More

    ಗುತ್ತಲ್ ಕಾಲೇಜಿನಲ್ಲಿ ರಾಷ್ಟ್ರೀಯ ಆಯುರ್ವೇದಿಕ್ ದಿನಾಚರಣೆ

    ಧಾರವಾಡ: ನಗರದ ಸಿ.ಬಿ. ಗುತ್ತಲ್ ಆಯುರ್ವೇದಿಕ್ ಮಹಾವಿದ್ಯಾಲಯದಲ್ಲಿ ಶುಕ್ರವಾರ ರಾಷ್ಟ್ರೀಯ ಆಯುರ್ವೇದಿಕ್ ದಿನ ಆಚರಿಸಲಾಯಿತು.
    ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಅಧ್ಯಕ್ಷ ಹಾಗೂ ಮಾಜಿ ಮೇಯರ್ ಈರೇಶ ಅಂಚಟಗೇರಿ ಕಾರ್ಯಕ್ರಮ ಉದ್ಘಾಟಿಸಿದರು. ವೇಳೆ ಮಾತನಾಡಿದ ಅವರು, ಇಂದು ದೇವತೆಗಳ ವೈದ್ಯ ಹಾಗೂ ಎಲ್ಲರಿಗೂ ಆರೋಗ್ಯದ ವರ ನೀಡುವ ಭಗವಾನ್ ಧನ್ವಂತರಿಯ ಆರಾಧನೆಯ ದಿನ. ಈ ದಿನವನ್ನು ಧನ್‌ತೇರಸ್ ದಿನ ಎಂದೂ ಕರೆಯಲಾಗುತ್ತದೆ. ಸಂಪತ್ತನ್ನು ನೀಡುವ ಲಕ್ಷ್ಮೀಯ ಜೊತೆಗೆ ಆರೋಗ್ಯವನ್ನೂ ನೀಡುವ ಧನ್ವಂತರಿಯನ್ನು ಪೂಜಿಸುವ ಸಂಪ್ರದಾಯವಿದೆ. ‘ಧನ್ವಂತರಿ ಹಾಗೂ ಧನ್‌ತೇರಸ್‌ನ ಶುಭ ದಿನದಂದು ನಾಡಿನ ಜನತೆಗೆ ಆಯುರಾರೋಗ್ಯದ ಜೊತೆಗೆ ಸಂಪತ್ತನ್ನೂ ಕರುಣಿಸಲಿ ಎಂದು ಆಶಿಸಿದರು.
    ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಟಿ. ಹೊಂಬಳ, ಪ್ರಾಧ್ಯಾಪಕರಾದ ಡಾ. ಯಶೋಧಾ, ಡಾ. ವಿ.ಸಿ. ಹಿರೇಮಠ, ಡಾ. ಆರ್.ಸಿ. ಕುಂದಗೋಳ ಹಾಗೂ ಕಾಲೇಜು ವಿದ್ಯಾರ್ಥಿಗಳು, ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts