More

    ಅಂಗನವಾಡಿ, ಆಶಾ ಕಾರ್ಯಕರ್ತೆಯರ ದುಡಿಮೆಗೆ ಸಿಗುತ್ತಿಲ್ಲ ತಕ್ಕ ಪ್ರತಿಫಲ: ಶಾಸಕ ಹರತಾಳು ಹಾಲಪ್ಪ

    ರಿಪ್ಪನ್‌ಪೇಟೆ: ತಮ್ಮ ಮಕ್ಕಳ ಜತೆ ಇತರರ ಮಕ್ಕಳ ಸೇವೆಗೆ ಶ್ರಮಿಸುವ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಶ್ರಮ ಶ್ಲಾಘನೀಯ. ಆದರೆ ಅವರಿಗೆ ದುಡಿಮೆಗೆ ತಕ್ಕ ಪ್ರತಿಲ ಸಿಗುತ್ತಿಲ್ಲ. ಇತರರಂತೆ ಅವರೂ ಸ್ವಾವಲಂಬಿ ಬದುಕು ಸಾಗಿಸಲು ವೇತನ ಹೆಚ್ಚಳದ ಕುರಿತು ಸದನದಲ್ಲಿ ಮಾತನಾಡುತ್ತೇವೆ ಎಂದು ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು.
    ಹರತಾಳಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾಗರ ಕ್ಷೇತ್ರ ವ್ಯಾಪ್ತಿಯ ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಅಭಿನಂದನಾ ಸಮಾರಂಭವನ್ನು ಶನಿವಾರ ಉದ್ಘಾಟಿಸಿ ಮಾತನಾಡಿ, ಕನಿಷ್ಠ ವೇತನಕ್ಕೆ ದುಡಿಯುವ ಮಹಿಳೆಯರಿಂದ ಸರ್ಕಾರ ಬೇಕಾದಷ್ಟು ಕೆಲಸ ಮಾಡಿಸಿಕೊಳ್ಳುತ್ತಿವೆ. ಕಾರ್ಯಕರ್ತೆಯರು ಪ್ರಾಮಾಣಿಕವಾಗಿ ದುಡಿಯುತ್ತಾರೆ. ಕರೊನಾ ಸಂದರ್ಭದಲ್ಲಿ ನಿಮ್ಮ ಸೇವೆಯನ್ನು ದೇಶವೇ ಗಮನಿಸಿದೆ. ಆದರೆ ಸರ್ಕಾರ ನೀಡುವ ವೇತನ ಅರೆಹೊಟ್ಟೆಗೂ ಸಾಲುವುದಿಲ್ಲ. ಬೆಂಗಳೂರಿನಲ್ಲಿ ಹಲವು ಬೇಡಿಕೆಯನ್ನಿಟ್ಟು ಕಾರ್ಯಕರ್ತೆಯರು ಧರಣಿ ನಡೆಸಿದಾಗ ಸಚಿವ ಹಾಲಪ್ಪ ಆಚಾರ್ ಸ್ಥಳಕ್ಕೆ ಕರೆಯಿಸಿ ತಾತ್ಕಾಲಿಕ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಿಸಿದ್ದೇನೆ ಎಂದರು. ಕಾರ್ಯಕ್ರಮದಲ್ಲಿ ಕಾರ್ಯಕರ್ತೆಯರಿಗೆ ಸಿಹಿ, ಸೀರೆ ಹಂಚಿದರು.
    ಕ್ರಿಕೆಟ್ ಆಡಿಸಲು ಎಂಎಲ್‌ಎ ಆಗಬೇಕಾಗಿಲ್ಲ:
    ಕೆಲವರು ನಾನು ಕ್ರಿಕೆಟ್ ಆಡಿಸುತ್ತೇನೆ, ಬೇರೊಬ್ಬರ ಹೆಗಲ ಮೇಲೆ ಕೈ ಹಾಕಿ ಪ್ರೀತಿಸುತ್ತೇನೆ ಎಂದು ಹೇಳಿಕೊಂಡು ತಿರುಗುತ್ತಾರೆ. ಇವರಿಗೆಲ್ಲ ಜನಪ್ರತಿನಿಧಿಯ ಕರ್ತವ್ಯ, ಜವಾಬ್ದಾರಿಗಳ ಗಂಧಗಾಳಿ ಗೊತ್ತಿಲ್ಲ ಎಂದು ಕಾಣುತ್ತದೆ. ಚುನಾಯಿತ ಪ್ರತಿನಿಧಿಯಾಗುವುದು ಜನರ ಕೆಲಸ ಮಾಡಲು ಹೊರತು ಕಾಲಹರಣ ಮಾಡುವುದಕ್ಕಲ್ಲ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ವಿರುದ್ಧ ಹಾಲಪ್ಪ ವ್ಯಂಗವಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts