More

    ಮನೆ ಬಾಗಿಲಿಗೆ ಮದ್ಯ ಪೂರೈಸಲು ಆಸಕ್ತಿ ವಹಿಸಿದ ಜೊಮ್ಯಾಟೋ

    ನವದೆಹಲಿ: ಭಾರತದ ಪ್ರಮುಖ ಆಹಾರ ಪೂರೈಕೆ ಕಂಪನಿ ಜೊಮ್ಯಾಟೋ ಈಗ ಮನೆ ಬಾಗಿಲಿಗೆ ಮದ್ಯ ತಲುಪಿಸಲು ಆಸಕ್ತಿ ವಹಿಸಿದೆ. ಆದರೆ ಅಧಿಕೃತ ಒಪ್ಪಿಗೆ ಪಡೆಯಲು ಪ್ರಯತ್ನಿಸುತ್ತಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
    ಲಾಕ್ ಡೌನ್ ಅವಧಿಯಲ್ಲೂ ಮದ್ಯ ಮಾರಾಟ ಮರು ಆರಂಭವಾದ ನಂತರ ಮದ್ಯದಂಗಡಿಗಳತ್ತ ಜನರು ಸಾಗರೋಪಾದಿಯಲ್ಲಿ ಲಗ್ಗೆ ಇಡುತ್ತಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ಸರ್ಕಾರದ ನಿಯಮವನ್ನೂ ಉಲ್ಲಂಘಿಸಿ ಪೊಲೀಸರಿಂದ ಲಾಠಿ ಏಟು ತಿನ್ನುತ್ತಿದ್ದಾರೆ. ಮದ್ಯದಂಗಡಿಗಳ ಮುಂದೆ ಮಿತಿಮೀರಿದ ಜನಸಂದಣಿಯನ್ನು ನಿಯಂತ್ರಿಸಲು ದೆಹಲಿ ಸರ್ಕಾರ ಚಿಲ್ಲರೆ ಆಲ್ಕೋಹಾಲ್ ಬೆಲೆಯ ಮೇಲೆ ಶೇ 70 ರಷ್ಟು ವಿಶೇಷ ಕರೊನಾ ಸುಂಕ ವಿಧಿಸಿತು. ಜನಸ್ತೋಮಕ್ಕೆ ಬೆರಗಾದ ಮುಂಬೈ, ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ನೀಡಿದ ಎರಡೇ ದಿನದಲ್ಲಿ ಅವುಗಳನ್ನು ಮುಚ್ಚಿಸಿತು.

    ಇದನ್ನೂ ಓದಿ: ಬಾಕ್ಸಿಂಗ್​ನಲ್ಲಿ ಯುವತಿಗೆ ಎದುರಾಳಿಯಾಗಿದ್ಯಾರು? ಫಲಿತಾಂಶವೇನು ಗೊತ್ತೆ?

    ಇಷ್ಟಾದರೂ ಎಲ್ಲೆಲ್ಲೂ ಮದ್ಯಪ್ರಿಯರನ್ನು ಹದ್ದುಬಸ್ತಿನಲ್ಲಿಡಲು ಸಾಧ್ಯವಾಗುತ್ತಿಲ್ಲ. ಕಾರಣ ಮದ್ಯವನ್ನು ಮನೆ ಬಾಗಿಲಿಗೆ ಒಯ್ದುಕೊಡುವ ವ್ಯವಸ್ಥೆಯಾದರೆ ಸೂಕ್ತ ಎನ್ನುವ ಮಾತುಗಳು ಅಲ್ಲಲ್ಲಿ ಕೇಳಿಬರುತ್ತಿವೆ. ಈ ಮಧ್ಯೆಯೇ ಜೊಮ್ಯಾಟೋ ಮದ್ಯವನ್ನು ಗ್ರಾಹಕರ ಮನೆ ಬಾಗಿಲಿಗೆ ಪೂರೈಸಲು ಆಸಕ್ತಿ ವಹಿಸಿದೆ ಎನ್ನಲಾಗಿದೆ.
    ಪ್ರಸ್ತುತ ಭಾರತದಲ್ಲಿ, ಕಾನೂನಿನಲ್ಲಿ ಮನೆ ಬಾಗಿಲಿಗೆ ಮದ್ಯ ಪೂರೈಸುವುದಕ್ಕೆ ಅವಕಾಶವಿಲ್ಲ. ಆದರೆ ಅಂತಾರಾಷ್ಟ್ರೀಯ ಸ್ಪಿರಿಟ್ಸ್ ಆ್ಯಂಡ್ ವೈನ್ ಅಸೋಸಿಯೇಷನ್ ಆಫ್ ಇಂಡಿಯಾ (ಐಎಸ್​​ಡಬ್ಲುಎಐ) ಕೈಗಾರಿಕೆ ವಿಭಾಗ ಈ ಕುರಿತು ಬದಲಾವಣೆಗಾಗಿ ಲಾಬಿ ಮಾಡುತ್ತಿದೆ.
    ಇದೀಗ ಸೋಂಕು ಕಡಿಮೆ ಇರುವ ಪ್ರದೇಶಗಳಲ್ಲಿ ಮಾತ್ರ ಮದ್ಯ ಪೂರೈಸುವುದಾಗಿ ಐಎಸ್​​ಡಬ್ಲುಎಐಗೆ ಸಲ್ಲಿಸಿದ ಮನವಿಯಲ್ಲಿ ಜೊಮ್ಯಾಟೊ ತಿಳಿಸಿದೆ ಎನ್ನಲಾಗಿದೆ. ಆದರೆ ಈ ಕುರಿತು ಈ ಕಂಪನಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
    ಇನ್ನು, ಮನೆ ಬಾಗಿಲಿಗೆ ಮದ್ಯ ತಲುಪುವಂತಾದರೆ ಎಣ್ಣೆ ಅಂಗಡಿ ಮುಂದೆ ಜನ ಕ್ಯೂ ನಿಲ್ಲೋದನ್ನು ತಪ್ಪಿಸಬಹುದು. ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯನ್ನೂ ಸಾಧಿಸಬಹುದೆನ್ನುವ ಚರ್ಚೆ ಶುರುವಾಗಿದೆ. ಆದರೆ ಮನೆ ಬಾಗಿಲಿಗೆ ಮದ್ಯ ಪೂರೈಕೆಗೆ ಅಧಿಕೃತ ಅನುಮತಿ ದೊರೆಯಬೇಕಷ್ಟೇ. (ಏಜನ್ಸೀಸ್)

    ಕರೊನಾ ಅಟ್ಟಹಾಸದ ಮಧ್ಯದಲ್ಲೇ ಪ್ರವಾಹದ ರುದ್ರ ನರ್ತನ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts