More

    ಟ್ವಿಟ್ಟರ್​ನಲ್ಲಿ ಟ್ರೆಂಡಿಂಗ್ ಆದ ‘ಜೊಮ್ಯಾಟೊ ಡೆಲಿವರಿ ಬಾಯ್’; ಯುವಕನ ಬಗ್ಗೆ ಅನುಕಂಪ!

    ಬೆಂಗಳೂರು: ಜೊಮ್ಯಾಟೊ ಡೆಲಿವರಿ ಬಾಯ್​ ಒಬ್ಬನಿಂದ ಹಲ್ಲೆಯಾಗಿದ್ದಾಗಿ ಹೇಳಿ ಮಹಿಳೆಯೊಬ್ಬಳು ಪೊಲೀಸ್​ ಪ್ರಕರಣ ದಾಖಲಿಸಿರುವ ವಿಚಾರ ಗೊತ್ತೇ ಇದೆ. ಕಾಮರಾಜ್ ಎಂಬ ಡೆಲಿವರಿ ಬಾಯ್ ಮಹಿಳೆ ಮೇಲೆ ಹಲ್ಲೆ ಮಾಡಿದ್ದರ ಬಗ್ಗೆ ಸ್ವತಃ ಮಹಿಳೆ ಸೋಶಿಯಲ್ ಮೀಡಿಯಾಗಳಲ್ಲಿ ನಿನ್ನೆ ಅಳಲು ತೋಡಿಕೊಂಡಿದ್ದಳು.

    ಆದರೆ, ಇಂದು ಇದೇ ಡೆಲಿವರಿ ಬಾಯ್​ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅನುಕಂಪ ವ್ಯಕ್ತವಾಗಿದೆ. ಟ್ವಿಟ್ಟರ್​ನಲ್ಲಿ #zomatodeliveryboy ಟ್ರೆಂಡಿಂಗ್ ಆಗಿದೆ. ಇದುವರೆಗೆ 3558 ಟ್ವಿಟ್​ಗಳು ಹರಿದಿದ್ದು ಯುವಕನ ಬಗ್ಗೆ ಸಾಕಷ್ಟು ಅನುಕಂಪ ವ್ಯಕ್ತವಾಗಿದೆ.

    ನಿಜವಾದ ಸಂತ್ರಸ್ತ ಯಾರು? ಎಂದು ಪ್ರಶ್ನೆ ಮಾಡಿರುವ ನೆಟ್ಟಿಗರು, ಹಿತೇಶಾ ವಿರುದ್ಧ ಮೆಮ್​ಗಳನ್ನು ಬಿಟ್ಟು, ಟ್ರೋಲ್ ಮಾಡಿದ್ದಾರೆ. ಮೀ ಟೂ ಅಭಿಯಾನದಂತೆ, ಇಲ್ಲಿ ಕೂಡ ಮೆನ್​ ಟೂ ಅಭಿಯಾನ ಮಾಡಬೇಕಿದೆ ಎಂದು ಹೇಳಿದ್ದಾರೆ. ಹಿತೇಶಾ ನಾಟಕ ಮಾಡುತ್ತಿದ್ದಾಳೆ, ಕಾಮರಾಜ್ ಎಂಬ ಯುವಕ ಕಪ್ಪಗಿರುವುದನ್ನೇ ಬಂಡವಾಳ ಮಾಡಿಕೊಂಡು ನಾಟಕ ಮಾಡುತ್ತಿದ್ದಾಳೆ ಎಂದಿದ್ದಾರೆ. ಅಲ್ಲದೇ ಇನ್ನೂ ಕೆಲವರು ಕನ್ನಡ ಮಾತನಾಡದೇ ಮಹಿಳೆ ಯುವಕನ ಮುಂದೆ ದರ್ಪ ಮೆರದಿದ್ದಾಳೆ ಎಂದು ಆರೋಪಿಸಿದ್ದಾರೆ.

    ಕಾಮರಾಜ್ ಹೇಳಿದ್ದೇನು?: ಜೊಮ್ಯಾಟೋ ಡೆಲಿವರಿ ಬಾಯ್​ ಕಾಮರಾಜ್​ ವಿರುದ್ಧ ಹಿತೇಶಾ ಚಂದ್ರಾಣಿ ಹೆಸರಿನ ಇನ್​ಸ್ಟಾಗ್ರಾಂ ಇನ್​ಫ್ಲೂಯೆನ್ಸರ್​ ದೂರು ನೀಡಿದ್ದಳು. ಊಟ ತಂದು ಕೊಡುವುದು ಒಂದು ಗಂಟೆ ತಡವಾಗಿತ್ತು, ಅದಕ್ಕಾಗಿ ನಾನು ಸಿಬ್ಬಂದಿಯಿಂದ ಸ್ಪಷ್ಟನೆಗಾಗಿ ಕಾಯುತ್ತಿದ್ದೆ. ಆದರೆ ಅಷ್ಟರೊಳಗೆ ನನಗೆ ಬೈದು, ಮುಖಕ್ಕೆ ಪಂಚ್​ ಮಾಡಿ ಓಡಿ ಹೋಗಿದ್ದಾನೆ ಎಂದು ಆಕೆ ದೂರಿದ್ದಳು. ಮೂಗಿನಿಂದ ರಕ್ತ ಸುರಿಯುತ್ತಿರುವ ವಿಡಿಯೋವನ್ನೂ ಮಾಡಿ ಹರಿಬಿಟ್ಟಿದ್ದಳು. ಆದರೆ ಆ ಗಾಯ ಆಕೆಯೇ ಮಾಡಿಕೊಂಡಿದ್ದು ಎಂದು ಕಾಮರಾಜ್​ ಹೇಳಿದ್ದಾನೆ.

    ನಾನು 45-50 ನಿಮಿಷ ತಡವಾಗಿ ಹೋಗಿದ್ದೆ. ಹೋದ ತಕ್ಷಣ ಅವರ ಬಳಿ ಆ ವಿಚಾರವಾಗಿ ಕ್ಷಮೆ ಯಾಚಿಸಿದೆ. ಆದರೆ ಅದನ್ನು ಪರಿಗಣಿಸದ ಅವರು ಬೈಯಲಾರಂಭಿಸಿದರು. ರಸ್ತೆಯಲ್ಲಿ ಕಾಮಗಾರಿಗಳು ಆಗುತ್ತಿದ್ದರಿಂದಾಗಿ ತಡವಾಯಿತೆಂದು ತಿಳಿಸಲು ಪ್ರಯತ್ನಿಸಿದೆ. ಅವರು ಊಟವನ್ನು ನನ್ನಿಂದ ಪಡೆದುಕೊಂಡರು. ಆದರೆ ಊಟದ ಹಣವನ್ನು ಕೊಡಲು ನಿರಾಕರಿಸಿದರು. ಜೊಮ್ಯಾಟೋದವರು ಕೊನೆ ಕ್ಷಣದಲ್ಲಿ ಆರ್ಡರ್​ ಕ್ಯಾನ್ಸಲ್​ ಮಾಡಿದ್ದಾಗಿ ಹೇಳಿದರು. ಹಾಗಾದರೆ ಊಟ ವಾಪಾಸು ಕೊಡಿ ಎಂದು ಕೇಳಿದೆ. ಅದಕ್ಕೂ ಒಪ್ಪಲಿಲ್ಲ. ಅದಾದ ಮೇಲೆ ಅವರು ನನ್ನನ್ನು ಆಳು ಎಂದು ಕರೆದರು. ಹಿಂದಿಯಲ್ಲಿ ಬೈಯಲಾರಂಭಿಸಿದಳು. ಏನು ಬೇಕಾದರೂ ಮಾಡಿಕೋ ಹೋಗು ಎಂದು ಕೂಗಾಡಲಾರಂಭಿಸಿದರು ಎಂದು ಕಾಮರಾಜ್​ ಹೇಳಿದ್ದಾನೆ.

    ನಾನು ಎರಡು ವರ್ಷಗಳಿಂದ ಜೊಮ್ಯಾಟೋದಲ್ಲಿ ಕೆಲಸ ಮಾಡುತ್ತಿದ್ದೇನೆ. ಇಂತಹ ಗ್ರಾಹರನ್ನು ನಾನು ಹಿಂದೆಂದೂ ನೋಡಿರಲಿಲ್ಲ. ಇವರಿಂದ ನನಗೆ ದುಡ್ಡು ಸಿಗುವುದಿಲ್ಲ ಎನಿಸಿ ವಾಪಾಸು ಹೋಗಲೆಂದು ಲಿಫ್ಟ್​ ಬಳಿ ಹೊರಟೆ. ಆಗ ಆಕೆ ನನ್ನ ಮೇಲೆ ಚಪ್ಪಲಿ ಎಸೆದರು. ಅದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ನಾನು ಕೈ ಅಡ್ಡ ಹಿಡಿದೆ. ನನ್ನ ಕೈ ತೆಗೆದು ಹೊಡೆಯಲು ಬಂದರು, ಆಗ ನಾನೂ ನನ್ನ ರಕ್ಷಣೆ ಮಾಡಿಕೊಳ್ಳಬೇಕಾಗಿ ಬಂತು. ಆಗ ಅವರದ್ದೇ ಕೈ ಬೆರಳಿನಲ್ಲಿದ್ದ ಉಂಗುರ ಅವರ ಮೂಗಿಗೆ ತಾಕಿತು. ಅದರಿಂದ ಗಾಯವಾಗಿ ರಕ್ತ ಸುರಿಯಿತು. ಆ ಫೋಟೋ ನೋಡಿದ ಯಾರಿಗಾದರೂ ಅದು ಪಂಚ್​ನಿಂದ ಆದ ಗಾಯವಲ್ಲ ಎನ್ನುವುದು ತಿಳಿಯುತ್ತದೆ. ನಾನು ಉಂಗುರವನ್ನೂ ತೊಡುವುದಿಲ್ಲ ಎಂದು ಅವನು ಹೇಳಿಕೊಂಡಿದ್ದಾನೆ.

    ಇದನ್ನೂ ಓದಿ: ಶ್ರದ್ಧಾ ಕಪೂರ್​ ಹಾಕಿರುವ ಈ ಬಿಕಿನಿ ರೇಟ್ ಕೇಳಿದ್ರೆ ನೀವು ಹೌಹಾರೋದು ಗ್ಯಾರಂಟಿ!

    ನಾನು ಲಿಫ್ಟ್​ ಬಳಿ ಹೋಗಲು ಆ ಯುವತಿ ಬಿಡಲಿಲ್ಲ. ಅದಕ್ಕಾಗಿ ನಾನು ಮೆಟ್ಟಿಲಲ್ಲಿ ಓಡಿ ಬಂದೆ. ಅದಾದ ಮೇಲೆ ದೆಹಲಿಯ ಜೊಮ್ಯಾಟೋ ಸಪೋರ್ಟ್​ ಸಿಸ್ಟಮ್​ಗೆ ವಿಚಾರ ತಿಳಿಸಿದೆ. ಅವರು ಸಮಸ್ಯೆಯನ್ನು ಅರ್ಥ ಮಾಡಿಕೊಂಡು, ಸಹಾಯ ಮಾಡುವುದಾಗಿ ಹೇಳಿದರು. ಯುವತಿ ನನ್ನ ಮೇಲೆ ಮಾಡಿದ ದಾಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದನ್ನು ನೋಡಿದರೆ ಸರಿಯಾಗಿ ತಿಳಿದುಬರುತ್ತದೆ ಎಂದು ಹೇಳಿದ್ದಾನೆ.

    ಸಂಜೆ 6.30ರ ಸಮಯಕ್ಕೆ ಎಲೆಕ್ಟ್ರಾನಿಕ್​ ಸಿಟಿ ಪೊಲೀಸರು ವಿಚಾರಣೆಗೆ ಬರಲು ಹೇಳಿದ್ದರು. ಅಲ್ಲಿ ಸರಿಯಾಗಿ ಮಾಹಿತಿ ಪಡೆದಿದ್ದಾರೆ. ಆದರೆ ಈಗ ನನಗೆ ಕಾನೂನಾತ್ಮಕವಾಗಿ ಹೋರಾಡಲು 25 ಸಾವಿರ ರೂಪಾಯಿ ಹಣ ಖರ್ಚಾಗಲಿದೆ ಎಂದು ಕಾಮರಾಜ್​ ತನ್ನ ಅಳಲನ್ನು ತೋಡಿಕೊಂಡಿದ್ದಾರೆ.

    ಉಪನಗರ ರೈಲು ಮಾರ್ಗದ ಬದಿಯ ಜಾಗಕ್ಕೆ ಬಂಗಾರದ ಬೆಲೆ; ಭೂಮಿ ಮೌಲ್ಯಮಾಪನಕ್ಕೆ ಮುಂದಾದ ಕೆ-ರೈಡ್

    ‘ನಾನು ಹೊಡೆದೇ ಇಲ್ಲ, ಅವಳೇ ಚಪ್ಪಲಿಯಲ್ಲಿ ಹೊಡೆದಿದ್ದು.. ಹಿಂದಿಯಲ್ಲಿ ಬೈದಿದ್ದು..’ ಕಥೆಯನ್ನು ಬಿಚ್ಚಿಟ್ಟ ಡೆಲಿವರಿ ಬಾಯ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts