More

    ಅಂಗಡಿಕಾರರಿಂದಲೇ ಸ್ವಚ್ಛತೆ ಕಾರ್ಯ

    ಮುಂಡಗೋಡ: ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡದ ಅಂಗಡಿಗಳಿಗೆ ತಹಸೀಲ್ದಾರ್ ಶ್ರೀಧರ ಮುಂದಲಮನಿ ನೇತೃತ್ವದಲ್ಲಿ ಪಟ್ಟಣ ಪಂಚಾಯಿತಿ ಸಿಬ್ಬಂದಿ ಸೋಮವಾರ ದಾಳಿ ನಡೆಸಿ ಅಂಗಡಿಕಾರರಿಂದಲೇ ಸ್ವಚ್ಛಗೊಳಿಸಿ, 2500 ರೂ. ದಂಡ ವಿಧಿಸಿದರು.

    ಈ ಹಿಂದೆ ಹಲವು ಬಾರಿ ತಹಸೀಲ್ದಾರ್ ಶ್ರೀಧರ ಮುಂದಲಮನಿ ಅವರು ವರ್ತಕರ ಸಭೆ ನಡೆಸಿ ಅಂಗಡಿಗಳ ಮುಂದೆ ಸ್ವಚ್ಛತೆ ಕಾಪಾಡಲು ಮತ್ತು ಮಾಸ್ಕ್ ಧರಿಸುವಂತೆ ಅಂಗಡಿಕಾರರಿಗೆ ಸೂಚಿಸಿದ್ದರು. ಆದರೆ, ಪಟ್ಟಣದ ಹಲವು ಪಾನ್ ಅಂಗಡಿ, ಫಾಸ್ಟ್ ಫುಡ್ ಅಂಗಡಿ, ಹೋಟೆಲ್ ಮತ್ತು ಇತರ ಅಂಗಡಿಗಳ ಮುಂದೆ ಎಲ್ಲೆಂದರಲ್ಲಿ ಉಗುಳಿ ಗಲೀಜು ಮಾಡುತ್ತಿದ್ದರು. ಈ ಬಗ್ಗೆ ಅನೇಕ ದೂರುಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿದರು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಂಗನಬಸಯ್ಯ, ರಮೇಶ ಭೋವಿ ಇತರರಿದ್ದರು.

    ಹೊರ ಜಿಲ್ಲೆಯಿಂದ ಬಂದವರಿಗೆ ಆರೋಗ್ಯ ತಪಾಸಣೆ
    ಮುಂಡಗೋಡ:
    ಪಟ್ಟಣಕ್ಕೆ ಸೋಮವಾರ ಹೊರ ಜಿಲ್ಲೆಯಿಂದ ಬಂದ ಯುವಕನನ್ನು ಇಲ್ಲಿನ ಪೊಲೀಸರು ಆರೋಗ್ಯ ತಪಾಸಣೆಗೆ ಕಳುಹಿಸಿದ್ದಾರೆ. ತಾಲೂಕಿನಲ್ಲಿ ಈಗಾಗಲೇ ದಿನೇ ದಿನೆ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ತಾಲೂಕಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಯುವಕನೊಬ್ಬ ಗದಗ ಜಿಲ್ಲೆಯ ಲಕ್ಷೆ್ಮೕಶ್ವರದಿಂದ ಬಂದು ತಾಲೂಕಿನ ಮೈನಳ್ಳಿ ಗ್ರಾಮಕ್ಕೆ ತೆರಳುತ್ತಿದ್ದ. ಪಟ್ಟಣದ ಬನ್ನಿಕಟ್ಟಿ ಬಸ್ ನಿಲ್ದಾಣದಲ್ಲಿ ನಿಂತಿದ್ದ ಈತನನ್ನು ಇಲ್ಲಿನ ಎಎಸ್​ಐ ಕೆ.ಎನ್. ಘಟಕಾಂಬ್ಳೆ ಮತ್ತು ಸಿಬ್ಬಂದಿ ವೆಂಕಟೇಶ ಕೆ. ಅವರು ವಿಚಾರಿಸಿದರು. ಆರೋಗ್ಯ ತಪಾಸಣೆ ಮಾಡಿಸದೇ ಹಾಗೆಯೇ ಹೋಗುತ್ತಿರುವುದಾಗಿ ಯುವಕ ತಿಳಿಸಿದ. ಹೀಗಾಗಿ ಪೊಲೀಸರು ಯುವಕನ್ನು ತಪಾಸಣೆಗಾಗಿ ತಾಲೂಕು ಆಸ್ಪತ್ರೆಗೆ ಕಳುಹಿಸಿದರು. ಇತ್ತೀಚೆಗೆ ತಾಲೂಕಿಗೆ ಹೊರ ಜಿಲ್ಲೆ ಹಾಗೂ ಬೆಂಗಳೂರಿನಿಂದ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅವರಲ್ಲಿ ಬೆಂಗಳೂರಿನಿಂದ ಬಂದವರಲ್ಲಿ ಪಾಸಿಟಿವ್ ಪ್ರಕರಣಗಳು ಹೆಚ್ಚು ಕಂಡು ಬಂದಿವೆ. ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿನ ಕೋವಿಡ್-19 ಕಣ್ಗಾವಲು ಸಮಿತಿ ಹೆಚ್ಚಿನ ನಿಗಾ ವಹಿಸಬೇಕಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts