More

    ಅಕಾಲಿಕ ಮಳೆಗೆ ರೈತರ ಅಪಾರ ಬೆಳೆಹಾನಿ

    ಯಾದಗಿರಿ: ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಗೆ ಗ್ರಾಮೀಣ ಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆಹಾನಿ ಸಂಭವಿಸಿದ್ದು, ರೈತಾಪಿ ವರ್ಗ ಕಂಗಾಲಾಗುವಂತೆ ಮಾಡಿದೆ.

    ಶುಕ್ರವಾರ ಹಾಗೂ ಶನಿವಾರ ಬೆಳಗಿನ ಜಾವ ಆಲಿಕಲ್ಲು ಸಹಿತ ಮಳೆಯಾದ್ದರಿಂದ ರಸ್ತೆ ಬದಿಯಲ್ಲಿನ ಬೃಹತ್ ಗಾತ್ರದ ಮರಗಳು ಧರೆಗುರುಳಿದ್ದು, ಅಲ್ಲಲ್ಲಿ ವಿದ್ಯುತ್ ಕಂಬಗಳು ಬಾಗಿವೆ. ಈ ಬಾರಿ ಫೆಬ್ರುವರಿ ತಿಂಗಳಿನಿಂದಲೇ ಬಿಸಿಲಿನ ಝಳ ಆರಂಭಗೊಂಡಿದ್ದರಿಂದ ಜನತೆ ಮುಂದಿನ ಮೂರ್ನಾಲ್ಕು ತಿಂಗಳು ಬೇಸಿಗೆ ಕಳೆಯುವುದು ಹೇಗೆ ಎಂಬ ಚಿಂತೆಯಲ್ಲಿದ್ದರು. ಆದರೆ ಎರಡು ದಿನಗಳಿಂದ ಮಳೆ ಸುರಿಯುತ್ತಿರುವ ಕಾರಣ ವಾತಾವರಣದಲ್ಲಿ ತಂಪನೆ ಅನುಭೂತಿ ವ್ಯಕ್ತವಾಗಿದೆ.

    ಬಿರುಗಾಳಿ ಮಿಶ್ರಿತ ಮಳೆಗೆ ಜಿಲ್ಲೆಯ ಶಹಾಪುರ ಹಾಗೂ ವಡಿಗೇರಾ ಭಾಗದಲ್ಲಿನ ಹಲವು ಗ್ರಾಮಗಳಲ್ಲಿನ ಭತ್ತದ ಗದ್ದೆಗಳು ಜಲಾವೃತಗೊಂಡಿವೆ. ಇದರಿಂದ ಲಕ್ಷಾಂತರ ರೂ.ಸಾಲ ಮಾಡಿ ಬೆಳೆದಿದ್ದ ಅನ್ನದಾತರು ಆತಂಕದಲ್ಲಿದ್ದಾರೆ. ಬೆಳಗ್ಗೆ 3 ಗಂಟೆಯಿಂದ ಸತತ ಐದಾರು ತಾಸು ಮಳೆಯಾದ ಪರಿಣಾಮ ತಗ್ಗು ಪ್ರದೇಶದಲ್ಲಿ ನೀರು ನಿಂತಿದೆ. ಶೇಂಗಾ, ಸಜ್ಜೆ ಹಾಗೂ ಕೆಲವು ಭಾಗದಲ್ಲಿ ರಾಶಿ ಮಾಡಿದ್ದ ಜೋಳ ಜಮೀನಿನಲ್ಲಿ ಬಿಟ್ಟ ಕಾರಣ ನೀರು ಪಾಲಾಗಿದೆ.

    ಅಲ್ಲದೆ ಸುರಪುರ ತಾಲೂಕಿನ ಅಲ್ಲಲ್ಲಿ ಬ್ಯಾಡಗಿ ಮೆಣಸಿನಕಾಯಿ ಸಧ್ಯ ರಾಶಿ ಹಂತದಲ್ಲಿದ್ದು, ಜಮೀನಿನಲ್ಲಿ ಒಣಗಿಸಲು ಬಿಡಲಾಗಿತ್ತು. ಮಳೆಯಿಂದ ನೀರು ಪಾಲಾಗಿದೆ. ಶಹಾಪುರ ನಗರದ ಹಳಿಸಗರ ಸೀಮಾಂತರದ ಸಂಗಮೇಶ್ವರ ನರ್ಸರಿ ಆಲಿಕಲ್ಲು ಮಳೆುಂದಾಗಿ ಸುಮಾರು 6 ಎಕರೆ ಜಮೀನಿನಲ್ಲಿ ಲಕ್ಷಾಂತರ ರೂ.ಖಚರ್ು ಮಾಡಿ ಹಾಕಲಾಗಿದ್ದ ನೆಟ್ ಹಾಗೂ ಸ್ಪಿಂಕ್ಲರ್ ಸೇರಿದಂತೆ ಹನಿ ನೀರಾವರಿ ವ್ಯವಸ್ಥೆ ಪೂರ್ಣ ಹಾನಿಗೊಳಗಾಗಿದೆ. ಅಲ್ಲದೆ, ಟೊಮ್ಯಾಟೊ, ಗೋಬಿ, ಬೀನ್ಸ್ ಸಸಿಗಳು ಸಹ ಬಿರುಗಾಳಿ ಮಳೆಗೆ ಹಾಳಾಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts