿಂದ ಪೇರಲ ಬೆಳೆದು ಜೀವನ ಸಾಗಿಸುತ್ತಿದ್ದರು. 2019ರಿಂದ ಇಲ್ಲಿಯವರೆಗೆ ಪ್ರವಾಹ ಹಾಗೂ ಕರೊನಾದಿಂದಾಗಿ ನಷ್ಟ ಅನುಭವಿಸಿ ಅನಿವಾರ್ಯವಾಗಿ ಪೇರಲ ಮರಗಳಿಗೆ ಕೊಡಲಿ ಪೆಟ್ಟು ನೀಡುತ್ತಿದ್ದಾರೆ.

    ವರದಾ ನದಿಯ ತಟದಲ್ಲಿ ಬರುವ ಹೊಸರಿತ್ತಿ, ಅಕ್ಕೂರ, ಮರಡೂರ, ಕೆಸರಳ್ಳಿ, ಬೆಳವಿಗಿ, ನೀರಲಗಿ, ಹಾಲಗಿ ಮರೋಳ ಸೇರಿ ವಿವಿಧ ಗ್ರಾಮಗಳಲ್ಲಿ ಪೇರಲ ಪ್ರಮುಖ ಬೆಳೆಯಾಗಿದೆ. ಈ ಭಾಗದ ಹಣ್ಣುಗಳಿಗೆ ಹೆಚ್ಚು ಬೇಡಿಕೆ ಇದ್ದರೂ ಮಾರಾಟಗಾರರು ರೈತರಿಂದ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಆರ್. ಶಂಕರ ಅವರು ತೋಟಗಾರಿಕೆ ಸಚಿವರಿದ್ದು, ತೋಟಗಾರಿಕೆ ಬೆಳೆಗಾರರಿಗೆ ಉತ್ತೇಜನ ನೀಡಬೇಕು ಎಂಬ ಆಗ್ರಹ ರೈತರದು.

    ಬೆಳೆ ನಷ್ಟವಾದ ಬಗ್ಗೆ ಆಪ್​ನಲ್ಲಿ ನಮೂದಿಸಿದ್ದರೆ ಪರಿಹಾರ ದೊರೆಯುತ್ತದೆ. ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ರೈತರ ಹಿತ ಕಾಪಾಡಲು ತೋಟಗಾರಿಕೆ ಇಲಾಖೆ ಇದೆ.

    | ಬಿ.ಎನ್. ಬರೇಗಾರ ತೋಟಗಾರಿಕೆ ಇಲಾಖೆ, ಸಹಾಯಕ ನಿರ್ದೇಶಕ ಹಾವೇರಿ

    ಬೆಳೆದ ಪೇರಲ ಹಣ್ಣು ಮಣ್ಣು ಪಾಲಾಗುತ್ತಿವೆ. ಹಣ್ಣುಗಳನ್ನು ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ. ಮೂರು ವರ್ಷಗಳಿಂದ ನಷ್ಟ ಅನುಭವಿಸಿರುವೆ. ಇಷ್ಟು ವರ್ಷ ಬೆಳೆಸಿರುವೆ. ಕಷ್ಟಪಟ್ಟ ದುಡಿದರೂ ಲಾಭ ಸಿಗುತ್ತಿಲ್ಲ ಆದ್ದರಿಂದ ಒಲ್ಲದ ಮನಸ್ಸಿನಿಂದ ನಾಶಪಡಿಸುತ್ತಿರುವೆ. ಸರ್ಕಾರ ನಮಗೆ ಸಹಾಯ ಮಾಡಬೇಕು.

    | ದಶರಥಗೌಡ ಮರಿಗೌಡ್ರ

    ಅಕ್ಕೂರ ಗ್ರಾಮದ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts