More

    ಅಂತಾರಾಜ್ಯ ವಂಚಕರ ಜಾಲ ಪತ್ತೆ

    ಹುಬ್ಬಳ್ಳಿ: ಇಂಟಿಗ್ರೆಟೆಡ್ ಸಾಫ್ಟ್​ವೇರ್ ಚಿಪ್ ಬಳಸಿ ಪೆಟ್ರೋಲ್ ಬಂಕ್​ಗಳಲ್ಲಿ ವಾಹನಗಳಿಗೆ ನಿಗದಿಗಿಂತ ಕಡಿಮೆ ಇಂಧನ ತುಂಬಿಸಿ ವಂಚನೆಗೆ ನೆರವಾಗುತ್ತಿದ್ದ ಅಂತಾರಾಜ್ಯ ಜಾಲವನ್ನು ಆಂಧ್ರಪ್ರದೇಶ ಸೈಬರಾಬಾದ ಪೊಲೀಸರು ಭೇದಿಸಿದ್ದಾರೆ.

    ಈ ವಂಚಕರ ತಂಡ ದೇಶಾದ್ಯಂತ ತಮ್ಮ ಜಾಲ ಹರಡಿದ್ದು, ಇಂಟಿಗ್ರೆಟೆಡ್ ಚಿಪ್ (ಐಸಿ) ಮೂಲಕ ಪೆಟ್ರೋಲ್ ಬಂಕ್​ಗಳಲ್ಲಿನ ಇಂಧನ ಸುರಿಯುವ ಯಂತ್ರಗಳಲ್ಲಿ ಅಳವಡಿಸಿ ಡಿಸ್​ಪ್ಲೆಯಲ್ಲಿ ನಿಗದಿಗಿಂತ ಕಡಿಮೆ ಇಂಧನ ಪೂರೈಸುವ ಚಾಲಾಕಿ ವ್ಯವಸ್ಥೆ ಮಾಡಿ ಗ್ರಾಹಕರಿಗೆ ವಂಚಿಸಲಾಗುತ್ತಿತ್ತು.

    ಆಂಧ್ರಪ್ರದೇಶದ ಸೈಬರಾಬಾದ್ ಪೊಲೀಸ್ ಕಮಿಷನರ್ ಹುಬ್ಬಳ್ಳಿ ಮೂಲದ ಐಪಿಎಸ್ ಅಧಿಕಾರಿ ವಿ.ಸಿ. ಸಜ್ಜನರ ಅವರ ಮಾರ್ಗದರ್ಶನದಲ್ಲಿ ಅಲ್ಲಿನ ಟಿಎಸ್ ಪೊಲೀಸ್ ಹಾಗೂ ಕಂಟ್ರೋಲರ್ ಆಫ್ ಲೀಗಲ್ ಮೆಟರೊಲಾಜಿ ವಿಭಾಗ ಹಾಗೂ ಆಂಧ್ರ ಪ್ರದೇಶ ಪೊಲೀಸ್ ಮತ್ತು ಲೀಗಲ್ ಮೆಟರೊಲಾಜಿ ವಿಭಾಗದಿಂದ ಜಂಟಿಯಾಗಿ ದಾಳಿ ನಡೆಸಿ ವಂಚಕರ ಜಾಲ ಪತ್ತೆ ಹಚ್ಚಲಾಗಿದೆ.

    ಪೆಟ್ರೋಲ್ ಬಂಕ್ ಮಾಲೀಕರೂ ಸಹ ಈ ತಂಡ ಸೇರಿಕೊಂಡು ಈ ಕುಕೃತ್ಯದಲ್ಲಿ ತೊಡಗಿದ್ದರು ಎನ್ನಲಾಗಿದೆ.

    ಅಂತಾರಾಜ್ಯ ವಂಚಕರ ಜಾಲದ ಪ್ರಮುಖ ಯಲ್ಲೂರಿನ ಸುಭಾನಿ ಬಾಷಾ ಎಂಬಾತನನ್ನು ಬಂಧಿಸಿ ಆತನಿಂದ 14 ಐಸಿ, ಎಂಟು ಡಿಸ್​ಪ್ಲೆ, ಮೂರು ಜಿಬಿಆರ್ ಕೇಬಲ್, ಒಂದು ಮದರ್​ಬೋರ್ಡ್, ಒಂದು ಕಾರು ವಶಪಡಿಸಿಕೊಳ್ಳಲಾಗಿದೆ.

    ಅಲ್ಲದೆ, ಬಾಜಿ ಬಾಬಾ, ಮದಸುಗುರಿ ಶಂಕರ, ಇಪ್ಪಿಲಿ ಮಲ್ಲೇಶ್ವರ ಹಾಗೂ ಪೆಟ್ರೋಲ್ ಬಂಕ್ ಮಾಲೀಕರನ್ನು ವಶಕ್ಕೆ ಪಡೆಯಲಾಗಿದ್ದು, ಮುಂದಿನ ವಿಚಾರಣೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಕೆಲವರು ತಲೆ ಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ಸಜ್ಜನರ ತಿಳಿಸಿದ್ದಾರೆ.

    ಪೆಟ್ರೋಲ್ ಬಂಕ್​ಗಳಲ್ಲಿ ಇಂಧನ ತುಂಬಿಸುವಾಗ ವಾಹನ ಮಾಲೀಕರು ಎಚ್ಚರಿಕೆ ವಹಿಸಬೇಕು. ಸಂಶಯ ಬಂದರೆ ಅಳತೆ ಮಾಪನಗಳ ಮೂಲಕ ಪರೀಕ್ಷಿಸಬೇಕು ಎಂದು ಸಜ್ಜನರ ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts