More

    ಪೆಟ್ರೋಲ್ ಸಿಗ್ತಿಲ್ಲ.. ಕುದುರೆ ಏರಿ ಹೊರಟ ಝೊಮ್ಯಾಟೊ ಡೆಲಿವರಿ ಬಾಯ್; ವಿಡಿಯೋ ವೈರಲ್

    ಬೆಂಗಳೂರು:  ನಾವು ಮನೆಯಲ್ಲಿ ಕುಳಿತು ನಮಗೆ ಬೇಕಾದ ಆಹಾರವನ್ನು ಆರ್ಡರ್ ಮಾಡುತ್ತಿದ್ದೇವೆ. ಬೆಳಿಗ್ಗೆ, ಮಧ್ಯಾಹ್ನ ಅಥವಾ ರಾತ್ರಿಯಾದರೂ ಫುಡ್ ಡೆಲಿವರಿ ಆ್ಯಪ್‌ಗಳ ಮೂಲಕ ಆಹಾರ ವಿತರಣೆ ಯಾವಾಗಲೂ ಲಭ್ಯವಿರುತ್ತದೆ. ಡೆಲಿವರಿ ಬಾಯ್ ಹೈದರಾಬಾದ್‌ನ ಜನನಿಬಿಡ ರಸ್ತೆಯಲ್ಲಿ ವಾಹನಗಳ ನಡುವೆ ಕುದುರೆ ಮೇಲೆ ಪಾರ್ಸೆಲ್ ಅನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿರುವುದು ಕಂಡುಬಂದಿದೆ.

    ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೀಟ್ ಆ್ಯಂಡ್ ರನ್ ಕಾಯ್ದೆ ವಿರೋಧಿಸಿ ಪೆಟ್ರೋಲ್ ಮತ್ತು ತೈಲ ಟ್ಯಾಂಕರ್ ಮಾಲೀಕರು ಹಾಗೂ ಡೈವರ್ಸ್ ದೇಶಾದ್ಯಂತ ಧರಣಿ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದ ಪೆಟ್ರೋಲ್ ಪೂರೈಕೆ ಸ್ಥಗಿತಗೊಂಡಿದೆ. ಹೈದರಾಬಾದ್‌ನ ಹಲವು ಪ್ರದೇಶಗಳಲ್ಲಿನ ಪೆಟ್ರೋಲ್ ಬಂಕ್‌ಗಳಲ್ಲಿ ನೋ ಸ್ಟಾಕ್ ಬೋರ್ಡ್‌ ಹಾಕಲಾಗಿದೆ. ವಾಹನ ಸವಾರರು ಕೆಲ ನಿಲ್ದಾಣಗಳಲ್ಲಿ ಪೆಟ್ರೋಲ್‌ಗಾಗಿ ಸಾಲುಗಟ್ಟಿ ನಿಂತಿದ್ದರು. ಇದರಿಂದಾಗಿ ಮಂಗಳವಾರ ಮಧ್ಯಾಹ್ನದಿಂದ ರಾತ್ರಿ ಬೆಳಗಾಗುವುದರೊಳಗೆ ನಗರದ ಹಲವು ಪೆಟ್ರೋಲ್ ಬಂಕ್ ಗಳಲ್ಲಿ ಸರತಿ ಸಾಲುಗಳು ಕಂಡು ಬಂದವು.

    ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್ ಕೊರತೆಯಿಂದ ಪ್ರತಿನಿತ್ಯ ಪ್ರಯಾಣಿಕರು ಮತ್ತು ಆಹಾರ ವಿತರಣಾ ಹುಡುಗರು ಪೆಟ್ರೋಲ್ ಬಂಕ್‌ಗಳಲ್ಲಿ ಗಂಟೆಗಟ್ಟಲೆ ಕಾಯಬೇಕಾಗಿದೆ. ಇನ್ನು ಕೆಲವು ಪ್ರದೇಶಗಳಲ್ಲಿ ಪೆಟ್ರೋಲ್ ಬಂಕ್‌ಗಳಲ್ಲಿ ಯಾವುದೇ ಫಲಕಗಳು ಕಾಣಿಸಲಿಲ್ಲ. ಆದ್ದರಿಂದ ಓಲ್ಡ್ ಬಸ್ತಿಯಲ್ಲಿನ ಝೊಮ್ಯಾಟೊ ಹುಡುಗರು ಕುದುರೆಗಳ ಮೇಲೆ ತೆರಳಿ ಆಹಾರ ವಿತರಿಸಿದರು.

    ಝೊಮ್ಯಾಟೊದ ಫುಡ್ ಡೆಲಿವರಿ ಬಾಯ್ ಕುದುರೆಯ ಮೇಲೆ ಆಹಾರ ವಿತರಿಸಲು ಹೋಗುತ್ತಿರುವಾಗ ಕೆಲವರು ವಿಡಿಯೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪೆಟ್ರೋಲ್ ಸಿಗ್ತಿಲ್ಲ.. ಕುದುರೆ ಏರಿ ಹೊರಟ ಝೊಮ್ಯಾಟೊ ಡೆಲಿವರಿ ಬಾಯ್; ವಿಡಿಯೋ ವೈರಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts